ತುಳುನಾಡ ಪುರೋಹಿತರಾದ ಗಣೇಶ್ ಭಟ್ ಗೆ ಆಹ್ವಾನ!
– ಶ್ರೀರಾಮ ಪ್ರಾಣ ಪ್ರತಿಷ್ಠೆಯಲ್ಲಿ ಪೌರೋಹಿತ್ಯಕ್ಕೆ ಅವಕಾಶ
– ಅಯೋಧ್ಯೆ ಲೈಟಿಂಗ್ ಮಾಡಿದ್ದು ಕರಾವಳಿಯ ಮೂಡಬಿದರೆ ಇವೆಂಟ್ ಸಂಸ್ಥೆ!
– ಶೃಂಗೇರಿ ಮಠದ ಆಡಳಿತ ಅಧಿಕಾರಿ ಗೌರಿಶಂಕರ್ ಅಯೋಧ್ಯೆಗೆ
– ಜ.22ರಂದು ಸ್ವಯಂ ರಜೆಗಾಗಿ ಅನೇಕರ ಪಟ್ಟು
NAMMUR EXPRESS NEWS
ಸುಳ್ಯ: ಅಯೋಧ್ಯೆಯ ಶ್ರೀರಾಮ ಮಂದಿರ ಪ್ರತಿಷ್ಠಾಪನೆಗೆ ಸಕಲ ಸಿದ್ಧತೆಗಳೂ ನಡೆಯುತ್ತಿದೆ. ಇದೀಗ ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠೆಯ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸುವ ಪುರೋಹಿತಕ್ಕೆ ತುಳುನಾಡಿನ ಸುಳ್ಯ ತಾಲೂಕಿನ ಡಾ.ಕೆ ಗಣಪತಿ ಭಟ್ ನೇಮಕವಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಜಾಲ್ಲೂರು ಗ್ರಾಮದ ಕೇಮನಬಳ್ಳಿಯ ಶಾರದಾ ಮತ್ತು ಗೋಪಾಲಕೃಷ್ಣ ಭಟ್ ಅವರ ಪುತ್ರರಾಗಿರುವ ಡಾ. ಕೆ. ಗಣೇಶ ಭಟ್ ಅವರು ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿ.ವಿಯ ಪರಮಚಾರ್ಯ ಗುರುಕುಲದ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಜ. 22ರಂದು ಅಯೋಧ್ಯೆಯಲ್ಲಿ ಪ್ರತಿಷ್ಠೆಗೊಳ್ಳಲಿರುವ ರಾಮಲಲ್ಲಾ ವಿಗ್ರಹದ ಧಾರ್ಮಿಕ ವಿಧಿ ವಿಧಾನಗಳು ಜ. 16ರಿಂದ ಆರಂಭಗೊಂಡಿದೆ. ರಾಮಲಲ್ಲಾನ ವಿಗ್ರಹ ಪ್ರತಿಷ್ಠೆಯ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲು ನೇಮಕವಾಗಿರುವ 101 ಮಂದಿ ಪ್ರಧಾನ ಪುರೋಹಿತರಲ್ಲಿ ಡಾ.ಕೆ.ಗಣಪತಿ ಭಟ್ ಸಹ ಒಬ್ಬರಾಗಿದ್ದಾರೆ. ಇವರ ನಾಯಕತ್ವದಲ್ಲಿ 40 ಮಂದಿ ಆರ್ಚಕರಿರಲಿದ್ದಾರೆ. ಡಾ. ಕೆ. ಗಣಪತಿ ಅವರು ಕರ್ನಾಟಕ ರಾಜ್ಯದಿಂದ ಆಯ್ಕೆಯಾದ ಏಕೈಕ ಪುರೋಹಿತರಾಗಿದ್ದಾರೆ.
ಜನವರಿ 22ರಂದು ಸ್ವಯಂ ರಜೆ ತೆಗೆದುಕೊಳ್ಳಿ: ಯಶ್ ಪಾಲ್ ಸುವರ್ಣ!
ಉಡುಪಿ: ಜನವರಿ 22ರಂದು ವಿದ್ಯಾರ್ಥಿಗಳು, ಸರ್ಕಾರಿ ನೌಕರರು ಸ್ವಯಂ ರಜೆ ಪಡೆಯಲು ಉಡುಪಿ ಬಿಜೆಪಿ ಶಾಸಕ ಯಶ್ ಪಾಲ್ ಸುವರ್ಣ ಕರೆ ಕೊಟ್ಟಿದ್ದಾರೆ. ವಿದ್ಯಾರ್ಥಿಗಳೇ ರಜೆ ಮಾಡಿ ರಾಮೋತ್ಸವದಲ್ಲಿ ಭಾಗಿಯಾಗಿ, ಸಿದ್ದರಾಮಯ್ಯ ಸರ್ಕಾರ ಹಿಂದೂ ವಿರೋಧಿ ಧೋರಣೆ ಹೊಂದಿದೆ. ರಜೆ ಘೋಷಣೆ ಮಾಡದೆ ಹಿಂದುಗಳ ಭಾವನೆ ಜೊತೆ ಚೆಲ್ಲಾಟ ಆಡುತ್ತಿದೆ. ಹಲವಾರು ರಾಜ್ಯಗಳು ರಜೆ ಘೋಷಿಸಿದರೂ ಕರ್ನಾಟಕ ಮಾತ್ರ ರಜೆ ಘೋಷಣೆ ಮಾಡಿಲ್ಲ ಎಂದು ಪೋಸ್ಟ್ ಮಾಡಿದ್ದಾರೆ. ಸ್ವಯಂ ರಜೆ ಪಡೆದ ವಿದ್ಯಾರ್ಥಿಗಳ ವಿರುದ್ಧ ಯಾವುದೇ ಶಿಕ್ಷಣ ಸಂಸ್ಥೆ ಕ್ರಮ ಕೈಗೊಂಡರೆ ಶಾಸಕನಾಗಿ ವಿದ್ಯಾರ್ಥಿಗಳ ಜೊತೆ ನಿಂತು ನ್ಯಾಯ ಒದಗಿಸಲು ನಾನು ಸಿದ್ದ ಎಂದು ಹೇಳಿದ್ದಾರೆ.
ಕನ್ನಡ ಪರ ಸಂಘಟನೆಗಳಿಂದ ರಜೆಗೆ ಪಟ್ಟು
ಶ್ರೀರಾಮ ಮಂದಿರದ ಉದ್ಘಾಟನೆಯ ದಿನ ಇಡೀ ದೇಶದಲ್ಲಿ ಹಬ್ಬದ ವಾತಾವರಣ ಮತ್ತು ದೇವಸ್ಥಾನಗಳಲ್ಲಿ ಪೂಜಾ ವಿಧಿವಿಧಾನಗಳು ನಡೆಯುವ ಸಂಧರ್ಭದಲ್ಲಿ ಮನೆಯಿಂದಲೇ ಕುಳಿತು ವೀಕ್ಷಿಸುವಂತೆ ವ್ಯವಸ್ಥೆಗಳನ್ನು ಹಲವು ಕಡೆ ಮಾಡಲಾಗಿದೆ. ಈ ಸಲುವಾಗಿ ಕರ್ನಾಟಕದಲ್ಲೂ ಸಾರ್ವತ್ರಿಕ ರಜೆಗಾಗಿ ಕನ್ನಡಪರ ಸಂಘಟನೆಗಳು ಸಿಎಂ ಗೆ ಮನವಿ ಮಾಡಿದ್ದಾರೆ.
ಮೂಡುಬಿದಿರೆಯ ಕಂಪನಿಯಿಂದ ಅಯೋಧ್ಯೆ ಮಂದಿರದ ವಿದ್ಯುತ್ ಅಲಂಕಾರ!
ಅಯೋಧ್ಯೆ ಮಂದಿರದ ಸಂಪೂರ್ಣ ವಿದ್ಯುತ್ ಅಲಂಕಾರವನ್ನು ನಮ್ಮ ಕರ್ನಾಟಕದ ಮೂಡುಬಿದಿರೆಯ ಇವೆಂಟ್ ಕಂಪೆನಿ ನಿರ್ವಹಿಸಿದ್ದು ಕರ್ನಾಟಕಕ್ಕೆ ಈ ಶುಭ ಸಂದರ್ಭದಲ್ಲಿ ಮತ್ತೊಂದು ಹೆಮ್ಮೆಯ ಸಂಗತಿಯಾಗಿದೆ.
ಶೃಂಗೇರಿ ಮಠದಿಂದ ಗೌರಿ ಶಂಕರ್ ಭೇಟಿ
ಅಯೋಧ್ಯೆಗೆ ಮಲೆನಾಡಿನ ಖ್ಯಾತ ಮಠ ಶೃಂಗೇರಿ ಮಠದಿಂದ ಆಡಳಿತ ಅಧಿಕಾರಿ ಗೌರಿ ಶಂಕರ್ ಅವರು ಭೇಟಿ ನೀಡಿದ್ದಾರೆ.