ಹೊಸ ನಗರ ತಾಲೂಕಿಗೆ ಬರುತ್ತೆ ಮತ್ತಷ್ಟು ಸರ್ಕಾರಿ ಬಸ್
– ಮಣಿಪಾಲಕ್ಕೂ ನೇರ ಬಸ್ ವ್ಯವಸ್ಥೆ
– ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿಕೆ
NAMMUR EXPRESS NEWS
ಹೊಸನಗರ: ತಾಲೂಕಿನಲ್ಲಿ ಕೆಂಪು ಬಸ್ಸುಗಳ ಕೊರತೆ ಇದೆ. ಈ ಬಗ್ಗೆ ಸಾಕಷ್ಟು ಬೇಡಿಕೆ ಹಲವಾರು ವರ್ಷಗಳಿಂದ ಇದೆ. ಆ ಕೊರತೆಯನ್ನು ನೀಗಿಸುವ ಕೆಲಸ ಮಾಡುತ್ತೇನೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಷ ಬೇಳೂರು ಭರವಸೆ ನೀಡಿದರು. ಪಟ್ಟಣದ ಈಡಿಗರ ಭವನದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಸರ್ಕಾರದ ಐದು ಗ್ಯಾರಂಟಿಗಳ ಯೋಜನೆಗಳ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಈ ಬಾರಿ ಸಾಗರ ಹೊಸನಗರ ವಿಧಾನಸಭಾ ಕ್ಷೇತ್ರಕ್ಕೆ 40 ಸರ್ಕಾರಿ ಬಸ್ಸುಗಳಿಗಾಗಿ ಬೇಡಿಕೆ ಸಲ್ಲಿಸಿದ್ದೇನೆ. ಸರ್ಕಾರ 40 ಬಸ್ಸುಗಳನ್ನು ನೀಡುವ ಸಾಧ್ಯತೆ ಇದ್ದು ಅದರಲ್ಲಿ 20 ಬಸ್ಸುಗಳನ್ನು ಹೊಸನಗರಕ್ಕೆ ನೀಡಲಾಗುವುದು ಎಂದರು. ಅಲ್ಲದೇ ಈ ಭಾಗದಲ್ಲಿ ಮಣಿಪಾಲ್ ಗೆ ತೆರಳುವವರು ಸಾಕಷ್ಟು ಜನರಿದ್ದು ಅಲ್ಲಿಗೂ ಶೀಘ್ರ ಬಸ್ಸಿಗೆ ಅವಕಾಶ ನೀಡಲಾಗುವುದು ಎಂದರು. ಹೊಸನಗರ ತಾಲೂಕಿನ ವಿವಿಧ ಅಭಿವೃದ್ಧಿಗಾಗಿ ರೂ.280 ಕೋಟಿ ಅನುದಾನ ತರಲಾಗಿದೆ. ಮುಂದಿನದಿನದಲ್ಲಿ ತಾಲೂಕಿನ ಯಾವುದೇ ಭಾಗಕ್ಕು ಕೊರತೆ ಆಗದಂತೆ ಕುಡಿಯುವ ನೀರಿನ ಯೋಜನೆ ಕಲ್ಪಿಸಲಾಗುವುದು ಎಂದರು.
ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ವಿಪಕ್ಷಗಳು ಟೀಕಿಸುತ್ತಿವೆ.
ಆದರೆ ರಾಜ್ಯದ ಜನ ಜನರು ಗ್ಯಾರಂಟಿಯಿಂದ ಸಂತಸರಾಗಿದ್ದಾರೆ. ಈ ಹಿಂದೆ ಯಡಿಯೂರಪ್ಪ ಭಾಗ್ಯಲಕ್ಷ್ಮೀ ಯೋಜನೆ ತಂದಾಗ ಚನ್ನಾಗಿತ್ತಾ ಎಂದು ಪ್ರಶ್ನಿಸಿದ ಅವರು, ಬಡವರ ಪೂರಕ ಯೋಜನೆಗಳು ಏನೇ ಬರಲಿ ಯಾರೇ ತರಲಿ ಅದನ್ನು ಸ್ವಾಗತಿಸುವ ಮನೋಭಾವ ಬೆಳಸಿಕೊಳ್ಳಿ ಎಂದು ಸಲಹೆ ನೀಡಿದರು. ಈ ವೇಳೆ ತಹಶೀಲ್ದಾರ್ ರಶ್ಮೀ ಹಾಲೇಶ್, ತಾಪಂ ಇಒ ನರೇಂದ್ರಕುಮಾರ್, ಬಿಇಒ ಹೆಚ್.ಆರ್.ಕೃಷ್ಷಮೂರ್ತಿ, ಸಿಪಿಐ ಗುರಣ್ಷ ಹೆಬ್ಬಾಳ್, ಗ್ರಾಪಂ ಒಕ್ಕೂಟದ ಅಧ್ಯಕ್ಷ ಶ್ರೀನಿವಾಸ ರೆಡ್ಡಿ, ಸಂಚಾಲಕ ಚಿದಂಬರ್ ಮಾರುತಿಪುರ, ಯುವ ಒಕ್ಕೂಟದ ಅಧ್ಯಕ್ಷ ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಭಾಗವಹಿಸಿದ್ದರು.