ಮಲೆನಾಡು ಕೋಳಿ ಸಾಕಾಣಿಕೆದಾರರ ಎರಡನೇ ವರ್ಷದ ಮಹಾಸಭೆ!
– ಕೋಳಿ ಸಾಕಾಣಿಕೆಯ ಬಗ್ಗೆ ಮಾಹಿತಿ ಕಾರ್ಯಗಾರ
– ಕೋಳಿ ಸಾಕಾಣಿಕೆ ಮಾಲೀಕರ ಬೇಡಿಕೆ ಸರ್ಕಾರದ ಮುಂದೆ ನೀಡಲು ಭರವಸೆ.
NAMMUR EXPRESS NEWS
ಮಲೆನಾಡು ಕೋಳಿ ಬೆಳೆಗಾರರ ಸಂಘ ಹೊಸನಗರ ತೀರ್ಥಹಳ್ಳಿ ಇದರ ಎರಡನೇ ವರ್ಷದ ವಾರ್ಷಿಕ ಮರು ಸಭೆಯನ್ನು ದಿನಾಂಕ 25.02.2024 ರಂದು ಹೊಸನಗರ ತಾಲೂಕಿನ ಮೂದುಗೊಪ್ಪ ನಗರ ಗ್ರಾಮ ಪಂಚಾಯಿತಿ ಶ್ರೀಧರಪುರ ಶ್ರೀರಾಮ ಸಭಾಭವನದಲ್ಲಿ ನಡೆಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಅಂಕಿತ್ ಮೇಕೆರಿ, ಉದ್ಘಾಟನೆ ಶ್ರೀ ಆರಗ ಜ್ಞಾನೇಂದ್ರ ನೆರವೇರಿಸಿದರು.
ಪ್ರಾರ್ಥನೆ ಹನಿ ಮತ್ತು ಸ್ಪಂದನ ತಂಡದವರು ಮಾಡಲಾಯಿತು. ನಿರೂಪಣೆ ಮಾರುತಿ ಹೆಚ್ ಜಿ ಬೈಸೆ, ಸ್ವಾಗತವನ್ನ ಜಯರಾಮ್ ಸಂಪೆಕಟ್ಟೆ ಮಾಡಿದರು ಈ ಕಾರ್ಯಕ್ರಮದ ಮುಖ್ಯ ಅತಿಥಿಗಳು ಶ್ರೀ ನಂಜುಂಡಪ್ಪ ರಾಜ್ಯಾದ್ಯಕ್ಷರು ಕೋಳಿ ಸಾಕಣೆದಾರರ ಒಕ್ಕೂಟ ಕರ್ನಾಟಕ, ಶ್ರೀ ಕೆ ಬಿ ಕುಮಾರ್ ಕಾನಗೆದ್ದೆ ಗೌರವ ಅಧ್ಯಕ್ಷರು ಮಲೆನಾಡು ಕೋಳಿ ಬೆಳಗಾರರ ಸಂಘ, ದೀಪಕ್ ವ್ಯವಸ್ಥಾಪಕರು ಬೇಗಾನೆ ಕಂಪನಿ ಮ್ಯಾನೇಜರ್, ರಮೇಶ್ ಸೂಪರ್ವೈಸರ್ ಬೇಗಾನೆ ಕಂಪನಿ, ರಾಜ್ಯ ಸಂಘದ ಕಾರ್ಯದರ್ಶಿ ಚಂದ್ರಶೇಖರ್,ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಭರತ್ ಭೂಷಣ್ ಪ್ರಾಧ್ಯಾಪಕರು ಆಗಮಿಸಿ ಕೋಳಿ ಬೆಳೆಯ ಬಗ್ಗೆ ತರಬೇತಿ ನೀಡಿದರು.
ಆಗರ ಜ್ಞಾನೇಂದ್ರ ಅವರು ಮಾತನಾಡಿ ಕೋಳಿ ಫಾರಂ ಮಾಲೀಕರ ಬೇಡಿಕೆಗಳನ್ನು ಸರ್ಕಾರದ ಜೊತೆ ಮಾತುಕತೆ ಮಾಡಿ ಬಗೆಹರಿಸುವುದಾಗಿ ಭರವಸೆ ನೀಡಿದರು. ಶ್ರೀನಿವಾಸ್ ಶೆಟ್ರು ಸಂಘದ ಸ್ಥಾಪಕ ಅಧ್ಯಕ್ಷರು ಹಾಗೂ ಹಾಲಿ ನಿರ್ದೇಶಕರು ಮತ್ತಿ ಮನೆ ಇವರು ಸಂಘವು ನಡೆದು ಬಂದ ಹಾದಿಯ ಬಗ್ಗೆ ವರದಿ ವಚನವನ್ನು ಮಾಡಿದರು. ಪ್ರಾಸ್ತಾವಿಕವಾಗಿ ಕೆಬಿ ಕುಮಾರ್ ಗೌರವ ಅಧ್ಯಕ್ಷರು ಮಾತನಾಡಿದರು. ವಂದನಾರ್ಪಣೆಯನ್ನ ಶಶಿಕುಮಾರ್ ಅವರು ಮಾಡಿದರು.ಈ ಕಾರ್ಯಕ್ರಮ ಎರಡು ತಾಲೂಕಿನಿಂದ ಸುಮಾರು 300ಕ್ಕೂ ಹೆಚ್ಚು ಜನ ಕೋಳಿ ಫಾರಂ ಮಾಲೀಕರು ಆಗಮಿಸಿದ್ದರು ಶ್ರೀಪತಿ ತೊಗರೆ ಇವರು ರೈತರ ಅನಿಸಿಕೆಯನ್ನ ಹೇಳಿದರು.