- ಭಾರತದ ಮೂಲದ ಕಮಲಾ ಉಪಾಧ್ಯಕ್ಷೆ
ತೀವ್ರ ಕುತೂಹಲ ಕೆರಳಿಸಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್ ಅಧ್ಯಕ್ಷರಾಗಿದ್ದಾರೆ.
ಬೈಡನ್ 290 ಸ್ಥಾನ ಪಡೆದು ಗೆಲುವು ಸಾಧಿಸಿದ್ದಾರೆ.
214 ಸ್ಥಾನ ಪಡೆದ ಟ್ರಂಪ್ ಸೋಲು ಕಂಡಿದ್ದಾರೆ.
ಭಾರತೀಯ ಮೂಲದ ಕಮಲಾ ಹ್ಯಾರಿಸ್ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಚೆನ್ನೈ ಮೂಲದ ಕಮಲಾ ಅಮೆರಿಕಾದ ಸಾಧಕಿ. ಜೊತೆಗೆ ಮೊದಲ ಮಹಿಳಾ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.
2016ರಲ್ಲಿ ಟ್ರಂಪ್ ಆಯ್ಕೆಯಾಗಿದ್ದರು. 2008, 2012ರಲ್ಲಿ ಬರಾಕ್ ಒಬಾಮಾ ಆಯ್ಕೆಯಾಗಿದ್ದರು.
ಅಮೆರಿಕದ 46ನೇ ಅಧ್ಯಕ್ಷರಾಗಿ ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್ ಆಯ್ಕೆಯಾಗಿದ್ದು, ರಿಪಬ್ಲಿಕನ್ ಪಕ್ಷದ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಮುಖಭಂಗವಾದಂತಾಗಿದೆ.
270 ಮ್ಯಾಜಿಕ್ ನಂಬರ್ ಆಗಿತ್ತು.