ತೀರ್ಥಹಳ್ಳಿ ಕುವೆಂಪು ಶಾಲೆಯ ಅಭಿವೃದ್ಧಿ ಪರ್ವ!
– ಹೆಚ್ಚುವರಿ ಕೊಠಡಿ, ನವೀಕೃತ ಕಾಮಗಾರಿಗಳ ಉದ್ಘಾಟನೆ
– ಇತಿಹಾಸ ಹೊಂದಿರುವ ಶಾಲೆಗೆ ಹೊಸ ಕಳೆ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಮುಖ್ಯ ಬಸ್ ನಿಲ್ದಾಣ ಸಮೀಪ ಇರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಬಾಲಕರ (ಕುವೆಂಪು) ಶಾಲೆ,ತೀರ್ಥಹಳ್ಳಿ, ಹೆಚ್ಚುವರಿ ಕೊಠಡಿ ಉದ್ಘಾಟನೆ ಹಾಗೂ ನವೀಕೃತ ಕಾಮಗಾರಿಗಳ ಉದ್ಘಾಟನಾ ಸಮಾರಂಭ ಸೋಮವಾರ ನಡೆಯಿತು. ಶಾಲೆಯ ಹಲವು ಅಭಿವೃದ್ಧಿ ಕಾರ್ಯಗಳು ನಡೆದಿದ್ದು ಶಾಲೆಯಲ್ಲಿ ಮಕ್ಕಳ ಸಂಖ್ಯೆಯೂ ಹೆಚ್ಚಾಗಿದೆ. ಮಾಜಿ ಗೃಹ ಸಚಿವರು, ಶಾಸಕರಾದ ಆರಗ ಜ್ಞಾನೇಂದ್ರ ಅವರು ಸುಮಾರು 51.5 ಲಕ್ಷ ವೆಚ್ಚದ ಕಾಮಗಾರಿಯನ್ನು ಉದ್ಘಾಟನೆ ಮಾಡಿದರು.
ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಗಂಗಮ್ಮ,ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಗೀತಾ ರಮೇಶ್, ಉಪಾಧ್ಯಕ್ಷರಾದ ರೆಹಮತ್ ಉಲ್ಲಾ ಅಸಾದಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ. ಗಣಪತಿ, ಸದಸ್ಯರಾದ ಸಂದೇಶ್ ಜವಳಿ, ಜ್ಯೋತಿ ಗಣೇಶ್, ಸೊಪ್ಪುಗುಡ್ಡೆ ರಾಘವೇಂದ್ರ, ಕುವೆಂಪು ಪ್ರತಿಷ್ಠಾನ, ಕುಪ್ಪಳಿ ಅಧ್ಯಕ್ಷರಾದ ಕಡಿದಾಳ್ ಪ್ರಕಾಶ್, ತಹಸೀಲ್ದಾರ್ ಜಕ್ಕಣ್ಣ ಗೌಡರ್, ತಾಪಂ ಸಿಇಓ ಶೈಲಾ, ಶಿಕ್ಷಣಾಧಿಕಾರಿ ಗಣೇಶ್, ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿ ಶ್ರೀ ಕುರಿಯಾಕೋಸ್, ಅಣ್ಣಪ್ಪ ಹೆಚ್.ಕೆ. ಸಹಾಯಕ ಕಾರ್ಯಪಾಲಕ ಇಂಜಿನಿಯರ್, .ನಾಗರಾಜ್ ಜೆ. ಮುಖ್ಯ ಶಿಕ್ಷಕರು, ಭಾರತಿ ಕೆ. ಸಹ ಶಿಕ್ಷಕರು, ಹೆಚ್.ಎಸ್. ಅಭಿಲಾಷ್ ಕಿ.ಇಂ. ಪಂ.ರಾ.ಇಂ.ಉಪವಿಭಾಗ ತೀರ್ಥಹಳ್ಳಿ, ಸತೀಶ್ ಶೆಟ್ಟಿ, ಉಪಾಧ್ಯಕ್ಷರು, ಎಸ್.ಡಿ.ಎಂ.ಸಿ. ಸ.ಮಾ.ಹಿ.ಪ್ರಾ.ಬಾ (ಕುವೆಂಪು) ಶಾಲೆ ತೀರ್ಥಹಳ್ಳಿ, ಗೋಪಾಲಕೃಷ್ಣ, ಅಮರನಾಥ ಶೆಟ್ಟಿ ಸೇರಿ ಶಿಕ್ಷಕರು, ಪೋಷಕರು ಹಾಜರಿದ್ದರು.
ಇತಿಹಾಸ ಹೊಂದಿರುವ ಶಾಲೆಗೆ ಹೊಸ ಕಳೆ!
ತೀರ್ಥಹಳ್ಳಿ ಸರ್ಕಾರಿ ಶಾಲೆಗಳಲ್ಲಿ ಇತಿಹಾಸ ಹೊಂದಿರುವ ಈ ಶಾಲೆಗೆ ಈಗ ಹೊಸ ಕಳೆ ಬಂದಿದೆ. ಹೊಸ ಕಟ್ಟಡ, ಡಿಜಿಟಲ್ ಕ್ಲಾಸ್ ರೂಂ, ಹೊಸ ಕುರ್ಚಿ, ಬೆಂಚು, ಅಡುಗೆ ಕೋಣೆ ಹೀಗೆ ಅನೇಕ ಹೊಸ ಯೋಜನೆಗಳು ಆಗಿದೆ.