350 ಅಡಿಕೆ ಚೀಲವಿದ್ದ ಲಾರಿಗೆ ಬೆಂಕಿ!
– ಸಾಗರದಿಂದ ಸೊರಬ ಕಡೆ ಹೋಗುತ್ತಿದ್ದ ಲಾರಿ
– ಶಿಕಾರಿಪುರ: ಡಿಸಿಸಿ ಬ್ಯಾಂಕ್ ಎದುರು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ!
– ಶಿವಮೊಗ್ಗ: ನಕ್ಸಲ್ ನಾಯಕ ಕೃಷ್ಣಮೂರ್ತಿಗೆ ತಾತ್ಕಾಲಿಕ ರಿಲೀಫ್!
– ಆಗುಂಬೆ ಬಳಿ ಬಸ್ಸಿಗೆ ಬೆಂಕಿ ಹಚ್ಚಿದ್ದ ಪ್ರಕರಣ: ವಿಚಾರಣೆ ಮುಂದೂಡಿಕೆ
NAMMUR EXPRESS NEWS
ಸೊರಬ: ಅಡಿಕೆ ತುಂಬಿದ ಲಾರಿಗೆ ಬೆಂಕಿ ಹೊತ್ತಿಕೊಂಡ ಘಟನೆ ಮಂಗಳವಾರ ತಡರಾತ್ರಿ ಚನ್ನಾಪುರ ಗ್ರಾಮದ ಬಳಿ ನಡೆದಿದೆ. ಸಾಗರ ತಾಲ್ಲೂಕು ಅನಂದಪುರ ಐಎಂಎ ಟ್ರೇಡರ್ಸ್ನ ಇಮ್ತಿಯಾಜ್ ಅಹಮ್ಮದ್ ಎಂಬವರು ಆನಂದಪುರದಿಂದ 70 ಕೆಜಿಯ 350 ಚಾಲಿ ಅಡಿಕೆ ಚೀಲ ತುಂಬಿಕೊಂಡು ಸೊರಬ-ಶಿರಾಳಕೊಪ್ಪ ರಸ್ತೆಯಲ್ಲಿ ದೆಹಲಿಗೆ ರವಾನಿಸುತ್ತಿದ್ದರು. ಈ ವೇಳೆ ಚಲಿಸುವ ಲಾರಿಗೆ ಬ್ಯಾಟರಿ ಶಾರ್ಟ್ ಸರ್ಕೀಟ್ನಿಂದ ಬೆಂಕಿ ಹೊತ್ತಿಕೊಂಡು ಲಾರಿ ಸುಟ್ಟು ಕರಕಲಾಗಿದೆ. ಅಡಿಕೆ ತುಂಬಿದ ಸುಮಾರು 20 ಚೀಲಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಬೂದಿಯಾಗಿವೆ. ಸ್ಥಳಕ್ಕೆ ಸೊರಬ ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಡೆದಿದ್ದಾರೆ. ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸೊರಬ ಅಗ್ನಿಶಾಮಕ ಠಾಣೆಯಲ್ಲಿ ಪ್ರಕಾರಣ ದಾಖಲಾಗಿದೆ.
ಡಿಸಿಸಿ ಬ್ಯಾಂಕ್ ಎದುರು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ!
ಹಲವು ವರ್ಷಗಳ ಹಿಂದೆ ಡಿಸಿಸಿ ಬ್ಯಾಂಕ್ ಹರಾಜಿನಲ್ಲಿ ಪಡೆದ ಸತ್ತು ಇದುವರೆಗೂ ತನಗೆ ಹಸ್ತಾಂತರಿಸದ ಹಿನ್ನೆಲೆ ಸಾಲ ಸಮಸ್ಯೆಗೆ ಸಿಲುಕಿದ ವ್ಯಕ್ತಿಯೋರ್ವ ಶಿಕಾರಿಪುರ ಪೇಟೆಯಲ್ಲಿರುವ ಡಿಸಿಸಿ ಬ್ಯಾಂಕ್ ಎದುರು ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ ಘಟನೆ ಬುಧವಾರ ನಡೆದಿದೆ. ಎಸ್.ಪಿ.ಸಂತೋಷಕುಮಾರ್ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಪೆಟ್ರೋಲ್ ಸುರಿದುಕೊಂಡು ಬ್ಯಾಂಕ್ ಬಾಗಿಲಿನಲ್ಲಿಯೇ ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದರು. ಈ ವೇಳೆ ಸ್ಥಳದಲ್ಲಿದ್ದ ಸಾರ್ವಜನಿಕರು ಆತ್ಮಹತ್ಯೆ ಯತ್ನ ವಿಫಲ ಗೊಳಿಸಿದರು. ಸಂತೋಷಕುಮಾರ್ 2017ರಲ್ಲಿ ಡಿಸಿಸಿ ಬ್ಯಾಂಕ್ ನಡೆಸಿದ ಹರಾಜಿನಲ್ಲಿ ಚನ್ನಕೇಶವ ನಗರದ ಸುಸ್ತಿದಾರರೊಬ್ಬರಿಗೆ ಸೇರಿದ 30/50 ಅಳತೆಯಲ್ಲಿನ ಮೂರು ಅಂತಸ್ಥಿನ ಕಟ್ಟಡ, 4 ಗುಂಟೆ ಅಳತೆಯ ನಿವೇಶನ ಸ್ವತ್ತನ್ನು ₹76 ಲಕ್ಷಕ್ಕೆ ಯಶಸ್ವಿ ಬಿಡ್ಡುದಾರರಾಗಿ ಹರಾಜು ಪಡೆದಿದ್ದರು. 15 ದಿನಗಳಲ್ಲಿ ಬಿಡ್ನ ಪೂರ್ಣ ಮೊತ್ತ ಬ್ಯಾಂಕ್ಗೆ ಪಾವತಿಸಿದರು.
ಹರಾಜಿನ ನಂತರ ಸ್ವತ್ತು ಅಳತೆ ಮಾಡುವಾಗ ಮೂರು ಅಂತಸ್ಥಿನ ಕಟ್ಟಡದ ಕೇವಲ 5 ಅಡಿ ಮಾತ್ರ ಅಳತೆ ವ್ಯಾಪ್ತಿಗೆ ಬರುತ್ತದೆ ಎನ್ನುವುದು ಗೊತ್ತಾಗಿದೆ. ಅಲ್ಲಿಂದ ಇಲ್ಲಿಯವರೆಗೂ ನನಗೆ 4 ಗುಂಟೆ ನಿವೇಶನ ಮಾತ್ರ ನೀಡಿದ್ದು, ಕಟ್ಟಡ ಈವರೆಗೂ ಹಸ್ತಾಂತರಿಸಿಲ್ಲ ಎಂದು ಸಂತೋಷ್ ಆರೋಪಿಸಿದ್ದಾರೆ. ಈ ಕಾರಣಕ್ಕೆ ಡಿಸಿಸಿ ಬ್ಯಾಂಕ್ ವಿರುದ್ಧ ಪ್ರತಿಭಟಿಸಿ, ತಮ್ಮ ವ್ಯಾಪ್ತಿಗೆ ಬರುವ ಕಟ್ಟಡ ನೀಡಬೇಕು ಎಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸಾಲಕ್ಕಿಂತಲೂ 40 ಲಕ್ಷ ಹೆಚ್ಚು ಹಣ ಬ್ಯಾಂಕ್ಗೆ ಜಮೆ ಆಗಿತ್ತು ಎಂದರು.
ವಿವಾದ ಪರಿಹಾರ ಆಗುವವರೆಗೂ ಹೆಚ್ಚುವರಿ ಹಣ ಸ್ವತ್ತಿನ ಮಾಲೀಕರಿಗೆ ನೀಡ ಬೇಡಿ ಎಂದು ಮನವಿ ಮಾಡಿದ್ದರೂ, ಅವರೊಂದಿಗೆ ಬ್ಯಾಂಕ್ ಸಿಬ್ಬಂದಿ ಶಾಮೀಲಾಗಿ ಹಣವನ್ನೂ ವಾಪಸ್ ನೀಡಿದ್ದಾರೆ. ಹರಾಜಿ ನಲ್ಲಿ ಪಡೆದ ಸ್ವತ್ತು ಈವರೆಗೂ ನೀಡಿಲ್ಲ. ಹಣವೂ ಇಲ್ಲದಾಗಿದೆ. ಹರಾಜಿಗೆ ಪಡೆದ ಸಾಲ ಇದೀಗ ಶೂಲವಾಗಿ ಪರಿಣಮಿಸಿದ್ದು, ಸಾಯು ವುದೊಂದೇ ಮಾರ್ಗ ಎನ್ನುವಂತಾಗಿದೆ. ಎಂದು ಅಳಲು ತೋಡಿಕೊಂಡರು ಇನ್ನೂ ಈ ಬಗ್ಗೆ ತಮಗೆ ಹೆಚ್ಚಿನ ಮಾಹಿತಿ ಇಲ್ಲ, ವಿವರವನ್ನು ಮುಖ್ಯ ಶಾಖೆಗೆ ಕಳುಹಿಸಲಾಗಿದ್ದು, ಅಲ್ಲಿಂದ ಯಾವುದೇ ನಿರ್ದೇಶನ ಬಂದಿಲ್ಲವೆಂದು ಶಿಕಾರಿಪುರದ ಡಿಸಿಸಿ ಬ್ಯಾಂಕ್ ಮ್ಯಾನೇಜರ್ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಆಗುಂಬೆ ಬಳಿ ಬಸ್ಸಿಗೆ ಬೆಂಕಿ ಹಚ್ಚಿದ್ದ ಪ್ರಕರಣ: ನಕ್ಸಲ್ ನಾಯಕನಿಗೆ ವಿಚಾರಣೆ ಮುಂದೂಡಿಕೆ
ಶಿವಮೊಗ್ಗ: ನಕ್ಸಲ್ ನಾಯಕ ಬಿ.ಜಿ ಕೃಷ್ಣಮೂರ್ತಿ ಅವರ ಮೇಲಿರುವ ಪ್ರಕರಣಗಳ ವಿಚಾರಣೆಗೆ ದಿನಾಂಕ ನಿಗದಿಯಾಗಿದೆ. ಬಸ್ ಸುಟ್ಟು ಹಾಕಿದ್ದ ಗೇಟ್ ಬ್ಲಾಸ್ಟ್ ಮಾಡಿದ ಹಾಗೂ ದರೋಡೆ ಪ್ರಕರಣಗಳನ್ನ ಫೆ.29 ರಂದು ವಿಚಾರಣೆ ನಡೆಸಲು ದಿನಾಂಕ ನಿಗದಿ ಪಡೆದಿದೆ. ಸಾಕ್ಷಿದಾರರನ್ನ ವಿಡಿಯೋ ಕಾನ್ಸೆರೆನ್ಸ್ ಮೂಲಕ ವಿಚಾರಿಸಲಾಗುತ್ತಿದೆ. ಆಗುಂಬೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2007 ಮತ್ತು 2009 ರಂದು ನಡೆದೆ ಹೊಸಗದ್ದೆಯಲ್ಲಿ ಬಸ್ ಗೆ ಬೆಂಕಿ ಹಚ್ಚಿದ ಪ್ರಕರಣ, ಆಗುಂಬೆ ಅರಣ್ಯ ಗೇಟನ್ನಬ್ಲಾಸ್ಟ್ ಮಾಡಿದ ಪ್ರಕರಣ ಮತ್ತು ಅರುಣ್ ಕುಮಾರ್ ನಲ್ಲಿ ನಡೆದ ದರೋಡೆ ಪ್ರಕರಣ ಕುರಿತಂತೆ ಬುಧವಾರ ಹಾಗೂ ಗುರುವಾರ ಶಿವಮೊಗ್ಗ ನ್ಯಾಯಾಲಯದಲ್ಲಿ ಆರೋಪಪಟ್ಟಿಯನ್ನ ಚಾರ್ಜ್ ಮಾಡಲಾಗಿದೆ. ಈ ಚಾರ್ಜನ್ನು ಸುಳ್ಳು ಎಂದು ಬಿಜಿಕೆ ನ್ಯಾಯಾಧೀಶರ ಮುಂದೆ ಹೇಳಿದ್ದರಿಂದ ಮೇಲೆ ಈ ಪ್ರಕರಣಗಳ ವಿಚಾರಣೆಗೆ ಶಿವಮೊಗ್ಗದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಧೀಶರು ವಿಚಾರಣೆಗೆ ದಿನಾಂಕ ನೀಡಿದ್ದಾರೆ. ಇದರಿಂದ 14 ವರ್ಷ ಹಿಂದಿನ ಪ್ರಕರಣಗಳು ವಿಚಾರಣೆಗೆ ಸಿದ್ಧತೆಗೊಂಡತಾಗಿದೆ