ಫೆ.25 ರಂದು ಮಲೆನಾಡು ಕೋಳಿ ಸಾಕಾಣಿಕೆದಾರರ ಸಂಘದ ಮಹಾಸಭೆ
– 2ನೇ ವರ್ಷದ ಮಹಾ ಸಭೆ: ಕೋಳಿ ಸಾಕಾಣಿಕೆ ಮಾಹಿತಿ ಕಾರ್ಯಗಾರ
– ನಗರದ ಶ್ರೀಧರಪುರ ಶ್ರೀರಾಮ ಸಭಾಭವನದಲ್ಲಿ ಆಯೋಜನೆ: ಸರ್ವರಿಗೂ ಸ್ವಾಗತ
NAMMUR EXPRESS NEWS
ಹೊಸನಗರ: ಮಲೆನಾಡು ಕೋಳಿ ಸಾಕಾಣಿಕೆದಾರರ ಸಂಘ, ಹೊಸನಗರ-ತೀರ್ಥಹಳ್ಳಿ ತಾಲೂಕು ಇದರ ಎರಡನೇ ವರ್ಷದ ವಾರ್ಷಿಕ ಮಹಾಸಭೆಯು ಫೆ.25ರ ಭಾನುವಾರ ಬೆಳಗ್ಗೆ 9ಕ್ಕೆ ನಗರದ ಶ್ರೀಧರಪುರ ಶ್ರೀರಾಮ ಸಭಾಭವನದಲ್ಲಿ ನಡೆಯಲಿದೆ. ಈ ಸಭೆಯು ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆದಾರರ ಒಕ್ಕೂಟದ ಅಧ್ಯಕ್ಷರ ಉಪಸ್ಥಿತಿಯಲ್ಲಿ ಜರುಗಲಿದ್ದು, ಸರ್ವ ಸದಸ್ಯರು ಸಕಾಲಕ್ಕೆ ಆಗಮಿಸಿ ಸಭೆಯನ್ನು ಯಶಸ್ವಿಗೊಳಿಸಿಕೊಡಬೇಕಾಗಿ ಕೋರಿದೆ. ಶಾಸಕ ಆರಗ ಜ್ಞಾನೇಂದ್ರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಕೋಳಿ ಸಾಕಾಣಿಕೆದಾರರ ಸಂಘದ ಅಧ್ಯಕ್ಷರಾದ ಅಂಕಿತ್ ಮೇಕೆರಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಕೋಳಿ ಸಾಕಾಣಿಕೆದಾರರ ಒಕ್ಕೂಟದ ಅಧ್ಯಕ್ಷರಾದ ನಂಜುಂಡಪ್ಪ, ಬೇಗಾನೆ ಗ್ರೂಪ್ಸ್ ಸಿಇಓ ವಿಕಾಸ್ ಗೌಡ, ಕೋಳಿ ಸಾಕಾಣಿಕೆದಾರರ ಸಂಘದ ಗೌರವಾಧ್ಯಕ್ಷರಾದ ಕೆ ಬಿ ಕುಮಾರ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ಪಶು ವೈದ್ಯಕೀಯ ಮಹಾವಿದ್ಯಾಲಯದ ಉಪನ್ಯಾಸಕರಾದ ಉಮೇಶ್, ಬೇಗಾನೆ ಫಾರಂ ವ್ಯವಸ್ಥಾಪಕರಾದ ದೀಪಕ್, ವಿ ಎಚ್ ಎಲ್ ಮ್ಯಾನೇಜರ್ ಶೇಖರ್, ಐಬಿ ಕಂಪನಿ ಮ್ಯಾನೇಜರ್ ವಿಜಯ್ ಕುಮಾರ್, ಭಾರತ್ ಮಲ್ನಾಡ್ ಪೌಲ್ಟ್ರಿ ಫಾರಂ ಮ್ಯಾನೇಜರ್ ಪ್ರದೀಪ್, ಶ್ರೀದೇವಿ ಪೌಲ್ಟ್ರಿ ಫಾರಂ ಮ್ಯಾನೇಜರ್, ಕೆನರಾ ಬ್ಯಾಂಕ್ ಅಭಿವೃದ್ಧಿ ಅಧಿಕಾರಿ ಆಗಮಿಸಲಿದ್ದಾರೆ.
ಕಾರ್ಯಕಾರಿ ಮಂಡಳಿ:
– ಗೌರವಾಧ್ಯಕ್ಷರು – ಕೆ ಬಿ ಕುಮಾರ್ ಕಾನಗದ್ದೆ
– ಅಧ್ಯಕ್ಷರು – ಅಂಕಿತ್ ಮೇಕೇರಿ
– ಉಪಾಧ್ಯಕ್ಷರು – ಶಶಿ ಕಣಕಿ
– ಕಾರ್ಯದರ್ಶಿ – ಮಾರುತಿ ಹೆಚ್ ಜಿ
– ಖಜಾಂಚಿ – ಮಧುಕರ ಶೆಟ್ಟಿ
– ನಿರ್ದೇಶಕರು – ಜಯರಾಮ್ ಸಂಪೆಕಟ್ಟೆ, ಸುರೇಶ ಬೈಸೆ, ಮುಕುಂದ ಬೈಸೆ, ಕೃಷ್ಣಮೂರ್ತಿ ಬೇಳೂರು, ನಾಗರಾಜ ಬೈಸೆ, ಕೋಟೆಶ್ ಯಡೂರು, ಪ್ರಜ್ವಲ್ ಕೊಂಡ್ಲೂರು, ಗಿರೀಶ್ ಅಂಬುತೀರ್ಥ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಶಶಿ 9449319626
ಮುಕುಂದ 74110 04157
ನಾಗರಾಜ್ 9481252514
ಸಮಸ್ತ ಕೋಳಿಸಾಕಾಣಿಕೆದಾರರು, ಆಸಕ್ತರನ್ನು ಆಯೋಜಕರು ಸ್ವಾಗತಿಸಿದ್ದಾರೆ.