ಪ್ರಮೋದ್ ಮದ್ವರಾಜ್ ಅವರಿಗೆ ಉಡುಪಿ-ಚಿಕ್ಕಮಗಳೂರು ಟಿಕೆಟ್?
– ಮಾಜಿ ಸಚಿವ ಪ್ರಮೋದ್ ಪರ ಕಾರ್ಯಕರ್ತರ ಒತ್ತಡ
– ಸಿಟಿ ರವಿ, ಶೋಭಾ, ಜಯಪ್ರಕಾಶ್ ಹೆಗ್ಡೆ, ಜೀವರಾಜ್ ಸೇರಿ ಅನೇಕರ ಹೆಸರು ಚಾಲ್ತಿಯಲ್ಲಿ
NAMMUR EXPRESS NEWS
ಉಡುಪಿ/ಚಿಕ್ಕಮಗಳೂರು: ಲೋಕಸಭೆ ಚುನಾವಣೆ ರಂಗು ಶುರುವಾಗಿದೆ. ಎಲ್ಲೆಡೆ ಚುನಾವಣೆಯ ತಂತ್ರ, ಪ್ರತಿತಂತ್ರ ಪ್ಲಾನ್ ಆಗುತ್ತಿದೆ. ಈ ನಡುವೆ ಬಿಜೆಪಿ ಭದ್ರಕೋಟೆಯಾಗಿರುವ ಉಡುಪಿ-ಚಿಕ್ಕಮಗಳೂರು ಟಿಕೆಟ್ ಈಗ ಪ್ರಮೋದ್ ಮದ್ವರಾಜ್ ಅವರಿಗೆ ಸಿಗುವ ಸಾಧ್ಯತೆ ಇದೆ. ಈಗಾಗಲೇ ಈ ಲೋಕಸಭಾ ಕ್ಷೇತ್ರಕ್ಕೆ ಹಲವು ಪ್ರಮುಖರ ಹೆಸರು ಕೂಡ ಇದೆ. ಈ ನಡುವೆ ಮಾಜಿ ಸಚಿವ, ಯುವ ನಾಯಕ ಪ್ರಮೋದ್ ಮದ್ವರಾಜ್ ಅವರಿಗೆ ಟಿಕೆಟ್ ನೀಡುವಂತೆ ಕರಾವಳಿ ಹಾಗೂ ಮಲೆನಾಡ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ರಾಜ್ಯದ ಯಾವುದೇ ಕ್ಷೇತ್ರಕ್ಕೆ ಇನ್ನು ಟಿಕೆಟ್ ಯಾರಿಗೆ ಎಂಬುದೇ ಇನ್ನೂ ಖಚಿತವಾಗಿಲ್ಲ. ಆದರೂ ಬಹಿರಂಗ ಪಡಿಸಿಲ್ಲ. ಇಂತದ್ದೇ ಸ್ಥಿತಿಯಲ್ಲಿ ಉಡುಪಿ – ಚಿಕ್ಕಮಗಳೂರು ಕ್ಷೇತ್ರವಿದೆ. ಇಲ್ಲೀಗ ಬಿಜೆಪಿ ಟಿಕೆಟ್ ಯಾರಿಗೆ ಎಂಬುದನ್ನು ಊಹಿಸುವುದೇ ಕಷ್ಟವಾಗಿದೆ.
ಬಿಜೆಪಿ ನಾಯಕ ಸಿ.ಟಿ ರವಿ ಬೆಂಗಳೂರು ಅಥವಾ ಉಡುಪಿ ಚಿಕ್ಕಮಗಳೂರು ಕ್ಷೇತ್ರದಿಂದ ಟಿಕೆಟ್ ಗಾಗಿ ಪಟ್ಟು ಹಿಡಿದಿದ್ದು ಈ ಬಾರಿ ಸಿಗಬಹುದಾ ಎಂಬ ಬಗ್ಗೆ ಅನುಮಾನವಿದೆ. ಜೀವ ಇರುವವರೆಗು ಬಿಜೆಪಿಗಾಗಿ ದುಡಿಯುತ್ತೇನೆ ಎಂದ ಪ್ರಮೋದ್ ಮಧ್ವರಾಜ್ ಅವರಿಗೆ ಬಿಜೆಪಿ ಟಿಕೆಟ್ ನೀಡುತ್ತಾ ಎಂದು ಕಾದು ನೋಡಬೇಕಾಗಿದೆ. ಹಾಲಿ ಸಂಸದೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬಿಜೆಪಿ ನಾಯಕ ಜೀವರಾಜ್, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಸೇರಿದಂತೆ ಅನೇಕರ ಹೆಸರು ಕೂಡ ಇದೆ. ಯುವ ನಾಯಕರಾಗಿ ಪ್ರಮೋದ್ ಸ್ಥಳೀಯ ಜನರೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡಿದ್ದು ಬಿಜೆಪಿ ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ಹಾಗಾಗಿ ಇವರಿಗೇ ಟಿಕೆಟ್ ನೀಡಬೇಕೆಂಬುದು ಜನಸಾಮಾನ್ಯರ ಆಗ್ರಹವಾಗಿದೆ. ಯಾರಿಗೆ ಟಿಕೆಟ್ ಸಿಗಲಿದೆ ಎಂಬುದನ್ನು ಮಾತ್ರ ಕಾದು ನೋಡಬೇಕಿದೆ
ಕಾಂಗ್ರೆಸ್ ಅಲ್ಲೂ ರೇಸ್!
ಕಾಂಗ್ರೆಸ್ ನಲ್ಲಿ ಸುಧೀರ್ ಕುಮಾರ್ ಮುರೊಳ್ಳಿಯವರಿಗೆ ಟಿಕೆಟ್ ನೀಡುವ ಬಗ್ಗೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು ಆಗಲೇ ಡಿಕೆ ಶಿವಕುಮಾರ್ ಮತ್ತು ಸಿದ್ಧರಾಮಯ್ಯ ಈ ವಿಷಯದ ಬಗ್ಗೆ ಸ್ವಷ್ಟ ನಿಲುವು ಹೊಂದಿದ್ದಾರೆ ಎನ್ನಲಾಗಿದೆ. ಹೀಗಿದ್ದೂ ಜೆಪಿ ಹೆಗ್ಡೆಯವರ ಹೆಸರೂ ಸಹ ಕೇಳಿಬರುತ್ತಿದೆ. ಇನ್ನು ಚಿಕ್ಕಮಗಳೂರು ಕಾಂಗ್ರೆಸ್ ಅಧ್ಯಕ್ಷರಾದ ಡಾ.ಅಂಶುಮಂತ್ ಅವರ ಹೆಸರು ರೇಸ್ ಅಲ್ಲಿದೆ.