ಸಾಗರ : ಜೋಗದ ಬಳಿ ಟೆಂಪೊ ಪಲ್ಟಿ: ಮಹಿಳೆ ಸಾವು!
– ಶಿವಮೊಗ್ಗ : ಸಿಮೆಂಟ್ ಮೈಮೇಲೆ ಬಿದ್ದು ಗಾಂಧಿ ಬಜಾರ್ನ 6 ವರ್ಷದ ಮಗು ಸಾವು!
-ಹೊಸನಗರ : ಚಾಲಕನ ನಿಯಂತ್ರಣ ತಪ್ಪಿ ಕಬ್ಬಿನ ಲಾರಿ ಪಲ್ಟಿ
– ಶಿವಮೊಗ್ಗ: ಮೂತ್ರಕ್ಕೆ ಹೋದವನು ಚರಂಡಿಗೆ ಬಿದ್ದು ದುರ್ಮರಣ
NAMMUR EXPRESS NEWS
ಸೀಮಂತಕ್ಕೆ ತೆರಳುತ್ತಿದ್ದ ಟೆಂಪೋ ವಾಹನ ಪಲ್ಟಿಯಾದ ಘಟನೆ ಸಂಭವಿಸಿದ್ದು, ಟೆಂಪೋ ಪಲ್ಟಿಯಾಗಿ 19 ಜನರಿಗೆ ಗಂಭೀರ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಓರ್ವ ಮಹಿಳೆಯು ಸಾವನ್ನಪ್ಪಿದ್ದಾರೆ. ಶಿಕಾರಿಪುರ ಸಮೀಪ ಚಿನ್ನಿಕಟ್ಟೆ ಜೋಗದ ಬಳಿಯಲ್ಲಿ ಈ ಘಟನೆ ಸಂಭವಿಸಿದೆ. ಇವರೆಲ್ಲರೂ ಶಿವಮೊಗ್ಗದಿಂದ ಕೊಡಮಗ್ಗಿಗೆ ಸೀಮಂತ ಕಾರ್ಯಕ್ರಮಕ್ಕೆ ತೆರಳುತ್ತಿದ್ದರು. ಈ ವೇಳೆ ಚಿನ್ನಿಕಟ್ಟೆ ಜೋಗದ ಬಳಿಯಲ್ಲಿ ಟೆಂಪೋ ಪಲ್ಟಿಯಾಗಿದೆ. ಘಟನೆಯಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದು , ಗಾಯಾಳುಗಳು ಆರ್ಎಂಎಲ್ ನಗರದವರು ಎನ್ನಲಾಗಿದೆ.
ಸಿಮೆಂಟ್ ಜಿಂಕೆ ಮೈಮೇಲೆ ಬಿದ್ದು ಗಾಂಧಿ ಬಜಾರ್ನ 6 ವರ್ಷದ ಮಗು ಸಾವು!
ಶಿವಮೊಗ್ಗ ಟ್ರೀ ಪಾರ್ಕ್ ನಲ್ಲಿ ಸಿಮೆಂಟ್ ಜಿಂಕೆ ಮೇಲೆ ಕುಳಿತಿದ್ದ ಆರು ವರ್ಷದ ಮಗುವೊಂದು , ಸಿಮೆಂಟಿನ ಕಲಾಕೃತಿ ಮುರಿದು ಬಿದ್ದು ಸಾವನ್ನಪ್ಪಿದ ಘಟನೆ ನಿನ್ನೆ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಮುದ್ದಿನಕೊಪ್ಪದಲ್ಲಿ ಟ್ರೀ ಪಾರ್ಕ್ ಇದೆ. ಭಾನುವಾರವಾದ್ದರಿಂದ ಮಗುವೊಂದನ್ನ ಕುಟುಂಬಸ್ಥರು ಅಲ್ಲಿಗೆ ಕರೆದೊಯ್ದಿದ್ದರು. ಮಗು ಅಲ್ಲಿ ಆಟವಾಡುತ್ತಿತ್ತು. ಈ ವೇಳೆ ಅಲ್ಲಿಯೇ ಇದ್ದ ಸಿಮೆಂಟ್ನಲ್ಲಿ ಮಾಡಲಾಗಿದ್ದ ಕಲಾಕೃತಿ ಜಿಂಕೆಯ ಮೇಲೆ ಮಗುವನ್ನ ಕೂರಿಸಿದ್ದರು. ಈ ವೇಳೆ ಕಲಾಕೃತಿ ಮುರಿದುಬಿದ್ದಿದೆ.ಪರಿಣಾಮ ಕೆಳಕ್ಕೆ ಬಿದ್ದ ಮುಗುವಿಗೆ ಪೆಟ್ಟು ಬಿದ್ದಿದೆ.
ತಕ್ಷಣವೆ ಮಗುವನ್ನ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿದೆ. ಸದ್ಯ ಘಟನೆ ಸಂಬಂಧ ಕುಂಸಿ ಪೊಲೀಸ್ ಸ್ಟೇಷನ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮಗುವಿನ ಮಲೆಯೇ ಕಲಾಕೃತಿ ಬಿದ್ದಿದ್ದರಿಂದ ಮಗುವಿಗೆ ತೀವ್ರವಾಗಿ ಪೆಟ್ಟಾಗಿತ್ತು. ಗಾಂಧಿಬಜಾರ್ನ ನಿವಾಸಿಯೊಬ್ಬರ ಮಗುವಾದ ಸಮೀಕ್ಷಾ ಮೃತ ದುರ್ದೈವಿ. ಘಟನೆಯಲ್ಲಿ ಮಗುವಿಗೆ ಪೆಟ್ಟು ಬಿದ್ದಾಗಲೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಲು ಮಗುವಿನ ತಾಯಿ ಹರಸಾಹಸ ಪಟ್ಟಿದ್ದು, ತಕ್ಷಣಕ್ಕೆ ನೆರವು ಸಹ ಸಿಗದೇ ಮಗು ಆಸ್ಪತ್ರೆಯಲ್ಲಿ ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ.
ಶಿವಮೊಗ್ಗ : ಚರಂಡಿಗೆ ಮುಚ್ಚಿದ ಸ್ಲಾಬ್ ಕುಸಿದು ಬಿದ್ದು ವ್ಯಕ್ತಿಯೋರ್ವ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಗರದ ವಿನೋಬನಗರ ರೈಲ್ವೆ ಬ್ಯಾರಲಲ್ ರಸ್ತೆಯಲ್ಲಿ ನಡೆದಿದೆ. ಶಿವಮೊಗ್ಗ ನಗರದ ಬೊಮ್ಮನಕಟ್ಟೆ ನಿವಾಸಿ ಮುತ್ತಪ್ಪ (45) ಮೃತ ವ್ಯಕ್ತಿ. ಇವರು ಗುಜರಿ ವ್ಯಾಪಾರ ಮಾಡುತ್ತಿದ್ದರು. ಮತ್ತಪ್ಪ ಅವರು ಮೂತ್ರ ವಿಸರ್ಜನೆ ವೇಳೆ ಸ್ಲಾಬ್ ಕುಸಿದಿದೆ. ಹತ್ತು ಅಡಿ ಆಳದ ಚರಂಡಿಗೆ ಬಿದ್ದ ಪರಿಣಾಮ ಸ್ಥಳದಲ್ಲೇ ಅವರು ಸಾವನ್ನಪ್ಪಿದ್ದಾರೆ. ಮೃತನ ಮೃತದೇಹ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಹೊಸನಗರ: ಕಬ್ಬಿನ ಲಾರಿ ಪಲ್ಟಿ
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಹುಂಚ ಸಮೀಪದ ಆನೆಗದ್ದೆ ಗ್ರಾಮದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿರುವ ಘಟನೆ ನಡೆದಿದೆ. ಆನೆಗದ್ದೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಕಬ್ಬು ತುಂಬಿಕೊಂಡು ಹೋಗುತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿ ಉರುಳಿ ಬಿದ್ದಿದೆ. ಈ ಘಟನೆಯಲ್ಲಿ ಓರ್ವನಿಗೆ ಗಂಭೀರ ಗಾಯವಾಗಿದ್ದು ಹೊಸನಗರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಲಾರಿಯಲ್ಲಿ ಒಟ್ಟು ಆರು ಜನ ಪ್ರಯಾಣಿಸುತ್ತಿದ್ದು ಇವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಗಣಪತಿ ಶೆಟ್ಟಿ ಎಂಬ ಕಾರ್ಮಿಕರಿಗೆ ಗಂಭೀರ ಗಾಯವಾಗಿದ್ದು ಗಾಯಾಳುವನ್ನು ಹೊಸನಗರದ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿದೆ.