- ಸ್ನೇಹಿತೆ ಜತೆ ಕೊಲ್ಲೂರಲ್ಲಿ ಸರಳ ವಿವಾಹ
ಕೊಲ್ಲೂರು: ಕನ್ನಡ ಚಿತ್ರರಂಗದಲ್ಲಿ ಮಲೆನಾಡಿನ ಹಳ್ಳಿಯೊಂದರಿಂದ ಹೋಗಿ ಉತ್ತಮ ಭರವಸೆ ಮೂಡಿಸುತ್ತಿರುವ ನಟ ಗೌರಿ ಶಂಕರ್ ತಮ್ಮ ಗೆಳಿತಿ ಅರುಣಾ ಜತೆ ಕೊಲ್ಲೂರು ದೇಗುಲದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕನ್ನಡದ ರಾಜಹಂಸ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ನಟರಾಗಿ ಪರಿಚಯವಾದ ಗೌರಿ ಶಂಕರ್ ತಮ್ಮ ಬಹು ಕಾಲದ ಗೆಳತಿ ಅರುಣಾ ಅವರನ್ನು ಗುರುವಾರ ಕೊಲ್ಲೂರು ಮೂಕಾಂಬಿಕಾ ಸನ್ನಿಧಿಯಲ್ಲಿ ಬಾಳಾ ಸಂಗಾತಿಯನ್ನಾಗಿ ಸ್ವೀಕರಿಸಿದ್ದಾರೆ. ಸದ್ಯದ ವಾತಾವರಣಕ್ಕೆ ಪೂರಕವಾಗಿ ಸರಳ ಮತ್ತು ಶಾಸ್ತ್ರೋಕ್ತವಾಗಿ ಮದುವೆ ಕಾರ್ಯಕ್ರಮ ನಡೆದಿದೆ. ವಿವಾಹ ಕಾರ್ಯಕ್ರಮದಲ್ಲಿ ಇಬ್ಬರ ಕುಟುಂಬದ ಸದಸ್ಯರು, ಆತ್ಮೀಯರು ಪಾಲ್ಗೊಂಡಿದ್ದರು.
ಕೋಣಂದೂರು ಬಳಿಯ ಶಂಕರಹಳ್ಳಿಯ ರಾಜಶೇಖರ್ ಅವರ ಪುತ್ರ ಗೌರಿ ಶಂಕರ್ ನಟನೆ, ನಿರ್ದೇಶನದಲ್ಲೂ ತೊಡಗಿಸಿಕೊಂಡಿದ್ದಾರೆ. ನಮ್ಮೂರ್ ಎಕ್ಸ್ಪ್ರೆಸ್ ತಂಡ ದಂಪತಿಗಳಿಗೆ ಶುಭ ಕೋರುತ್ತದೆ.