ಐತಿಹಾಸಿಕ ದಾಖಲೆ ಬರೆದ ಸಲಾರ್!
– ಪ್ರಶಾಂತ್ ನೀಲ್ ಸಿನಿಮಾಕ್ಕೆ ಮೊದಲ ದಿನ ಭರ್ಜರಿ ರಶ್
– ಸಿನಿಮಾಕ್ಕೆ ಎಲ್ಲೆಡೆ ಕ್ಯೂ: ಸಸ್ಪೆನ್ಸ್ ಏನು?
NAMMUR EXPRESS NEWS
ಭಾರತ ಚಿತ್ರರಂಗದಲ್ಲಿ ಭಾರೀ ಭರವಸೆ ಮೂಡಿಸಿದ್ದ ಸಲಾರ್ ಚಿತ್ರ ಅಂತೂ ತೆರೆ ಕಂಡಿದೆ. ಮೊದಲ ದಿನವೇ ‘ಸಲಾರ್’ ಉತ್ತಮ ಗಳಿಕೆ ಮಾಡಿದೆ. ಸಲಾರ್ ಸಿನಿಮಾ ರಿಲೀಸ್ ಸಂದರ್ಭದಲ್ಲಿ ಪ್ರಶಾಂತ್ ನೀಲ್ ಅವರು ಸಾಕಷ್ಟು ನರ್ವಸ್ ಆಗಿದ್ದರು. ಚಿತ್ರವನ್ನು ಜನರು ಹೇಗೆ ಸ್ವೀಕರಿಸುತ್ತಾರೆ ಎನ್ನುವ ಭಯ ಅವರನ್ನು ಕಾಡಿತ್ತು. ಈ ಭಯ ಈಗ ದೂರವಾಗಿದೆ. ‘ಸಲಾರ್’ ಚಿತ್ರ ಮೊದಲ ದಿನ ವಿಶ್ವ ಬಾಕ್ಸ್ ಆಫೀಸ್ನಲ್ಲಿ ಐತಿಹಾಸಿಕ ದಾಖಲೆ ಬರೆದಿದೆ. ಯಾವ ಸಿನಿಮಾಗಳೂ ಇಲ್ಲಿಯವರೆಗೆ ಮಾಡದಷ್ಟು ಗಳಿಕೆ ಮಾಡಿವೆ. ಈ ಚಿತ್ರದಿಂದ ಹೊಂಬಾಳೆ ಫಿಲ್ಮ್ಸ್ ಭರ್ಜರಿ ಲಾಭ ಆಗಿದೆ. ‘ಸಲಾರ್’ ಚಿತ್ರವನ್ನು ಕೆಲವರು ‘ಉಗ್ರಂ’ ಕಥೆ ಹಾಗೂ ಆರಂಭದ ವರದಿಗಳ ಪ್ರಕಾರ ‘ಸಲಾರ್’ ಭಾರತದಲ್ಲಿ 95 ಕೋಟಿ ರೂಪಾಯಿ ಬಾಚಿಕೊಂಡಿದೆ. ವಿಶ್ವ ಮಟ್ಟದಲ್ಲಿ ಈ ಸಿನಿಮಾದ ಗಳಿಕೆ 175 ಕೋಟಿ ರೂಪಾಯಿ ಆಗಿದೆ. ಈ ಚಿತ್ರದಿಂದ ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ ದೊಡ್ಡ ಗೆಲುವು ಕಂಡಿದ್ದಾರೆ.
ಕ್ರಿಸ್ ಮಸ್ ರಜೆ ಇರುವುದರಿಂದ ಸಿನಿಮಾ ಮತ್ತಷ್ಟು ಗಳಿಕೆ ಮಾಡಲಿದೆ. ಬಾಹುಬಲಿ 2′ ಚಿತ್ರದ ಬಳಿಕ ಪ್ರಭಾಸ್ ಅವರು ದೊಡ್ಡ ಗೆಲುವು ಕಾಣಲು ವಿಫಲರಾಗಿದ್ದರು. ‘ಸಾಹೋ’, ‘ರಾಧೆ ಶ್ಯಾಮ್’ ಹಾಗೂ ‘ಆದಿಪುರುಷ್’ ಸಿನಿಮಾಗಳು ನೆಲಕಚ್ಚಿದ್ದವು. ಈಗ ಅವರ ವೃತ್ತಿ ಬದುಕಿಗೆ ದೊಡ್ಡ ಗೆಲುವು ಸಿಕ್ಕಿದೆ. ‘ಸಲಾರ್’ ಸಿನಿಮಾ ‘ಉಗ್ರಂ’ ರಿಮೇಕ್ ಎಂದು ಪ್ರಶಾಂತ್ ನೀಲ್ ಅವರು ಇತ್ತೀಚೆಗೆ ಒಪ್ಪಿಕೊಂಡಿದ್ದರು. ಮೇಕಿಂಗ್ ನಲ್ಲಿ ‘ಕೆಜಿಎಫ್’ ಶೈಲಿ ಇದೆ ಎಂದು ಕೂಡ ಹೇಳಿದ್ದರು. ಈ ವಿಚಾರಗಳನ್ನು ಹೇಳಿಕೊಳ್ಳಲು ಅವರಿಗೆ ಯಾವುದೇ ಹಿಂಜರಿಕೆ ಇಲ್ಲ. ದೇವ ಪಾತ್ರದಲ್ಲಿ ಪ್ರಭಾಸ್, ವರದರಾಜ್ ಮನ್ನಾರ್ ಪಾತ್ರದಲ್ಲಿ ಪೃಥ್ವಿರಾಜ್ ಗಮನ ಸೆಳೆದಿದ್ದಾರೆ. ಕನ್ನಡದ ಅನೇಕರು ಈ ಚಿತ್ರದಲ್ಲಿ ನಟಿಸಿದ್ದಾರೆ.