ಅಜೆಕಾರಿನಲ್ಲಿ ಫೆ.25ಕ್ಕೆ ಬೃಹತ್ ಉಚಿತ ಹೃದಯ ತಪಾಸಣಾ ಶಿಬಿರ
– ಮಂಗಳೂರಿನ ಹೆಸರಾಂತ ಹೃದಯ ತಜ್ಞ ಡಾ|ಪದ್ಮನಾಭ ಕಾಮತ್ ಅವರ ತಂಡದಿಂದ ತಪಾಸಣೆ
NAMMUR EXPRESS NEWS
ಕಾರ್ಕಳ: ಕರೋನಾ ಕಾಲಘಟ್ಟದ ಬಳಿಕ ದೇಶದಲ್ಲಿ ಹೃದಯ ಘಾತಕ್ಕೆ ಬಲಿಯಾಗುವವರ ಸಂಖ್ಯೆ ತೀವ್ರ ಏರುಗತಿಯಲ್ಲಿ ಸಾಗುತ್ತಿದೆ. ನಗರಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಗೆ ಬೇಕಾದ ಸುಸಜ್ಜಿತ ಆಸ್ಪತ್ರೆಗಳು ಇವೆ.ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಸುಸಜ್ಜಿತ ಆಸ್ಪತ್ರೆಗಳು ಇಲ್ಲ. ಈ ಹಿನ್ನೆಲೆಯಲ್ಲಿ ಹೃದಯಕ್ಕೆ ಸ್ಥಳೀಯ ಸಂಘಸಂಸ್ಥೆಗಳು ಸೇರಿದಂತೆ ಈ ಬೃಹತ್ ಹೃದಯ ತಪಾಸಣಾ ಶಿಬಿರಕ್ಕೆ ಕೈಜೋಡಿಸಿವೆ. ಅಜೆಕಾರು ಶ್ರೀ ರಾಮಮಂದಿರ ಟ್ರಸ್ಟ್, ಅಜೆಕಾರು ಸಾರ್ವಜನಿಕ ಶಾರದಮಹೋತ್ಸವ ಸಮಿತಿ , ಡಾ. ಟಿ ಎಂ ಎ ಪೈ ರೋಟರಿ ಆಸ್ಪತ್ರೆ ಕಾರ್ಕಳ, ಮಾಹೆ ಮಣಿಪಾಲ, ಕಾರ್ಡಿಯಾಲಜಿ ಅಟ್ ಡೋರ್ಸ್ಟೆಪ್ ಫೌಂಡೇಶನ್ (ಕ್ಯಾಡ್) ಸಂಸ್ಥೆ ಇದರ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನ ಹೆಸರಾಂತ ಹೃದಯ ತಜ್ಞ ಡಾ|ಪದ್ಮನಾಭ ಕಾಮತ್ ಅವರ ತಂಡದಿಂದ ನೇತೃತ್ವದಲ್ಲಿ ಫೆ.25 ರಂದು ಅಜೆಕಾರು ರಾಮಮಂದಿರದಲ್ಲಿ ಬೃಹತ್ ಉಚಿತ ಹೃದಯ ತಪಾಸಣಾ ಶಿಬಿರ ವು ಬೆ.8 ರಿಂದ ಮಧ್ಯಾಹ್ನ 12.30 ವರೆಗೆ ನಡೆಯಲಿದೆ.
ಅಜೆಕಾರು, ಹಿರ್ಗಾನ ಸುತ್ತಮುತ್ತಲಿನ ಜನರಿಗೆ ಅವಕಾಶ
ಪ್ರಾಥಮಿಕ ಆರೋಗ್ಯ ಕೇಂದ್ರ ಅಜೆಕಾರು, ಪ್ರಾಥಮಿಕ ಆರೋಗ್ಯ ಕೇಂದ್ರ ದೊಂಡೆರಂಗಡಿ, ಪ್ರಾಥಮಿಕ ಆರೋಗ್ಯ ಕೇಂದ್ರ ಮುನಿಯಾಲು, ಪ್ರಾಥಮಿಕ ಆರೋಗ್ಯ ಕೇಂದ್ರ ಹಿರ್ಗಾನ , ಇದರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸಾರ್ವಜನಿಕರು ಪ್ರಯೋಜನ ಪಡೆಯಬಹುದಾಗಿದೆ. ಸುಮಾರು ಒಂದು ಸಾವಿರಕ್ಕೂ ಹೆಚ್ಚು ಹೃದ್ರೋಗ ತಪಾಸಣಾ ಶಿಬಿರಗಳನ್ನು ಆಯೋಜಿಸಿ ಯಶಸ್ವಿ ಯಾಗಿರುವ ಮಂಗಳೂರಿನ ಡಾ| ಪದ್ಮನಾಭ ಕಾಮತ್ ತಂಡವೆ ನೇತೃತ್ವ ವಹಿಸಿದೆ.
ಯಾರು ಯಾರು ಭಾಗವಹಿಸಬಹುದು?
ಸಮಾನ್ಯ ಹೃದಯ ತಪಾಸಣೆ, ಮಧುಮೇಹ ಮತ್ತು ರಕ್ತದೊತ್ತಡ ದಿಂದ ಬಳಲುತ್ತಿರುವವರು,ಹೃದಯ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿರುವವರು, ಹೃದಯ ಚಿಕಿತ್ಸೆಗೆ ಒಳಗಾದವರು, ಕೆಂಜಿನಿಟಲ್ ಹಾರ್ಡ್ ರಿಮಾಟಿಕ್ ಹಾರ್ಟ್ ತೊಂದರೆಗೆ ಒಳಗಾದರು, ಹೃದಯ ತೊಂದರೆ ಸಂಬಂದಿತ ಎಲ್ಲಾ ಮಾಹಿತಿಗಳನ್ನು ಪಡೆಯಬಹುದಾಗಿದೆ. ಫೆ.19 ರಿಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯ ನಿಗದಿ ಪಡಿಸಿದ ಸೋಮವಾರದಿಂದ ಗ್ರಾಮ ವ್ಯಾಪ್ತಿಗಳ ಎಲ್ಲಾ ಇಸಿಜಿ ಕೇಂದ್ರ ಗಳಲ್ಲಿ ಪೂರ್ವ ದಲ್ಲಿ ರಿಜಿಸ್ಟ್ರಾರ್ ಮಾಡಬಹುದು. ಇದರಿಂದಾಗಿ ಸಲಹೆ ಸೂಚನೆಗಳನ್ನು ವೇಗವಾಗಿ ಪಡೆಯಲು ಸಾಧ್ಯವಾಗಲಿದೆ. ಅಜೆಕಾರು ವ್ಯಾಪ್ತಿಯಲ್ಲಿ 4 ಇಸಿಜಿ ಕೇಂದ್ರಗಳಿದ್ದು ಹೆಚ್ಚಿನ ಪ್ರಯೋಜನ ಪಡೆಯಬಹುದಾಗಿದೆ.
ಶಿಬಿರದ ವಿಶೇಷ ಏನು?
ಪ್ರತಿಯೊಂದು ಗ್ರಾಮೀಣ ಅರೋಗ್ಯ ಶಿಬಿರವು ತನ್ನದೇ ಆದ ಒಂದು ವೈಶಿಷ್ಟ್ಯತೆ ಹೊಂದಿದೆ. ನಾನು ಮಾಡುವ ಪ್ರಯತ್ನ ಕೇವಲ ವೈದ್ಯನಾಗಿ ಅಲ್ಲಾ . ಪ್ರತಿಯೊಂದು ಶಿಬಿರ ದಲ್ಲಿ ನಾನು ಸ್ವಯಂಸೇವಕನಾಗಿ ದುಡಿದಿದ್ದೇನೆ. ಆರೋಗ್ಯವೇ ನಮ್ಮ ಆಸ್ತಿಯಾಗಿದೆ. ನಾವೆಲ್ಲರೂ ಜಾತಿ ಮತ ಧರ್ಮ ತೊರೆದು ಈ ಶಿಬಿರದಲ್ಲಿ ಭಾಗವಹಿಸೋಣ .
– ಡಾ |ಪದ್ಮನಾಭ ಕಾಮತ್ ಕೆ ಎಂಸಿ ಮಂಗಳೂರು