ನೀರು ಬದಲು ಆ್ಯಸಿಡ್ ಕುಡಿದ ಕ್ರಿಕೆಟಿಗ ಮಾಯಾಂಕ್!
– ಕರುನಾಡ ಕ್ರಿಕೆಟಿಗ ಐಸಿಯುನಲ್ಲಿ ಚಿಕಿತ್ಸೆ
– ಗುರುವಾರ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ರವಾನೆ
– ಹೆಮ್ಮೆಯ ಕ್ರಿಕೆಟಿಗನ ಆರೋಗ್ಯಕ್ಕಾಗಿ ಪ್ರಾರ್ಥನೆ!
NAMMUR EXPRESS NEWS
ಭಾರತ ಕಂಡ ಶ್ರೇಷ್ಠ ಕ್ರಿಕೆಟ್ ಆಟಗಾರರಲ್ಲಿ ಒಬ್ಬರಾದ ಕರ್ನಾಟಕದ ಹೆಮ್ಮೆಯ ಕ್ರಿಕೆಟಿಗ ಹಾಲಿ ಕರ್ನಾಟಕ ರಣಜಿ ತಂಡದ ನಾಯಕ ಮಾಯಾಂಕ್ ಅಗರವಾಲ್ ಈಗ ಗಂಭೀರ ಸ್ಥಿತಿಯಲ್ಲಿದ್ದಾರೆ. ತ್ರಿಪುರ ವಿರುದ್ಧ ರಣಜಿ ಪಂದ್ಯ ಗೆದ್ದು ಸೂರತ್’ಗೆ ವಿಮಾನದಲ್ಲಿ ಹೋಗುವ ವೇಳೆ ಅಗರ್ತಾಲದಲ್ಲಿ ರಾಜ್ಯ ತಂಡದ ನಾಯಕ ಮಯಾಂಕ್ ಅಗರ್ವಾಲ್ಬಾ ಯಾರಿಕೆಯಾಗುತ್ತಿದೆ ಎಂದು ತನ್ನ ಸೀಟಿನ ಮುಂಭಾಗದಲ್ಲಿದ್ದ ನೀರಿನ ಬಾಟಲಿಯನ್ನು ಓಪನ್ ಮಾಡಿ ಒಂದು ಗುಟುಕು ಕುಡಿದಿದ್ದಾರೆ. ನೀರಿನ ಬದಲು ಅವರು ಅಸಿಡ್ ಮಾದರಿ ದ್ರವ ಸೇವನೆ ಮಾಡಿದ್ದು ಬಾಯಿ, ನಾಲಿಗೆ, ಗಂಟಲು ಸುಟ್ಟು ಹೋದ ಅನುಭವ.
ಉರಿ ಉರಿ ಅಂತ ಕಿರುಚಿಕೊಂಡಿದ್ದಾರೆ. ಬಾಯಿ, ನಾಲಿಗೆ, ಗಂಟಲು, ಮುಖದ ಕೆಳಭಾಗ ಸುಟ್ಟು ಹೋಗಿತ್ತು. ಸದ್ಯ ಅಗರ್ತಾಲದ ಟಿಎಲ್ ಎಸ್ ಆಸ್ಪತ್ರೆಯಲ್ಲಿ ಐಸಿಯು ನಲ್ಲಿ ಮಯಾಂಕ್’ಗೆ ಚಿಕಿತ್ಸೆ ನೀಡಲಾಗುತ್ತಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ಗುರುವಾರ ಬೆಂಗಳೂರಿಗೆ ಶಿಫ್ಟ್ ಮಾಡಿ ಹೆಚ್ಚಿನ ಚಿಕಿತ್ಸೆ ಮುಂದುವರಿಯಲಿದೆ. ಅಗರ್ವಾಲ್ ಅವರು ನೀರೆಂದು ತಪ್ಪಾಗಿ ಭಾವಿಸಿ ಆ್ಯಸಿಡ್ ಕುಡಿದಿದ್ದಾರೆ. ಆ್ಯಸಿಡ್ ಕುಡಿದ ಮರುಕ್ಷಣವೇ ಅವರು ಎಲ್ಲವನ್ನು ಉಗುಳಿದ್ದಾರೆ. ಹಾಗಾಗಿ ಆ್ಯಸಿಡ್ ಅವರ ಹೊಟ್ಟೆಯನ್ನು ತಲುಪಿರುವ ಸಾಧ್ಯತೆ ಕ್ಷೀಣವಾಗಿದೆ. ವೈದ್ಯರು ಅವರ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸಿದ್ದಾರೆ. ಐಎಲ್ಎಸ್ ಆಸ್ಪತ್ರೆ ಅಗರ್ತಲಾ ಭಾರತೀಯ ಕ್ರಿಕೆಟಿಗ ಮಯಾಂಕ್ ಅಗರ್ವಾಲ್ ಅವರ ಆರೋಗ್ಯದ ಕುರಿತು ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, “ಅವರು ಪ್ರಾಯೋಗಿಕವಾಗಿ ಸ್ಥಿರರಾಗಿದ್ದಾರೆ ಮತ್ತು ನಿರಂತರವಾಗಿ ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದಾರೆ” ಎಂದು ಹೇಳಿದ್ದಾರೆ. ಇಡೀ ದೇಶ ಅವರ ಗುಣಮುಖರಾಗಲು ಹಾರೈಸುತ್ತಿದ್ದಾರೆ.