ಸಕಾಲಕ್ಕೆ ಚಿಕಿತ್ಸೆ ಸಿಗದೆ ವೃದ್ದೆ ಸಾವು: ಅಯ್ಯೋ ವಿಧಿಯೇ?
– ರಿಪ್ಪಿನಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಅವ್ಯವಸ್ಥೆ
– ವೈದ್ಯರೂ ಇಲ್ಲ…ಸಿಬ್ಬಂದಿಯೂ ಇಲ್ಲ…
– ರಿಪ್ಪಿನಪೇಟೆ ಜನರ ಕಾಪಾಡು ದೇವರೇ..!
NAMMUR EXPRESS NEWS
ಹೊಸನಗರ: ಹೊಸನಗರ ತಾಲೂಕಿನ ರಿಪ್ಪನಪೇಟೆ ಪ್ರದೇಶದಲ್ಲಿರುವ ಸರ್ಕಾರಿ ಆಸ್ಪತ್ರೆ ಇದ್ದರೂ ರೋಗಿಗಳ ಪಾಲಿಗೆ ಏನೂ ಪ್ರಯೋಜನವಿಲ್ಲದಂತಾಗಿವೆ. ರಿಪ್ಪನಪೇಟ್ ಹಳೆ ಸಂತೆ ಮಾರ್ಕೆಟ್ ರೋಡಿನ ಹನುಮಂತಪ್ಪ ಪತ್ನಿ ಯಾದ ಲಕ್ಷ್ಮಮ್ಮ (50) ಎಂಬುವರಿಗೆ ರಕ್ತದೊತ್ತಡ ಕಮ್ಮಿಯಾಗಿದ್ದು ತೊಂದರೆ ಕಾಣಿಸಿಕೊಂಡಿದ್ದು, ಗುರುವಾರ ಸಂಜೆ ಸಮಯದಲ್ಲಿ ಚಿಕಿತ್ಸೆಗಾಗಿ ರಿಪ್ಪನಪೇಟೆ ಆಸ್ಪತ್ರೆಗೆ ಕರೆ ತಂದಿದ್ದಾರೆ. ಆಸ್ಪತ್ರೆಯಲ್ಲಿ ಯಾವುದೇ ಸಿಬ್ಬಂದಿಯವರು ಇರುವುದಿಲ್ಲ ಹೊಸದಾಗಿ ಸೇರ್ಪಡೆಗೊಂಡಿದ್ದ ನರ್ಸು ಅಲ್ಲಿ ಇದ್ದು ಅವರು ರೋಗಿಯನ್ನು ಪರೀಕ್ಷಿಸಲು ಭಯ ಪಡುತ್ತಿದ್ದರು ತಕ್ಷಣ ಚಿಕಿತ್ಸೆ ನೀಡುವಂತೆ ರೋಗಿಯ ಕಡೆಯವರು ಕೇಳಿಕೊಂಡಿದ್ದಾರೆ. ಅಲ್ಲಿ ಯಾರೊಬ್ಬರೂ ಸ್ಪಂದಿಸಿಲ್ಲ.
ಚಿಕಿತ್ಸೆ ನೀಡಬೇಕಾದ ವೈದ್ಯರೂ ಇರಲಿಲ್ಲ. ಅಲ್ಲಿ ಆಂಬುಲೆನ್ಸ್ ವ್ಯವಸ್ಥೆ ಇದ್ದು ಅಲ್ಲಿ ಆಂಬುಲೆನ್ಸ್ ಕೂಡ ಇರುವುದಿಲ್ಲ ಆದ್ದರಿಂದ ನಿರಶಿತಾರಾದ ರೋಗಿ ಕಡೆಯವರು ಒಮಿನಿ ಮಾಡಿಕೊಂಡು ಶಿವಮೊಗ್ಗ ಹಾಸ್ಪಿಟಲ್ ಕರೆದು ಕೊಂಡು ಹೋಗುತ್ತಾರೆ. ಆಸ್ಪತ್ರೆಯಲ್ಲಿ ಸೇರಿಸುತ್ತಾರೆ ಚಿಕಿತ್ಸೆ ನೀಡಿದ ನಂತರ ಎಚ್ಚರಾಗೊಳ್ಳುತ್ತರೆ ಶಿವಮೊಗ್ಗದ ವೈದ್ಯರು ಈಗಾಗಲೇ ತಡವಾಗಿದ್ದು ಅಕ್ಸಿಜನ್ ಇಲ್ಲದೆ ಕರೆದುಕೊಂಡು ಬಂದಿರುವುದರಿಂದ ಅವರು ಯಾವುದೇ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ಹೇಳಿದ್ದಾರೆ . ಬೇರೆ ಆಸ್ಪತ್ರೆಗೆ ಕೊಂಡೋಯ್ಯೋಬೇಕಾಗಿ ತಿಳಿಸಿದ್ದಾರೆ. ಅಷ್ಟರಲ್ಲಿ ವೃದ್ದೆಯು ಸಾವನಪ್ಪಿದ್ದಾರೆ. ಈ ಆಸ್ಪತ್ರೆ ಮತ್ತು ಈ ವೈದ್ಯರ ಬಗ್ಗೆ ಹಲವು ಮಾದ್ಯಮಗಳು ಸಾಕಷ್ಟು ಬಾರಿ ಸುದ್ದಿ ಮಾಡಿರುತ್ತವೆ ಹಾಗೂ ಶಾಸಕರಾದ ಬೇಳೂರು ಅವರು ಕೂಡ ಸಾಕಷ್ಟು ಬಾರಿ ಹೇಳಿದ್ದಾರೆ ಆದರೆ ವೈದ್ಯರು ಮತ್ತು ವೈದ್ಯಕೀಯ ಆಡಳಿತ ಮಂಡಳಿ ಈ ಬಗ್ಗೆ ನಿರ್ಲಕ್ಷ ತೋರುತ್ತಿರುವುದು ಬಡವರ ಪಾಲಿಗೆ ಶಾಪವಾಗಿ ಪರಿಣಮಿಸಿದೆ.
ನರ್ಸ್ಗಳೇ ಇಲ್ಲಿ ಡಾಕ್ಟರ್!
ರೋಗಿಗಳಿಗೆ ತರಬೇತಿಯಲ್ಲಿರುವ ನರ್ಸ್ಗಳೇ ವೈದ್ಯರಾಗಬೇಕಾಗುತ್ತದೆ. ಆದ್ದರಿಂದ ರೋಗಿಗಳು ಅಷ್ಟಾಗಿ ಬರುತ್ತಿಲ್ಲ ಆದರೆ ತುರ್ತು ಸಮಯದಲ್ಲಿ ಹೋಗಲೇ ಬೇಕಾದ ಪರಿಸ್ಥಿತಿ ಬರುತ್ತದೆ ತಪ್ಪಿತಸ್ಥ ವೈದ್ಯರ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಹಾಗೂ ಪದೇಪದೇ ಇಂತಹ ಘಟನೆಗಳು ನಡೆಯುತ್ತಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಇಂತಹ ವೈದ್ಯರ ವಿರುದ್ಧ ಕ್ರಮ ಕೈಗೊಂಡು, ಬೇರೆಡೆಗೆ ವರ್ಗಾವಣೆ ಮಾಡಬೇಕು ಎಂಬ ಆಕ್ರೋಶ ಜನರಿಂದ ವ್ಯಕ್ತವಾಗಿದೆ.
ಸರ್ಕಾರದ ನಿರ್ಲಕ್ಷ್ಯಕ್ಕೆ ಬಡವರ ಬದುಕು ಬಲಿ!
ಹನುಮಂತಪ್ಪ ಅವರು ಕೂಲಿ ಕೆಲಸ ಮಾಡಿಕೊಂಡು ಹಾಗೂ ಲಕ್ಷ್ಮಮ್ಮ ಅವರು ಹೋಟೆಲಿನಲ್ಲಿ ಪಾತ್ರೆ ತೊಳೆದುಕೊಂಡು ಜೀವನ ನಡೆಸುತಿದ್ದರು. ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು ಒಬ್ಬಳು ವಿವಾಹ ಆಗಿದ್ದು ಮತ್ತೊಬ್ಬಳ ವಿವಾಹ ಮಾಡಲು ಕಷ್ಟ ಪಟ್ಟು ಕೆಲಸ ಮಾಡುತ್ತಿದ್ದರು. ಆದರೆ ಈ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ ದಿಂದ ಲಕ್ಷ್ಮಮ್ಮನನ್ನು ಕಳೆದುಕೊಂಡಿದ್ದಾರೆ. ರೋಗಿಗಳಿಗೆ ಸಕಾಲಕ್ಕೆ ಚಿಕಿತ್ಸೆ ದೊರೆಯದೆ ಪ್ರಾಣ ಕಳೆದುಕೊಳ್ಳುವ ಸ್ಥಿತಿ ಉಂಟಾಗಿದ್ದು, ಇಲ್ಲಿ ವೈದ್ಯರು ಇದ್ದರೂ ಯಾವುದೇ ಉಪಯೋಗವಿಲ್ಲದಂತಾಗಿದೆ.
ಬಡವರ ಅರೋಗ್ಯ ಸರ್ಕಾರಕ್ಕೆ ಬೇಡವಾ?
ಸರ್ಕಾರಿ ಆಸ್ಪತ್ರೆ ವೈದ್ಯರು ಯಾವಾಗಲೂ ಮನೆಯಲ್ಲಿ ಇರುತ್ತಾರೆ. ಯಾವುದೇ ರೋಗಿಗಳು ಬಂದರೂ ಪ್ರತಿಕ್ರಿಯೆ ನೀಡುತ್ತಿಲ್ಲ. ಹಲವು ಬಾರಿ ಈ ವೈದ್ಯನ ನಿರ್ಲಕ್ಷ್ಯದಿಂದ ಅನಾಹುತಗಳು ಆಗಿದ್ದು ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಸಾವು ಕೂಡ ಆಗಿವೆ. ಈ ಬಗ್ಗೆ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮತ್ತು ಕ್ಷೇತ್ರದ ಶಾಸಕರಿಗೆ ಅರಿವು ಇದ್ದರೂ ಏನೂ ಮಾಡಲಾಗದೆ ಅಸಹಾಯಕತೆಯಿಂದ ಇದ್ದಾರೆ. ಇದರಿಂದ ನಿಜವಾಗಿಯೂ ಹಳ್ಳಿಯ ಬಡ ಜನರ ಆರೋಗ್ಯ ಸ್ಥಿತಿಯ ಬಗ್ಗೆ ಹೇಳತೀರದಾಗಿದೆ