ಕರಾವಳಿಯಲ್ಲಿ ಭಾರೀ ಮಂಜು: ಜನ ಜೀವನಕ್ಕೆ ತೊಂದರೆ
– ಎಲ್ಲೆಡೆ ಮುಸುಕಿದ ವಾತಾವರಣ: ಹೆಡ್ ಲೈಟ್ ಹಾಕಿ ವಾಹನ ಸಂಚಾರ
– ವಿಮಾನ ಸೇವೆಯಲ್ಲಿ ಕೂಡ ವ್ಯತ್ಯಯ: ಪ್ರಯಾಣಿಕರ ಪರದಾಟ
NAMMUR EXPRESS NEWS
ಉಡುಪಿ/ಮಂಗಳೂರು: ಕರಾವಳಿ ಜಿಲ್ಲೆಯಾದ್ಯಂತ ಶನಿವಾರ ಬೆಳಗಿನ ಜಾವ ದಟ್ಟ ಮಂಜು ಕವಿದ ವಾತಾವರಣ ಕಂಡು ಬಂತು. ಇದರಿಂದ ರಸ್ತೆಗಳು ಗೋಚರಿಸದೆ ವಾಹನ ಸವಾರರು ತೊಂದರೆ ಅನುಭವಿಸುವಂತಾಯಿತು. ಇನ್ನು ಎಲ್ಲೆಡೆ ಚಳಿ ಹಾಗೂ ಮಂಜು ಹೆಚ್ಚಾಗಿದೆ. ನಸುಕಿನ ವೇಳೆಯಿಂದ ನಿರಂತರವಾಗಿ ಮಂಜಿನ ವಾತಾವರಣ ಮೂಡಿದ್ದು ಬೆಳಗಾದರೂ ಮಬ್ಬಿನ ವಾತಾವರಣ ಇಳಿಯಲಿಲ್ಲ. ಬೆಳಗ್ಗೆ 8 ಗಂಟೆಯವರೆಗೂ ದಟ್ಟ ಮೋಡ ಕವಿದ ವಾತಾವರಣ ಮುಂದುವರಿದಿತ್ತು ರಸ್ತೆಗಳು ಸಂಪೂರ್ಣ ಮಬ್ಬಿನಿಂದ ಆವರಿಸಿರುವುದರಿಂದ ವಾಹನಗಳು ಹೆಡ್ ಲೈಟ್ ಹಾಕಿ ಸಂಚರಿಸುತ್ತಿದ್ದ ದೃಶ್ಯ ಕಂಡು ಬಂತು. ಇದೇ ರೀತಿ ವಾತಾವರಣ ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿಯೂ ಕೂಡ ಕಂಡುಬಂದಿತ್ತು.
ವಿಮಾನ ಸೇವೆ ವ್ಯತ್ಯಾಸ: ಪ್ರಯಾಣಿಕರ ಪರದಾಟ
ಮಂಗಳೂರು ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಮಂಜು ಕಾರಣ ವಿಮಾನ ಸೇವೆ ವ್ಯತ್ಯಯವಾಗಿದ್ದು, ಬೆಂಗಳೂರು ಸೇರಿ ಎಲ್ಲೆಡೆ ವಿಮಾನ ಸೇವೆ ವ್ಯತ್ಯಾಸವಾಗಿತ್ತು