ಲೋಕ ಸಭಾ ಚುನಾವಣೆಗೆ ಭರ್ಜರಿ ಪ್ಲಾನ್!
– ಕ್ಷೇತ್ರವಾರಿ ಉಸ್ತುವಾರಿಗಳನ್ನು ನೇಮಿಸಿದ ಬಿಜೆಪಿ
– ಉಡುಪಿ-ಚಿಕ್ಕಮಗಳೂರು ಉಸ್ತುವಾರಿಯಾಗಿ ಆರಗ , ದಕ್ಷಿಣ ಕನ್ನಡಕ್ಕೆ ಕೋಟಾ
– ರಘುಪತಿ ಭಟ್ ಶಿವಮೊಗ್ಗ, ಉ. ಕನ್ನಡಕ್ಕೆ ಹಾಲಪ್ಪ
NAMMUR EXPRESS NEWS
ಬೆಂಗಳೂರು: ಲೋಕಸಭಾ ಚುನಾವಣೆಗೆ ತಯಾರಿ ಆರಂಭಿಸಿರುವ ಬಿಜೆಪಿ ಹೈಕಮಾಂಡ್ ರಾಜ್ಯದಲ್ಲಿ ಭರ್ಜರಿ ಪ್ಲಾನ್ ಮಾಡಿದೆ. ರಾಜ್ಯಕ್ಕೆ ರಾಧ ಮೋಹನದಾಸ್ ಅಗರವಾಲ್ ಹಾಗೂ ಸುಧಾಕರ್ ರೆಡ್ಡಿ ಅವರನ್ನು ರಾಜ್ಯ ಚುನಾವಣಾ ಉಸ್ತುವಾರಿಗಳನ್ನಾಗಿ ನೇಮಿಸಿದೆ.ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ.
ಯಾರು ಎಲ್ಲಿಗೆ?
ಉಡುಪಿಗೆ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು ದಕ್ಷಿಣ ಕನ್ನಡಕ್ಕೆ ವಿಧಾನ ಪರಿಷತ್ನ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಉಸ್ತುವಾರಿಯಾಗಿ ನೇಮಿಸಿದೆ. ಜತೆಗೆ ಮಾಜಿ ಶಾಸಕ ರಘುಪತಿ ಭಟ್ ಅವರಿಗೆ ಶಿವಮೊಗ್ಗ ಮತ್ತು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರಿಗೆ ಬೆಂಗಳೂರು ಸೆಂಟ್ರಲ್ನ ಉಸ್ತುವಾರಿ ವಹಿಸಲಾಗಿದೆ.
ಕ್ಷೇತ್ರವಾರು ಉಸ್ತುವಾರಿಗಳ ಪಟ್ಟಿ ಹೀಗಿದೆ:
ಮೈಸೂರು – ಡಾ.ಸಿಎನ್ ಅಶ್ವಥ್ ನಾರಾಯಣ್
ಚಾಮರಾಜನಗರ – ಎನ್ ವಿ ಪಣೀಶ್
ಮಂಡ್ಯ – ಸುನಿಲ್ ಸುಬ್ರಮಣಿ
ಹಾಸನ – ಎಂ.ಕೆ ಪ್ರಾಣೇಶ್
ದಕ್ಷಿಣ ಕನ್ನಡ – ಕೋಟ ಶ್ರೀನಿವಾಸ ಪೂಜಾರಿ
ಉಡುಪಿ-ಚಿಕ್ಕಮಗಳೂರು – ಅರಗ ಜ್ಞಾನೇಂದ್ರ
ಶಿವಮೊಗ್ಗ – ರಘುಪತಿ ಭಟ್
ಉತ್ತರ ಕನ್ನಡ – ಹರತಾಳು ಹಾಲಪ್ಪ
ಧಾರವಾಡ – ಈರಣ್ಣ ಕಡಾಡಿ
ಹಾವೇರಿ – ಅರವಿಂದ್ ಬೆಲ್ಲದ್
ಬೆಳಗಾವಿ – ವೀರಣ್ಣ ಚರಂತಿಮಠ
ಚಿಕ್ಕೋಡಿ – ಅಭಯ್ ಪಾಟೀಲ್
ಬಾಗಲಕೋಟೆ – ಲಿಂಗರಾಜ್ ಪಾಟೀಲ್
ವಿಜಯಪುರ (ಎಸ್ಸಿ)- ರಾಜಶೇಖರ್ ಶೀಲವಂತ್
ಬೀದರ್ – ಅಮರನಾಥ್ ಪಾಟೀಲ್
ಗುಲ್ಬರ್ಗಾ – ರಾಜು ಗೌಡ
ರಾಯಚೂರು (ಎಸ್ಪಿ) – ದೊಡ್ಡನಗೌಡ ಎಚ್. ಪಾಟೀಲ್
ಕೊಪ್ಪಳ – ರಘುನಾಥ್ ರಾವ್ ಮಲ್ಕಾಪುರೆ
ಬಳ್ಳಾರಿ (ಎಸ್ಟಿ) – ಎನ್.ರವಿಕುಮಾರ್
ದಾವಣಗೆರೆ – ಬೈರತಿ ಬಸವರಾಜ್
ಚಿತ್ರದುರ್ಗ (ಎಸ್ಪಿ) – ಚನ್ನಬಸಪ್ಪ
ತುಮಕೂರು – ಕೆ. ಗೋಪಾಲಯ್ಯ
ಚಿಕ್ಕಬಳ್ಳಾಪುರ-ಕಟ್ಟಾ ಸುಬ್ರಹ್ಮಣ್ಯ ನಾಯ್ಡು
ಕೋಲಾರ (ಎಸ್ಸಿ) – ಬಿ.ಸುರೇಶ್ ಗೌಡ
ಬೆಂಗಳೂರು ಗ್ರಾಮಾಂತರ – ನಿರ್ಮಲ್ ಕುಮಾರ್ ಸುರಾನ
ಬೆಂಗಳೂರು ದಕ್ಷಿಣ – ಎಂ. ಕೃಷ್ಣಪ್ಪ
ಬೆಂಗಳೂರು ಸೆಂಟ್ರಲ್ – ಗುರುರಾಜ್ ಗಂಟಿಹೊಳೆ
ಬೆಂಗಳೂರು ಉತ್ತರ – ಎಸ್.ಆರ್ ವಿಶ್ವನಾಥ್