ಭಟ್ಕಳ ಮಹಿಳೆಗೆ ಉಗ್ರರ ನಂಟು?!
– ಶಂಕಿತ ಉಗ್ರನೊಂದಿಗೆ ನಂಟು ಹೊಂದಿರುವ ಶಂಕೆ
– ಭಟ್ಕಳ ಮಹಿಳೆ ವಶಕ್ಕೆ ಪಡೆದ ಎಟಿಎಸ್
NAMMUR EXPRESS NEWS
ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ ಜತೆ ನಂಟು ಹೊಂದಿರುವ ಮಹಾರಾಷ್ಟ್ರ ನಾಸಿಕ್ ಓರ್ವ ಯುವಕನನ್ನು ಮುಂಬೈ ಎಟಿಎಸ್ ತಂಡ ಇತ್ತೀಚೆಗೆ ಬಂಧಿಸಿತ್ತು. ಆತನ ಜತೆ ಸಂಪರ್ಕದಲ್ಲಿದ್ದ ಮುಂಬೈನ ಓರ್ವ ಮಹಿಳೆಯನ್ನು ಬಂಧಿಸಿರುವ ತಂಡ ಆಕೆಯ ಸಂಪರ್ಕದಲ್ಲಿದ್ದ ಭಟ್ಕಳ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಜಾಲಿ ಬಳಿಯ ಆಜಾದ ನಗರದ ಮಹಿಳೆಯೋರ್ವಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವುದಾಗಿ ಗೊತ್ತಾಗಿದೆ. ಈಕೆಯ ಪತಿ ನಿಧನರಾಗಿದ್ದು ತಂದೆ-ತಾಯಿ, ಮಕ್ಕಳ ಜತೆ ವಾಸವಾಗಿದ್ದರು. ಸ್ಥಳೀಯ ಮದರಸಾದಲ್ಲಿ ಶಿಕ್ಷಕಿ ಆಗಿ ಕೆಲಸ ಮಾಡುತ್ತಿದ್ದ ಈಕೆ ಹೆಣ್ಣುಮಕ್ಕಳಿಗೆ ಧರ್ಮ ಶಿಕ್ಷಣ ಬೋಧಿಸುತ್ತಿದ್ದಳು ಎನ್ನಲಾಗಿದೆ. ಬಂಧಿತ ಶಂಕಿತ ಉಗ್ರನಿಗೆ ಹಣ ವರ್ಗಾವಣೆ ಮಾಡಿರುವ ಮತ್ತು ನೇರ ಸಂಪರ್ಕ ಇರುವ ಕುರಿತು ತನಿಖೆ ನಡೆಸಲಾಗುತ್ತಿದೆ. ತನಖೆಯಿಂದ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. ಈಕೆಯ ಮನೆಯಿಂದ ಮೊಬೈಲ್ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.