ಒಂದು ನಿಂಬೆಹಣ್ಣು ಬೆಲೆ 1.5 ಲಕ್ಷ!
– ಬೆಲೆ ಕೇಳಿ ಶಾಕ್ ಆದ ನೆಟ್ಟಿಗರು..!
– 285 ವರ್ಷ ಹಳೆಯ ನಿಂಬು
NAMMUR EXPRESS NEWS
ಒಂದು ನಿಂಬೆಹಣ್ಣು ಅಬ್ಬಬ್ಬಾ ಅಂದ್ರೆ 5 ಅಥವಾ 6 ರೂಪಾಯಿಗೆ ಸಿಗುತ್ತದೆ. ಅದರಲ್ಲೂ ಬೇಸಿಗೆ ಬಂದರೆ ಕೊಂಚ ಬೆಲೆ ಹೆಚ್ಚಾಗುತ್ತದೆ. ಆದರೆ, ಇಲ್ಲೊಂದು ನಿಂಬೆಹಣ್ಣು ಭಾರಿ ಬೆಲೆಗೆ ಮಾರಾಟವಾಗುವ ಮೂಲಕ ದಾಖಲೆ ಬರೆದಿದೆ. ಹೌದು, ಈ ನಿಂಬೆಹಣ್ಣು ಬರೋಬ್ಬರಿ 1.5 ಲಕ್ಷಕ್ಕೆ ಹರಾಜಾಗಿದ್ದು, ಈ ಸುದ್ದಿ ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ. ಇಂಗ್ಲೆಂಡಿನ ಕುಟುಂಬವೊಂದಕ್ಕೆ ಮನೆಯನ್ನು ಸ್ವಚ್ಛಗೊಳಿಸುತ್ತಿದ್ದಾಗ 19ನೇ ಶತಮಾನದ ಬೀರುವೊಂದರಲ್ಲಿ 285 ವರ್ಷ ಹಳೆಯ ನಿಂಬೆಹಣ್ಣು ಸಿಕ್ಕಿದೆ. ಈ ಹಣ್ಣು ಇದೀಗ ಸುಮಾರು ರೂ.1.5 ಲಕ್ಷಕ್ಕೆ ಹರಾಜಾಗಿ ದಾಖಲೆ ಬರೆದಿದೆ.
ಆದ್ರೆ, ಈ ನಿಂಬೆಹಣ್ಣು ತಿನ್ನಲು ಯೋಗ್ಯವಾಗಿಲ್ಲ. ಬ್ರಿಟಿಷ್ ಮಾಧ್ಯಮ ವರದಿಗಳ ಪ್ರಕಾರ, ಕುಟುಂಬವೊಂದಕ್ಕೆ ಮನೆಯನ್ನು ಸ್ವಚ್ಛಗೊಳಿಸುವಾಗ 19ನೇ ಶತಮಾನದ ನಿಂಬೆಹಣ್ಣು ಸಿಕ್ಕಿದೆ. ಇದು 2 ಇಂಚಿನ ಕಂದುಬಣ್ಣದ ವಿಲ್ವೆಡ್ ತಳಿಯ ನಿಂಬೆ. ಸುಮಾರು 19ನೇ ಶತಮಾನದ್ದು ಅಂತ ತಿಳಿದಿದ್ದ ಕುಟುಂಬಕ್ಕೆ, ಅದು 285 ವರ್ಷ ಹಳೆಯದು ಎಂದು ತಿಳಿದು ಶಾಕ್ ಆಗಿದೆ. ಇದಲ್ಲದೆ, ನಿಂಬೆ ಮೇಲೆ ನವೆಂಬರ್ 4, 1739 ರಂದು ಮಿಸ್ ಇ ಬಾಕ್ಸರ್ ಅದನ್ನು ಉಡುಗೊರೆಯಾಗಿ ನೀಡಿದ್ದಾಗಿ ಬರೆಯಲಾಗಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಈ ನಿಂಬೆಯನ್ನು ಭಾರತದಿಂದ ಇಂಗ್ಲೆಂಡ್ಗೆ ತರಲಾಯಿತು ಎಂದು ನಂಬಲಾಗಿದೆ.