- ಪಂಚಮಸಾಲಿ ಕೆಲಮಠಾಧೀಶರಿಂದ ಗೌಪ್ಯ ಸಭೆ..?
ಹುಬ್ಬಳ್ಳಿ: ಧರ್ಮದೊಂದಿಗೆ ಯಾವುದೇ ಕಾರಣಕ್ಕೂ ರಾಜಕೀಯ ವಿಲೀನಗೊಳಿಸಬಾರದು. ಒಂದೊಮ್ಮೆ ರಾಜಕೀಯದೊಂದಿಗೆ ಧರ್ಮ ವಿಲೀನಗೊಂಡರೇ ಸಮಾಜ ಅಧೋಗತಿಗೆ ಇಳಿಯುವುದು ಶತಃಸಿದ್ಧ ಎಂಬುದು ಮತ್ತೇ ಸಾಬೀತಾಗುವ ಸಾಧ್ಯತೆಗಳು ಮಾಜಿ ಸಚಿವ ವಿನಯ ಕುಲಕರ್ಣಿಯವರ ಬಂಧನದಿಂದ ಸಾಬೀತಾಗತೊಡಗಿದೆಯೇ..?
ಇಂತಹದೊಂದು ಚರ್ಚೆ ಇದೀಗ ಇಡೀ ರಾಜ್ಯದಲ್ಲೇ ಆರಂಭಗೊಂಡಿದ್ದು ಸುಳ್ಳಲ್ಲ. ಕಾವಿತೊಟ್ಟ ಸಾಧುಗಳು ಜಗದ ಸುಖಃ, ಶಾಂತಿಗಾಗಿ ದೇವರನ್ನು ಪ್ರಾರ್ಥಿಸಿ ಜಾತಿ, ಭೇದ ಮಾಡದೇ ಸಕಲರಿಗೂ ಒಳಿತನ್ನೇ ಬಯಸುವುದು ಶ್ರೀಗಳ ಕರ್ಮ. ಆದರೆ, ಯೋಗೇಶಗೌಡ ಕೊಲೆ ಪ್ರಕರಣದಲ್ಲಿ ಸಿಲುಕಿ ಹಾಕಿಕೊಂಡಿರುವ ಪಂಚಸಾಲಿ ಸಮಾಜದ ಮುಖಂಡ ಹಾಗೂ ಮಾಜಿ ಸಚಿವ ವಿನಯ ಕುಲಕರ್ಣಿಯವರನ್ನು ಬಂಧನದಿಂದ ಮುಕ್ತಗೊಳಿಸಲು ಸ್ವಾಮೀಜಿಗಳು ನಡೆಸುತ್ತಿರುವ ಯತ್ನ ನಿಜಕ್ಕೂ ಭಕ್ತ ಸಮೂಹವನ್ನು ವಿಚಲಿತಗೊಳಿಸುವಂತೆ ಮಾಡಿದ್ದು ಸುಳ್ಳಲ್ಲ.
ಕೆಲ ಕಾವಿಧಾರಿಗಳ ರಾಜಕೀಯ ಬುದ್ಧಿಯಿಂದ ಅದೇ ಮಠಾಧೀಶರು ಸಮುದಾಯದ ಜನ ಕೈ ಕೈ ಹಿಸುಕಿಕೊಳ್ಳುವಂತಾಗಿದೆ.
ಪ್ರಸಿದ್ಧ ಮಠದಲ್ಲಿ ಸಭೆ?: ಒಂದೆಡೆ ಮಾಜಿ ಸಚಿವ ವಿನಯ ಕುಲಕರ್ಣಿಗೆ, ಯೋಗೇಶಗೌಡ ಕೊಲೆ ಪ್ರಕರಣದಲ್ಲಿ ಸಿಬಿಐ ಅಧಿಕಾರಿಗಳು ಡ್ರಿಲ್ ನಡೆಸುತ್ತಿದ್ದಾರೆ. ಮತ್ತೊಂದೆಡೆ ಈ ಇಡೀ ಪ್ರಕರಣದಿಂದ ವಿನಯ ಕುಲಕರ್ಣಿ ಅವರನ್ನು ಖುಲಾಸೆಗೊಳಿಸಬೇಕೆಂದು ಪಂಚಮಸಾಲಿ ಮಠಾಧೀಶರು ಧಾರವಾಡದ ಸುಪ್ರಸಿದ್ಧ ಪಂಚಮಸಾಲಿ ಸಮುದಾಯದ ಮಠದಲ್ಲಿ ಸುದೀರ್ಘ ಚರ್ಚೆ ನಡೆಸಿದ್ದಾರೆ. ಅಲ್ಲದೇ, ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಮತ್ತು ಕಾಂಗ್ರೆಸ್ ಹಿರಿಯ ಮುಖಂಡರಿಗೆ ಪೆÇೀನಾಯಿಸಿ ಪ್ರಕರಣವನ್ನು ಇಲ್ಲಿಗೆ ಕೈಬಿಡುವಂತೆ ಒತ್ತಡ ಹೇರಿದ್ದಾರಂತೆ. ಇಷ್ಟಕ್ಕೆ ಮಾತ್ರ ಸುಮ್ಮನಾಗದ ಒಬ್ಬ ಮಠಾಧೀಶರು, ನಮ್ಮ ಆರ್ಶೀವಾದ ನಿಮ್ಮ ಮೇಲೆ ಇರಬೇಕು ಅಂದರೆ ತನಿಖೆಯನ್ನು ನಿಲ್ಲಿಸಿ ಅಂತಲೂ ಆಗ್ರಹಿಸಿದ್ದಾರೆ ಎಂದು ಗೊತ್ತಾಗಿದೆ.
ಪಾಠ ಕಲಿಸುವುದಾಗಿ ಗುಟುರು: ವಿನಯ ಕುಲಕರ್ಣಿಯನ್ನು ಸಿಬಿಐ ಇಕ್ಕಳದಿಂದ ಶೀಘ್ರ ಬಿಡುಗಡೆಗೊಳಿಸದಿದ್ದರೆ ಮುಂದಿನ ದಿನಗಳಲ್ಲಿ ಸಮುದಾಯದ ಜನ ಒಕ್ಕಟ್ಟಾಗಿ ಪಾಠ ಕಲಿಸಬೇಕಾಗುತ್ತದೆ ಎಂದು ಕೆಲ ಕಾವಿಧಾರಿಗಳು ಗುಟುರು ಹಾಕಿದ್ದಾರಂತೆ. ಇದಕ್ಕೆ ಪ್ರತಿಕ್ರಿಯಿಸಿದ ಹಿರಿಯ ರಾಜಕೀಯ ನಾಯಕರು, ಮೃತ ಯೋಗೇಶಗೌಡ ಕುಟುಂಬವೂ ಪಂಚಮಸಾಲಿ ಸಮುದಾಯಕ್ಕೆ ಸೇರಿದ್ದು. ಅವರಿಗೆ ನ್ಯಾಯ ಸಿಗುವುದು ಬೇಡವೇ ಎಂದು ಪ್ರಶ್ನಿಸಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ಭಕ್ತರೊಬ್ಬರು ತಿಳಿಸಿದ್ದಾರೆ.
ಅಲ್ಲದೇ, ಪ್ರಕರಣವು ನ್ಯಾಯಾಲಯದಲ್ಲಿ ಇರುವುದರಿಂದ ನಾವು ಹಸ್ತಕ್ಷೇಪ ಮಾಡಲು ಬರುವುದಿಲ್ಲ ಎಂಬ ಸಬೂಬು ನೀಡಿದ್ದಾರೆ ಎಂದು ಗೊತ್ತಾಗಿದೆ. ಅಲ್ಲದೇ, ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಮೃತ ಯೋಗೇಶಗೌಡನ ಕುಟುಂಬಸ್ಥರೇ ಹೇಳಿದ್ದರಿಂದ ರಾಜ್ಯ ಸರ್ಕಾರ ಪ್ರಕರಣವನ್ನು ಸಿಬಿಐಗೆ ನೀಡಿದೆ ಇದರಲ್ಲಿ ರಾಜಕೀಯ ಏನೂ ಇಲ್ಲ ಎಂದು ಹೇಳಿ ಫೆÇೀನ್ ಕಟ್ ಮಾಡಿದ್ದಾರಂತೆ.
ತೋಂಟದಾರ್ಯ ಮಠಕ್ಕೆ ಶಿಫ್ಟ್!: ಇಷ್ಟಕ್ಕೆ ಸುಮ್ಮನಾಗದ ಕೆಲ ಸ್ವಾಮೀಜಿಗಳು ಕೇಂದ್ರದಲ್ಲೂ ನಿಮ್ಮದೇ ಸರ್ಕಾರ ಇದೆ. ಹೀಗಾಗಿ ಸಿಬಿಐ ಮೇಲೆ ಒತ್ತಡ ಹಾಕಿ ಪ್ರಕರಣವನ್ನು ಇಲ್ಲಿಯೇ ನಿಲ್ಲಿಸಿ ಅಂತ ಅನೇಕ ಕರೆ ಮಾಡಿದ್ದಾರೆ ಎಂದು ಗೊತ್ತಾಗಿದೆ. ಈ ಸುದ್ದಿ ಬಹಿರಂಗಗೊಳ್ಳುತ್ತಿದಂತೆಯೇ ಎಚ್ಚತ್ತುಕೊಂಡ ಸ್ವಾಮೀಜಿಗಳು, ಧಾರವಾಡದಿಂದ ಗದಗ ಜಿಲ್ಲೆಯ ತೋಂಟದಾರ್ಯ ಮಠಕ್ಕೆ ಮಿಟಿಂಗ್ ಶಿಫ್ಟ್ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.