ಚುರುಮುರಿ ಚಲನಚಿತ್ರ ಪ್ರೀಮಿಯರ್ ಶೋ
-ಜನವರಿ 7ಕ್ಕೆ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ
– ಮಲೆನಾಡಿನ ಹುಡುಗಿ ಸಿಟಿ ಜೀವನ ಕಥೆ ಆಧರಿಸಿದೆ
NAMMUR EXPRESS NEWS
ತೀರ್ಥಹಳ್ಳಿ : ಮಲೆನಾಡಿನ ಹಳ್ಳಿ ಹುಡುಗಿ ಸಿಟಿ ಜೀವನದಲ್ಲಿ ಅನುಭವಿಸುವ ಸಂಕಷ್ಟ, ಈ ಚಿತ್ರ ಕಥೆ ಆಧರಿಸಿದ ಓಪನ್ ಸ್ಕೈ ಫಿಲ್ಮ್ಸ್ ಅರ್ಪಿಸುವ ಚುರುಮುರಿ ಚಲನಚಿತ್ರದ ಪ್ರೀಮಿಯರ್ ಶೋ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಸಂಜೆ 6 ಗಂಟೆಗೆ ನಡೆಯಲಿದೆ ಎಂದು ನಿರ್ದೇಶಕ ಕೃಷ್ಣ ಉಡುಪಿ ತಿಳಿಸಿದರು. ಶುಕ್ರವಾರ ಮಯೂರ ಹೋಟೆಲ್ ಸಭಾಂಗಣದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಮಲೆನಾಡಿನ ಅನೇಕ ಜನ ಕಲಾವಿದರಿಗೂ ಕೂಡ ಅವಕಾಶವನ್ನು ನೀಡಿದ್ದಾರೆ. ತೀರ್ಥಹಳ್ಳಿಯ ಅನೇಕ ಕಲಾವಿದರು ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ನಟಮಿತ್ರರು ಹವ್ಯಾಸಿ ಕಲಾತಂಡ ಸಿನಿಮಾ ಚಿತ್ರೀಕರಣಕ್ಕೆ ಪೂರ್ಣ ಸಹಕಾರ ನೀಡಿದ್ದಾರೆ. ಅಪ್ಪಟ ಮಲೆನಾಡಿನ ಭಾಷೆಯ ಸೊಗಡಿ ನಲ್ಲಿ ಚಿತ್ರದ ಸಂಭಾಷಣೆ ಇರುತ್ತದೆ. ಚುರುಮುರಿ ಪೊಟ್ಟಣದಿಂದ ಹುಟ್ಟಿಕೊಳ್ಳುವ ಮಲೆನಾಡ ಹುಡುಗಿಯ ಸಾಧನೆಯ ಘಟನಾವಳಿ ಬಿಂಬಿಸಲಾಗಿದೆ.
ಸಾಮಾಜಿಕ ಕಳಕಳಿಯಿಂದ ಈ ಸಿನಿಮಾವನ್ನು ನಿರ್ಮಿಸಿದ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಪ್ರಕಾಶ್ ಸೊಂಟಕ್ಕೆ, ಛಾಯಾಗ್ರಹಣ ರಾಜ್ ರುಮಾಲಿ, ಮುಖ್ಯಪಾತ್ರದಲ್ಲಿ ಕೃಷ್ಣ ಹೆಬ್ಬಾಳೆ, ಸಂದೇಶ ಜವಳಿ, ಪ್ರೀಯ ಶತಮರ್ಷಲ್, ವಿಲಾಸ್ ನಾಯಕ್, ಅನಂತ್ ಭಟ್, ತಿಪ್ಪಣ್ಣ ಶಿವಮೊಗ್ಗ, ಲಕ್ಷ್ಮೀ ರವಿಶಂಕರ್, ಆಶಾ ಡ್ಯಾನಿಯಲ್, ಪ್ರವೀಣ್ ಹಾಲ್ಮುತ್ತೂರು, ಲಾವಣ್ಯ ನಟನ, ಶ್ರೀಕರ ಜೈನ್, ಪವನ್, ವಿಶ್ವಾಸ್, ವಿಠಲ, ನಿತಿನ್ ಹಾಗೂ ತೀರ್ಥಹಳ್ಳಿಯ ಎನ್.ಇ.ಎಸ್. ಮತ್ತು ಕೋಣಂದೂರು ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರು, ನಟಮಿತ್ರರಯ ಬಳಗದ ತಂಡದ ನಟರು ಜೀವ ತುಂಬಿದ್ದಾರೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಶಿವಮೊಗ್ಗ ರಂಗಾಯಣ ಮಾಜಿ ನಿರ್ದೇಶಕ ಸಂದೇಶ ಜವಳಿ, ಕಲಾವಿದರಾದ ಹೊದಲ ಅನಂತ ಭಟ್ಟ, ಆಶಾ ಡ್ಯಾನಿಯಲ್, ಶ್ರೀಕಾಂತ್ ಕುಮಟ, ಲಾವಣ್ಯ ಇದ್ದರು. ಈ ಚಿತ್ರಕ್ಕೆ ಸಹಕಾರ ಕೊಟ್ಟ ಎಲ್ಲ ತೀರ್ಥಹಳ್ಳಿಯ ಸಮಸ್ತ ಜನರಿಗೆ ಧನ್ಯವಾದ ತಿಳಿಸುತ್ತೇನೆ ಎಂದಿದ್ದಾರೆ.