– ತರಕಾರಿ ಅಂಗಡಿಗೆ ನುಗ್ಗಿದ ಕಾರು! ವಿಟ್ಲದಲ್ಲಿ ನಡೆದ ಘಟನೆ!
– ಕುಂಬಳೆ : ತಾಯಿಯ ಎದೆ ಹಾಲು ಗಂಟಲಲ್ಲಿ ಸಿಲುಕಿ ಮಗುವಿನ ಸಾವು!
– ಅಕ್ರಮವಾಗಿ ಸಾಗಿಸುತ್ತಿದ್ದ 1kg ಚಿನ್ನವನ್ನು ವಶ ಪಡೆದುಕೊಂಡ ಪೊಲೀಸರು!
NAMMUR EXPRESS NEWS
ವಿಟ್ಲ: ಚಾಲಕನ ನಿಯಂತ್ರಣ ತಪ್ಪಿ ಓಮಿನಿ ಕಾರು ತರಕಾರಿ ಅಂಗಡಿಗೆ ನುಗ್ಗಿದ ಘಟನೆದ ನಡೆದಿದೆ. ಸುಳ್ಯ ಮೂಲದ ವ್ಯಕ್ತಿಯೋರ್ವರು ಚಲಾಯಿಸುತ್ತಿದ್ದ ಓಮ್ನಿ ಕಾರು ನಿಯಂತ್ರಣ ತಪ್ಪಿ ಕಂಬಳಬೆಟ್ಟು ದರ್ಗಾದ ಬಳಿ ತರಕಾರಿ ಅಂಗಡಿಯೊಂದಕ್ಕೆ ನುಗ್ಗಿದೆ ಎನ್ನಲಾಗಿದೆ. ತರಕಾರಿ ಅಂಗಡಿ ಬಳಿ ನಿಲ್ಲಿಸಿದ್ದ ಮಾಲೀಕನ ದ್ವಿಚಕ್ರ ವಾಹನಕ್ಕೂ ಕಾರು ಡಿಕ್ಕಿ ಹೊಡೆದಿದೆ. ಘಟನೆಯಿಂದಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ.
ತಾಯಿಯ ಎದೆ ಹಾಲು ಗಂಟಲಲ್ಲಿ ಸಿಲುಕಿ ಮಗುವಿನ ಸಾವು!
ಕುಂಬಳೆ : ತಾಯಿಯ ಎದೆ ಹಾಲು ಗಂಟಲಲ್ಲಿ ಸಿಲುಕಿ ಮೂರು ತಿಂಗಳ ಮಗು ಮರಣ ಹೊಂದಿರುವ ಘಟನೆ ಆಸ್ಪತ್ರೆಯಲ್ಲಿ ನಡೆದಿದೆ. ಮಲಗಿಕೊಂಡು ಎದೆಹಾಲು ಕುಡಿಯುತ್ತಿದ್ದ ಮಗು ರಾತ್ರಿ ಎಷ್ಟು ಹೊತ್ತಾದರೂ ಎಚ್ಚರಗೊಳ್ಳದೆ ಇದ್ದಾಗ ಕುಂಬಳೆಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅದಾಗಲೇ ಮಗು ಅಸು ನೀಗಿದ್ದಾಗಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಅಕ್ರಮವಾಗಿ ಸಾಗಿಸುತ್ತಿದ್ದ 1kg ಚಿನ್ನವನ್ನು ವಶ ಪಡೆದುಕೊಂಡ ಪೊಲೀಸರು!
ಮಂಗಳೂರು: ಅಬುಧಾಬಿಯಿಂದ ಬಂದ ವಿಮಾನದಲ್ಲಿ ಬಂದ ಪ್ರಯಾಣಿಕನೊಬ್ಬನು ತನ್ನ ಗುದದ್ವಾರದಲ್ಲಿ ಬಚ್ಚಿಟ್ಟುಕೊಂಡಿದ್ದ ಒಂದೂವರೆ ಕೆಜಿ ಚಿನ್ನವನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದಲ್ಲಿ ಜ. 8ರಂದು ಬಂದಿಳಿದ ಪ್ರಯಾಣಿಕರೊಬ್ಬರು ನಡೆದಾಡುವ ವಿಚಿತ್ರ ವರ್ತನೆ ಕಂಡು ಕಸ್ಟಮ್ಸ್ ಅಧಿಕಾರಿಗಳು ಸಂಶಯದಿಂದ ತಪಾಸಣೆ ಮಾಡಿದಾಗ ಚಿನ್ನ ಇರುವುದು ಪತ್ತೆಯಾಗಿದೆ. 24 ಕ್ಯಾರೆಟ್ ಚಿನ್ನವನ್ನು ಪೇಸ್ಟ್ ಮಾಡಿ ಐದು ಉಂಡೆ ಮಾಡಿ ಅದನ್ನು ಬಚ್ಚಿಟ್ಟುಕೊಂಡಿದ್ದರು. ಗುದದ್ವಾರದಲ್ಲಿ1,579 ಗ್ರಾಂ ಚಿನ್ನ ಪತ್ತೆಯಾಗಿದ್ದು ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಚಿನ್ನದ ಮಾರುಕಟ್ಟೆ ಮೌಲ್ಯ ಅಂದಾಜು 98.68 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಆರೋಪಿ ಪ್ರಯಾಣಿಕನನ್ನು ಬಂಧಿಸಿ ಬಜ್ಪೆ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.