ಅಯ್ಯೋ…ನಿಲ್ಲುತ್ತಿದೆ ಮಕ್ಕಳ ಹೃದಯ…!
– ಹೃದಯಾಘಾತಕ್ಕೆ ಮತ್ತೊಬ್ಬ ವಿದ್ಯಾರ್ಥಿ ಬಲಿ
– ಮೂಡಿಗೆರೆ ಘಟನೆ ಬಳಿಕ ಉಡುಪಿಯಲ್ಲಿ ಬಾಲಕನಿಗೆ ಹಾರ್ಟ್ ಅಟ್ಯಾಕ್
NAMMUR EXPRESS NEWS
ಉಡುಪಿ: ರಾಜ್ಯದಲ್ಲಿ ಮಕ್ಕಳು, ಬಾಲಕರು, ಯುವಕರಿಗೆ ಹೃದಯ ಸಂಬಂಧಿಸಿದ ಕಾಯಲೆ ಹೆಚ್ಚಾಗುತ್ತಿದೆ. 60 ವರ್ಷ ದಾಟಿದ ನಂತರ ಕಾಡುತ್ತಿದ್ದ ಅನಾರೋಗ್ಯ ಸಮಸ್ಯೆಗಳೆಲ್ಲವೂ ಚಿಕ್ಕ ವಯಸ್ಸಿಗೆ ಕಾಡುವಂತಾಗಿದೆ. ಪ್ರಥಮ ಪಿಯುಸಿ ವಿದ್ಯಾರ್ಥಿಯೊಬ್ಬ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಬುಧವಾರ ತಾನೇ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯಲ್ಲಿ 13 ವರ್ಷದ ಬಾಲಕಿ ಶಾಲೆಗೆ ಹೋಗುವಾಗಲೇ ಕುಸಿದು ಮೃತಪಟ್ಟರುವ ಘಟನೆ ನಡುವೆ ಉಡುಪಿಯಲ್ಲಿ ಅಫ್ಕಾರ್ (17) ಮೃತಪಟ್ಟಿದ್ದಾನೆ. ಅಫ್ಕಾರ್ ಕಲ್ಯಾಣಪುರ ಮಿಲಾಗ್ರಿಸ್ ಪಿಯು ಕಾಲೇಜಿನ ಪ್ರಥಮ ಪಿಯುಸಿ ಓದುತ್ತಿದ್ದ. ಅಫ್ಕಾರ್ ಹುಟ್ಟಿನಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ.
ಡಿಸೆಂಬರ್ 6ರಂದು ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆದಿದ್ದ.ಕಳೆದ 18ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಮರಳಿದ್ದ ಅಫ್ಕಾರ್ಗೆ ಊರಿಗೆ ಹಿಂದಿರುಗಿದ ಸಂದರ್ಭ ಆರೋಗ್ಯದಲ್ಲಿ ಏರುಪೇರಾಗಿತ್ತು. ಆಸ್ಪತ್ರೆಗೆ ಸಾಗಿಸುವ ವೇಳೆ ಹೃದಯಾಘಾತವಾಗಿ ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.