ಅಡಿಕೆಗೆ ಬಂಪರ್ ಬೆಲೆ: ವಾಹನ ಖರೀದಿ ಜೋರು.!
– ಬೈಕ್, ಕಾರು, ಇತರೆ ವಾಹನಗಳಿಗೆ ಹೆಚ್ಚಿದ ಡಿಮ್ಯಾಂಡ್
– ರಾಜ್ಯದಲ್ಲೇ ತೀರ್ಥಹಳ್ಳಿ ವಾಹನ ವ್ಯಾಪಾರದಲ್ಲಿ ಹೊಸ ದಾಖಲೆ!
NAMMUR EXPRESS NEWS
ತೀರ್ಥಹಳ್ಳಿ : ಅಡಿಕೆ ಬೆಲೆ ಜಾಸ್ತಿ ಆಗುತ್ತಿದ್ದಂತೆ, ಮಲೆನಾಡು ಹಾಗೂ ಬಯಲು ಸೀಮೆ ಭಾಗಗಳಲ್ಲಿ ವಾಹನ ಖರೀದಿ ಭರಾಟೆ ಜೋರಾಗಿದೆ. ಅಡಿಕೆ ಬೆಲೆ ಈಗಾಗಲೇ ಅರ್ಧ ಲಕ್ಷಕ್ಕೂ ಹೆಚ್ಚಾಗಿದೆ. ಜೊತೆಗೆ ಉತ್ತಮ ಬೆಲೆಯನ್ನು ಕಳೆದೆರಡು ವರ್ಷಗಳಿಂದ ಸ್ಥಿರತೆ ಕಂಡುಕೊಂಡಿದೆ. ಜೊತೆಗೆ ಫಸಲು ಕೂಡ ಸಾಮಾನ್ಯವಾಗಿದೆ. ಹೀಗಾಗಿ ಜನ ತಮ್ಮ ಮೂಲ ಅವಶ್ಯಕತೆಗಳ ಬಗ್ಗೆ ಗಮನಿಸುತ್ತಿದ್ದಾರೆ. ಇದರಿಂದಾಗಿ ಮನೆ ನಿರ್ಮಾಣ, ಚಿನ್ನ ಖರೀದಿ ಹಾಗೂ ವಾಹನಗಳ ಖರೀದಿ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ.
ಶಿವಮೊಗ್ಗ, ಚಿಕ್ಕಮಗಳೂರಲ್ಲಿ ಹೆಚ್ಚು!
ಮಲೆನಾಡಿನ ಬಹುತೇಕ ಭಾಗಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಬಯಲುಸೀಮೆ ಭಾಗಗಳಲ್ಲಿ ಹಾಗೂ ಕರಾವಳಿ ಭಾಗಗಳಲ್ಲಿ ವಾಹನಗಳ ಖರೀದಿ ಹೆಚ್ಚಾಗಿದೆ. ಬೈಕು, ಕಾರು ಹಾಗೂ ಇತರೆ ವಾಹನಗಳನ್ನು ರೈತ ವರ್ಗದ ಯುವಜನತೆ ಮತ್ತು ರೈತ ವರ್ಗದವರು ಖರೀದಿಸಿರುವಂತಹ ಬೆಳವಣಿಗೆ ಕಳೆದ ಐದು ವರ್ಷಗಳಿಂದ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಮಂಗಳೂರು ಭಾಗದಲ್ಲಿ ವಾಹನಗಳ ಮಾರಾಟ ದರ ಕೂಡ ಹೆಚ್ಚಾಗಿದೆ. ಪ್ರತಿ ಮನೆಯಲ್ಲಿ ಕಾರು, ಬೈಕ್ ಹೆಚ್ಚುತ್ತಿವೆ.
ತೀರ್ಥಹಳ್ಳಿಯಲ್ಲೂ ದಾಖಲೆ ಮಾರಾಟ!
ತೀರ್ಥಹಳ್ಳಿ ನಗರದಲ್ಲಿ ಬೈಕ್ ಮತ್ತು ಕಾರು ಮಾರಾಟದಲ್ಲಿ ದಾಖಲೆ ನಿರ್ಮಾಣವಾಗಿದೆ. ಶಿವಮೊಗ್ಗದಲ್ಲಿ ಕೂಡ ಹೆಚ್ಚಾಗಿದೆ. ಹೀಗಾಗಿ ಅಡಿಕೆ ಬೆಲೆ ಅನೇಕರ ಬದುಕನ್ನು ಮತ್ತಷ್ಟು ಉತ್ತಮಗೊಳಿಸಿದೆ. ತೀರ್ಥಹಳ್ಳಿಯ ರಾಹುಲ್ ಹೋಂಡಾಯಿ, ಶ್ರುತಿ ಮೋಟಾರ್ಸ್, ಮಹಿಂದ್ರಾ, ಖಂಡಿಲ್ ಮೋಟಾರ್, ನಾಗರಹಳ್ಳಿ ಹೋಂಡಾ, ಅಚ್ಚೂರ್ ಆಗ್ರೋ ಸೇಲ್ಸ್ ಸಂಸ್ಥೆಯ ಕ್ಯಾಪ್ಟನ್ ಟ್ರ್ಯಾಕ್ಟರ್ ಸೇರಿ ಎಲ್ಲಾ ವಾಹನಗಳ ಮಾರಾಟ ಹೆಚ್ಚಿದೆ. ಎಲೆಕ್ಟ್ರಿಕಲ್ ವಾಹನ ಕೂಡ ಖರೀದಿ ಜೋರಾಗಿದೆ.