- ಮಗದೀರ ನಟಿಯ ಬದುಕಿನ ಹೊಸ ಪುಟ
ಮುಂಬೈ: ಭಾರತ ಚಿತ್ರರಂಗದ ಪ್ರಸಿದ್ಧ ನಟಿ ಕಾಜಲ್ ಅಗರ್ವಾಲ್ ಉದ್ಯಮಿ ಗೌತಮ್ ಕಿಚ್ಲು ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮುಂಬೈಯಲ್ಲಿ ತಮ್ಮ ಸಮೀಪ ಬಂಧುಗಳು ಮತ್ತು ಆಪ್ತ ಸ್ನೇಹಿತರಿಗಷ್ಟೇ ವಿವಾಹ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದರು. ಕಾಜಲ್ ಅಗರ್ವಾಲ್ ಕಡುಗೆಂಪು ಬಣ್ಣದ ವಧುವಿನ ಉಡುಗೆಯಲ್ಲಿ ಕಂಗೊಳಿಸಿದ್ದರೆ ತಿಳಿ ಗುಲಾಬಿ ಬಣ್ಣದ ದುಪ್ಪಟ್ಟಾ ಹಾಗೂ ಗುಲಾಬಿ ಅಚ್ಚೊತ್ತಿದ ಬೆಳ್ಳಿ ಬಣ್ಣದ ಶೆರ್ವಾನಿಯಲ್ಲಿ ಮದುಮಗ ಗೌತಮ್ ಮಿಂಚಿದ್ದರು.
ಕಾಜಲ್ ಮದುವೆಗೆ ಮುನ್ನ ಕಪ್ಪು ಬಿಳುಪಿನ ಮದುಮಗಳ ಫೆÇೀಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದರು.
ಸಿಂಗಂ, ಮಗದೀರ, ಸ್ಪೆಷಲ್ 26, ತುಪ್ಪಕ್ಕಿ ಚಿತ್ರಗಳಿಂದ ಜನಪ್ರಿಯರಾದ ಕಾಜಲ್ ಅಗರ್ವಾಲ್ ಕಳೆದ ಅಕ್ಟೋಬರ್ 6ರಂದು ಗೌತಮ್ ಜೊತೆ ತಮ್ಮ ವಿವಾಹ ನಿಶ್ಚಯವನ್ನು ಘೋಷಿಸಿಕೊಂಡಿದ್ದರು.