ಗಂಡು ಮಗುವಿಗೆ ಜನ್ಮ ನೀಡಿದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿ!
– 26 ಕೋಟಿ ಮೌಲ್ಯದ ಕೊಕೇನ್ ಸಾಗಣೆ: ಮಹಿಳೆ ವಶ
– ಇಸ್ಪೀಟ್ ಅಡ್ಡೆಗೆ ದಾಳಿ; ಆರೋಪಿಗಳು ವಶಕ್ಕೆ..!
NAMMUR EXPRESS NEWS
ಕಲಬುರಗಿ :ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ಬೆಳಕಿಗೆ ಬಂದಿದೆ. ವಿದ್ಯಾರ್ಥಿನಿಯ ದೊಡ್ಡಪ್ಪನ ಮಗನಿಂದಲೇ ಈ ಕೃತ್ಯ ನಡೆದಿದೆ ಎಂಬ ವಿಚಾರ ಬಾಲಕಿಯ ಹೆತ್ತವರಿಗೆ ಆಘಾತವನ್ನುಂಟು ಮಾಡಿದೆ.
ಘಟನೆಯ ಹಿನ್ನೆಲೆ : ವಿದ್ಯಾರ್ಥಿನಿ ವಸತಿ ಶಾಲೆಯಲ್ಲಿ ಓದುತ್ತಿದ್ದು, ರಜೆ ಇದ್ದಾಗ ಮನೆಗೆ ಬರುತ್ತಿದ್ದಳು. ಹೀಗೆ ಬಂದಾಗ ಸಹೋದರರೇ ಆಕೆಯನ್ನು ಬಳಸಿಕೊಳ್ಳುತ್ತಿದ್ದರು. ರಾತ್ರಿ ವೇಳೆ ಮನೆಯಲ್ಲಿ ಎಲ್ಲರೂ ಮಲಗಿದ್ದಾಗ ರೇಪ್ ಮಾಡುತ್ತಿದ್ದ. ಹೀಗೆ ಆತ ಹಲವು ಬಾರಿ ಅತ್ಯಾಚಾರ ಮಾಡಿದ್ದಾನೆ ಎನ್ನಲಾಗಿದೆ. ಅಲ್ಲದೇ ಈ ವಿಚಾರ ಬಾಯಿಬಿಟ್ಟರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಡಿ. 24ರಂದು ಶಾಲೆಯಲ್ಲಿ ವಿದ್ಯಾರ್ಥಿನಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಬಳಿಕ ಆಕೆಯನ್ನು ತಂದೆತಾಯಿ ಮನೆಗೆ ಕರೆದುಕೊಂಡು ಬಂದಿದ್ದಾರೆ. ಬಳಿಕ ಆಕೆಯನ್ನು ಮಹಾರಾಷ್ಟ್ರದ ಸೊಲ್ಲಾಪುರದ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಯಿತು. ಅಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ. ಸದ್ಯ ಅಣ್ಣನನ್ನು ಕೂಡ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
26 ಕೋಟಿ ರೂ. ಮೌಲ್ಯದ ಕೊಕೇನ್ ಸಾಗಣೆ: ಕೀನ್ಯಾ ಮೂಲದ ಮಹಿಳೆ ವಶ:
ಬೆಂಗಳೂರು: ಅಕ್ರಮವಾಗಿ ಮದಕವಸ್ತು ಕಳ್ಳ ಸಾಗಣೆ ಮಾಡುತ್ತಿದ್ದ ಕೀನ್ಯಾ ಮೂಲದ ಮಹಿಳೆಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದು, 26 ಕೋಟಿ ರೂ. ಮೌಲ್ಯದ ಕೊಕೇನ್ ವಶಕ್ಕೆ ಪಡೆದಿದ್ದಾರೆ. ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೀನ್ಯಾ ಮೂಲದ ಮಹಿಳೆಯನ್ನು ಚೆಕ್ ಮಾಡಿದಾಗ, ಬ್ಯಾಗ್ ನಲ್ಲಿ ಕೊಕೇನ್ ಮರೆಮಾಚಿ ಬೆಂಗಳೂರಿನಿಂದ ಸಾಗಿಸುತ್ತಿರುವುದು ಕಂಡು ಬಂದಿದೆ. ಈ ಹಿನ್ನೆಲೆ 26 ಕೋಟಿ ಮೌಲ್ಯದ 2.6 ಕೆಜಿ ಕೊಕೇನ್ ಹಾಗೂ ಮಹಿಳೆಯನ್ನು ವಶಕ್ಕೆ ಪಡೆಯಲಾಗಿದೆ. ಮಹಿಳೆಯನ್ನ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಬೆಂಗಳೂರಿನ ಡಿಆರ್ಐ ಕಚೇರಿಯಲ್ಲಿ ಮಹಿಳೆಯ ವಿಚಾರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಇಸ್ಪೀಟ್ ಅಡ್ಡೆಗೆ ದಾಳಿ; ಆರೋಪಿಗಳು ವಶಕ್ಕೆ:
ಸಿದ್ದಾಪುರ: ಹೊಸಂಗಡಿ ಗ್ರಾಮದ ಕಪ್ಪೆಹೊಂಡ ಎಂಬಲ್ಲಿ ಇಸ್ಪೀಟ್ ಜುಗಾರಿ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಅಮಾಸೆಬೈಲು ಪೊಲೀಸ್ ಠಾಣೆಯ ಪಿಎಸ್ಐ ಸಂಗೀತಾ ಅವರು ದಾಳಿ ನಡೆಸಿ, ಆರೋಪಿಗಳಾದ ನಿಂಗಯ್ಯ, ಭಾಸ್ಕರ, ಕರುಣಾಕರ, ಸುಬ್ರಹ್ಮಣ್ಯ ಅವರನ್ನು ವಶಕ್ಕೆ ಪಡೆದರು.