- ಕೊಪ್ಪ ತಾಲೂಕಿನ ಜಯಪುರ ಬಳಿ ಘಟನೆ
ಕುಡಿತದ ಚಟಕ್ಕೆ ತೀರ್ಥಹಳ್ಳಿಯ ಕಾರ್ಮಿಕ ಆತ್ಮಹತ್ಯೆ!
ಕೊಪ್ಪ: ವ್ಯಕ್ತಿಯೊಬ್ಬ ಸ್ಮಶಾನದಲ್ಲೇ ನೇಣಿಗೆ ಶರಣಾದ ಘಟನೆ ಕೊಪ್ಪ ತಾಲೂಕಿನ ಜಯಪುರ ಸಮೀಪದ ಗುಬ್ಬಿಬೈಲು ಎಂಬಲ್ಲಿ ವರದಿಯಾಗಿದೆ.
ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಸುಮಾರು 55 ವರ್ಷ ವಯಸ್ಸಿನ ವ್ಯಕ್ತಿ ಎಂದು ಪೊಲೀಸರು ತಿಳಿಸಿದ್ದಾರೆ. ಸೌದೆ ತರಲು ಸ್ಥಳೀಯರು ಹೋಗಿದ್ದಾಗ ಘಟನೆ ಬೆಳಕಿಗೆ ಬಂದಿದೆ. ಕೊಪ್ಪ ಎಸ್ಸೈ ಗುರಣ್ಣ ಮುಂದಿನ ತನಿಖೆ ನಡೆಸುತ್ತಿದ್ದಾರೆ. ಜಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಮಿಕ ಆತ್ಮಹತ್ಯೆ: ಕರೋನಾ ಸಂಕಷ್ಟದಿಂದ ಎಲ್ಲಾ ಉದ್ಯಮಗಳು ತಲೆಕೆಳಗಾಗಿವೆ. ಉದ್ಯಮ, ವ್ಯವಹಾರ ನಡೆಸುವುದೇ ಕಷ್ಟಕರವಾಗಿದೆ. ಹೀಗಾಗಿ ಎಲ್ಲೆಡೆ ಆತ್ಮಹತ್ಯೆಗಳ ಸರಣಿ ಜನರನ್ನು ಭಯಭೀತರನ್ನಾಗಿಸಿದೆ. ಈ ನಡುವೆ ಕೆಲಸ ಇಲ್ಲದೆ, ಜತೆಗೆ ಕುಡಿತದ ಚಟಕ್ಕೆ ದಾಸನಾದ ಗಾರೆ ಕೆಲಸಗಾರನೊಬ್ಬ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೀರ್ಥಹಳ್ಳಿಯ ಗಾಂಧಿ ನಗರದಲ್ಲಿ ಶನಿವಾರ ರಾತ್ರಿ ಸಂಭವಿಸಿದೆ. ರಾಘವೇಂದ್ರ(ಗುಂಡ) ಮೃತ ವ್ಯಕ್ತಿ. ಸುಮಾರು 42 ವರ್ಷದ ರಾಘವೇಂದ್ರ ಗಾರೆ ಕೆಲಸ ಮಾಡಿಕೊಂಡು ಬದುಕು ನಡೆಸುತ್ತಿದ್ದ. ಮನೆಯಲ್ಲಿ ಕಿರಿಕಿರಿ ಮಾಡುತ್ತಿದ್ದ ಎನ್ನಲಾಗಿದೆ. ಈತ ಮನೆಯ ರೂಮಿನಲ್ಲಿ ನೇಣಿಗೆ ಶರಣಾಗಿದ್ದಾನೆ. ಪತ್ನಿ ಮತ್ತು ಮಕ್ಕಳು ತಾಯಿ ಮನೆಗೆ ಹೋಗಿದ್ದಾಗ ಘಟನೆ ನಡೆದಿದೆ. ತಾಯಿ ಮನೆಯಲ್ಲಿದ್ದರು. ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.