ಮಾಸ್ತಿಕಟ್ಟೆಯಲ್ಲಿ ಲಯನ್ಸ್ ಕ್ಲಬ್ 25ನೇ ವರ್ಷದ ರಂಗು!
– ನಮ್ಮೂರ್ ಎಕ್ಸ್ ಪ್ರೆಸ್, ಮಲೆನಾಡು ವಾಯ್ಸ್ ಪತ್ರಿಕೆ, ಸಿರಿಬೈಲ್ ಧರ್ಮೇಶ್ ಸೇರಿ ಅನೇಕರಿಗೆ ಸನ್ಮಾನ
– ಜನ ಮೆಚ್ಚುಗೆ ಪಡೆದ ಲಯನ್ಸ್ ಮಾದರಿ ಕಾರ್ಯಕ್ರಮ
NAMMUR EXPRESS NEWS
ಹೊಸನಗರ: ಲಯನ್ಸ್ ಅಂತರಾಷ್ಟ್ರೀಯ ಸಂಸ್ಥೆಯು 25ನೇ ವರ್ಷದ ಸಂಭ್ರಮದಲ್ಲಿ ಬೆಳ್ಳಿ ಹಬ್ಬ ಸಂಭ್ರಮ ಹಾಗೂ ವರಾಹಿ ಮಾಸ್ತಿಕಟ್ಟೆ ಸ್ನೇಹ ಸಂಬಂಧ ಕಾರ್ಯಕ್ರಮ ಮಾಸ್ತಿಕಟ್ಟೆಯ ಕೆಪಿಸಿ ಕಾಲೋನಿಯ ವರಾಹಿ ಕ್ರೀಡಾಂಗಣದಲ್ಲಿ ಸುಂದರ ಸಂಜೆಯಲ್ಲಿ ಅದ್ದೂರಿಯಾಗಿ ನಡೆಯಿತು. ಅಮೃತ ಗರ್ತಿಕೆರೆ ನಾರಾಯಣ ಗುರು ಮಠದ ರೇಣುಕಾನಂದ ಶ್ರೀಗಳು, ಕಾರ್ಯಕ್ರಮದ ಅಧ್ಯಕ್ಷರಾದ ವಾಸಪ್ಪ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮ ಉದ್ಘಾಟನೆ ಮಾಡಿದರು.
ಕಾರ್ಯಕ್ರಮದಲ್ಲಿ ಜಯರಾಮ್ ಶೆಟ್ಟಿ ಕುಂದಾಪುರ ದಂಪತಿ, ಬಿದನೂರು ಸಹೋದರಿಯರಾದ ದಾಕ್ಷಾಯಿಣಿ, ಜ್ಯೋತಿ, ನಿವೃತ್ತ ಶಿಕ್ಷಕರಾದ ಮಂಜುಳಮ್ಮ ಆನಂದ ರೆಡ್ಡಿ, ಮಲೆನಾಡಿನ ಖ್ಯಾತ ಮಾಧ್ಯಮ ಸಂಸ್ಥೆ ನಮ್ಮೂರ್ ಎಕ್ಸ್ಪ್ರೆಸ್ ಮುಖ್ಯಸ್ಥರಾದ ರಾಘವೇಂದ್ರ ತೀರ್ಥಹಳ್ಳಿ, ಮಲೆನಾಡು ವಾಯ್ಸ್ ಪತ್ರಿಕೆ ಸಂಪಾದಕ ನಗರ ರಾಘವೇಂದ್ರ ಹಾಗೂ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಧರ್ಮೇಶ್ ಸಿರಿಬೈಲ್ ಇವರನ್ನು ಗೌರವಿಸಲಾಯಿತು. ಮಲ್ನಾಡ್ ವಾಯ್ಸ್ ವಿಶೇಷ ಸ್ಮರಣ ಸಂಚಿಕೆ ಪುಸ್ತಕ ಬಿಡುಗಡೆ ಮಾಡಲಾಯಿತು. ಮಲೆನಾಡ ಗಾನ ಕೋಗಿಲೆ ಖ್ಯಾತಿಯ ಕಲಾವಿದೆ ದಿವ್ಯ ರಾಮಚಂದ್ರ ಮತ್ತು ಸಂಗಡಿಗರು, ಬೆಂಗಳೂರು ಇವರಿಂದ ಅಮೋಘ ಗಾನ ವೈಭವ ಕಾರ್ಯಕ್ರಮ ನಡೆಯಿತು.