ಅಪೆಕ್ಸ್ ಬ್ಯಾಂಕ್ಗೆ ಆರ್.ಎಂ.ಎಂ: ಮತ್ತೆ ಅಧ್ಯಕ್ಷಗಿರಿ?
– ಅಪೆಕ್ಸ್ ಬ್ಯಾಂಕ್ ನಿರ್ದೇಶಕರ ಸ್ಥಾನಕ್ಕೆ ವಿಜಯ್ ದೇವ್ ರಾಜೀನಾಮೆ
– ಮಂಜುನಾಥ ಗೌಡ ನಾಮ ನಿರ್ದೇಶನ: ಅಧ್ಯಕ್ಷ ಸ್ಥಾನ ಸಿಗುವ ಸಾಧ್ಯತೆ
NAMMUR EXPRESS NEWS
ತೀರ್ಥಹಳ್ಳಿ: ನಿಗಮ ಮಂಡಳಿ ಒಂದು ಸುತ್ತು ಮುಗಿಯುತ್ತಿದ್ದಂತೆ ಇನ್ನಷ್ಟು ಪ್ರಮುಖ ಹುದ್ದೆಗಳ ನೇಮಕಕ್ಕೆ ಸರ್ಕಾರ ಮುಂದಾಗಿದೆ. ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿರುವ ಸಹಕಾರಿ ನಾಯಕ ಡಾ.ಆರ್.ಎಂ.ಮಂಜುನಾಥ ಗೌಡ ಅವರನ್ನು ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಿ ನಾಮನಿರ್ದೇಶನ ಮಾಡಿಕೊಳ್ಳಲು ಅಪೆಕ್ಸ್ ಬ್ಯಾಂಕ್ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂಬ ಮಾಹಿತಿ ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಸರ್ಕಾರದ ಮಟ್ಟದಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ಮಂಜುನಾಥ ಗೌಡ ಪ್ರಭಾವಿ ನಾಯಕ. ಜತೆಗೆ ಡಿಕೆಶಿ ಆಪ್ತ ವಲಯದಲ್ಲಿ ಇದ್ದಾರೆ. ಹೀಗಾಗಿ ಈ ಬೆಳವಣಿಗೆ ಮಹತ್ವ ಪಡೆದಿದೆ.
ವಿಜಯ ದೇವ್ ರಾಜೀನಾಮೆ
ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ನಿಂದ ಬಸವಾನಿ ವಿಜಯದೇವ್ ಈ ಹಿಂದೆ ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಿ ನಾಮನಿರ್ದೇಶನಗೊಂಡಿದ್ದರು. ಅವರು ರಾಜೀನಾಮೆ ನೀಡಿದ್ದರಿಂದ ಆ ಸ್ಥಾನ ಖಾಲಿ ಉಳಿದಿತ್ತು. ಮಂಜುನಾಥ ಗೌಡ ಅವರ ನಿರ್ದೇಶಕ ಸ್ಥಾನ ಐದು ವರ್ಷಗಳ ಅವಧಿಗೆ ಇರುತ್ತದೆ. ಈ ಹಿಂದೆ ಅವರು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿದ್ದರು. ಈಗ ನಿರ್ದೇಶಕರಾಗಿ ನಾಮ ನಿರ್ದೇಶನಗೊಂಡಿದ್ದಾರೆ.ಹೀಗಾಗಿ ಅಧ್ಯಕ್ಷ ಸ್ಥಾನದಲ್ಲಿ ಕೂರುವ ಎಲ್ಲಾ ಸಾಧ್ಯತೆಗಳು ಇವೆ.