ಸ್ನೇಹಿತನ ಹೆಂಡತಿಗೆ ಮದುವೆಯಾಗುವುದಾಗಿ ರೇಪ್!
– ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ
ಕಾರ್ಕಳ: ಕೆಲಸಕ್ಕೆ ಹೋಗಿದವ ನಾಪತ್ತೆ
ಸುಳ್ಯ: ಹತ್ತನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ
NAMMUR EXPRESS NEWS
ಬಂಟ್ವಾಳ: ಮಹಿಳೆಯೋರ್ವಳನ್ನು ಮದುವೆಯಾಗುವುದಾಗಿ ನಂಬಿಸಿ, ಆ ಬಳಿಕ ನಿರಂತರವಾಗಿ ದೈಹಿಕ ಸಂಪರ್ಕ ಮಾಡಿ ಕೊನೆಗೆ ಕೊಲೆ ಬೆದರಿಕೆ ಹಾಕಿದ ಬಗ್ಗೆ ಮಹಿಳೆ ನೀಡಿದ ದೂರಿನಂತೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲೊರೆಟ್ರೊ ನಿವಾಸಿ ಅಬ್ದುಲ್ ಅಜೀಜ್ ಅವರ ಪತ್ನಿ ಅನೀಶಾ ಬಾನು(39) ಅವರಿಗೆ ನರಿಕೊಂಬು ನಿವಾಸಿ ತಸ್ಲಿಂ ಆರೀಫ ಅತ್ಯಾಚಾರ ಎಸಗುವುದರ ಜೊತೆಗೆ ಕೊಲೆ ಬೆದರಿಕೆ ಹಾಕಿರುತ್ತಾನೆ. ಆರೋಪಿ ತಸ್ಲಿಂ ಆರೀಫ ದೂರುದಾರ ಮಹಿಳೆ ಅನೀಶಾ ಬಾನು ಅವರ ಪತಿ ಅಬ್ದುಲ್ ಅಜೀಜ್ ಅವರ ಸ್ನೇಹಿತನೇ ಆಗಿದ್ದು, ಆಗಾಗ ಪತಿಯೊಂದಿಗೆ ಮನೆಗೆ ಬರುತ್ತಿದ್ದ ಎನ್ನಲಾಗಿದೆ. ಬಳಿಕ ಆರೋಪಿ ಹಾಗೂ ಅನೀಶಾ ಬಾನು ನಡುವೆ ಸಲುಗೆ ಉಂಟಾಗಿ ಮೊಬೈಲ್ ನಂಬರ್ ಪಡೆದು, ಗಂಡ ಕೆಲಸಕ್ಕೆ ಹೋದ ಸಮಯ ಮನೆಗೆ ಬರುತ್ತಿದ್ದ.
ಕೊನೆಗೆ ಸಲುಗೆ ಬರಬರುತ್ತಾ ದೈಹಿಕ ಸಂಪರ್ಕಕ್ಕೆ ಬಂದಾಗ ನಿನ್ನನ್ನು ಮದುವೆಯಾಗುತ್ತೇನೆ ಎಂದು ನಂಬಿಸಿ, ಸುಳ್ಳು ಹೇಳಿಕೊಂಡು ಹಲವಾರು ಬಾರಿ ದೈಹಿಕ ಸಂರ್ಪಕ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಸ್ನೇಹಿತ ಹಾಗೂ ಹೆಂಡತಿಯ ವಿಷಯ ತಿಳಿದ ಪತಿ ಅಬ್ದುಲ್ ಅಜೀಜ್ ಅವಳಿಂದ ದೂರಾಗಿದ್ದ. ಈಗ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ
ಕೆಲಸಕ್ಕೆ ತೆರಳಿದ್ದಾತ ಮನೆಗೆ ಬಾರದೆ ನಾಪತ್ತೆ
ಕಾರ್ಕಳ: ಕೆಲಸಕ್ಕೆಂದು ತೆರಳಿದ್ದಾತ ಮನೆಗೆ ಬಾರದೆ ಕಾಣೆಯಾದ ಘಟನೆ ನಂದಳಿಕೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಅಂಬಾಡಾಂ ಸಮೀಪದ ನಿವಾಸಿ ವಿಠಲ ಆಚಾರ್ಯ(56) ಕಾಣೆಯಾದವರು. ಡಿ.12ರಂದು ಬೆಳಗ್ಗೆ ಮನೆಯಿಂದ ಪಿಲಾರು ಗ್ರಾಮದ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಕೆಲಸಕ್ಕೆಂದು ಹೋಗಿದ್ದರು. 11ರ ತನಕ ಅಲ್ಲೇ ಇದ್ದ ಅವರು, ತನಗೆ ತುರ್ತಾಗಿ ಬೇರೆ ಕೆಲಸ ಇರುವುದಾಗಿ ಮಾಲೀಕರಲ್ಲಿ ತಿಳಿಸಿ ಹೋಗಿದ್ದರು. ಮನೆಗೂ ಬಾರದೆ ಸಂಬಂಧಿಕರ ಮನೆಗೂ ಹೋಗಿಲ್ಲ. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹತ್ತನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ!
ಸುಳ್ಯ: ಎಲಿಮಲೆ ಸರ್ಕಾರಿ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿ ಓದುತ್ತಿದ್ದ ಬಾಲಕ, ನೆಲ್ಲೂರು ಕೆಮ್ರಾಜೆ ಗ್ರಾಮದ ದಿ.ವಾಸುದೇವ ಎoಬುವರ ಪುತ್ರ ಶಮಂತ್ ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಶುಕ್ರವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಮನೆಯಿಂದ ಬಂದು ಶಾಲಾ ಆವರಣದ ಶೌಚಗೃಹದ ಹಿಂಬದಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತ ಕಳೆದ ವರ್ಷವೂ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಎನ್ನಲಾಗಿದೆ