ಫೆ.29 ರಿಂದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ.!
– ಸಿಎಂ ಸಿದ್ದರಾಮಯ್ಯ ಚಾಲನೆ
– ಫೆ.15ರಿಂದ ಆನ್ ಲೈನ್ ಟಿಕೆಟ್ ಪಡೆಯಲು ಅವಕಾಶ
NAMMUR EXPRESS NEWS
ಬೆಂಗಳೂರು: ಫೆಬ್ರವರಿ 29 ರಿಂದ ಮಾರ್ಚ್ 7ರವರೆಗೆ 15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದ್ದು, ಫೆ.29 ರಂದು ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಈ ವೇಳೆ ಕನ್ನಡ ಸೇರಿದಂತೆ ವಿವಿಧ ವಿದೇಶಿ ಸಿನಿಮಾಗಳು ಪ್ರದರ್ಶನಗೊಳ್ಳಲಿದೆ. ಈ ಬಾರಿ ಸಾಮಾಜಿಕ ನ್ಯಾಯ, ಲಿಂಗತ್ವ ಸಮಾನತೆ, ಜೀವನ ಚರಿತ್ರೆ ವಿಷಯ ಸೇರಿದಂತೆ ಒಟ್ಟು 200ಕ್ಕೂ ಅಧಿಕ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿ ಹಾಗೂ ಚಿತ್ರೋತ್ಸವದ ಕೋರ್ ಸಮಿತಿಯ ಅಧ್ಯಕ್ಷ ಡಾ.ಕೆ.ವಿ. ತ್ರಿಲೋಕಚಂದ್ರ ತಿಳಿಸಿದ್ದಾರೆ.
ಕನ್ನಡ ಚಿತ್ರರಂಗ 90 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಮತ್ತು ಕರ್ನಾಟಕದ 50 ವರ್ಷಗಳ ಸಂಭ್ರಮದಲ್ಲಿ ಕನ್ನಡ ವಿಶೇಷ ವಿಭಾಗದಲ್ಲಿ 30 ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ.
ಟಿಕೆಟ್ ದರ ಎಷ್ಟು..?
1) ಸಾರ್ವಜನಿಕರಿಗೆ ₹ 800
2) ವಿದ್ಯಾರ್ಥಿಗಳು, ಚಿತ್ರೋದ್ಯಮದ ಸದಸ್ಯರು, ಹಿರಿಯ ನಾಗರಿಕರಿಗೆ ₹400
ಎಲ್ಲೆಲ್ಲಿ ಪ್ರದರ್ಶನ?
– ಒರಾಯನ್ ಮಾಲ್, ರಾಜಾಜಿನಗರ
– ರಾಜ್ ಕುಮಾರ್ ಕಲಾಭವನ, ಚಾಮರಾಜಪೇಟೆ
– ಸುಚಿತ್ರಾ ಫಿಲ್ಮಸೊಸೈಟಿ, ಬನಶಂಕರಿ 2ನೇ ಹಂತ
ಚಿತ್ರಗಳ ಹೆಚ್ಚಿನ ವಿವರಕ್ಕಾಗಿ ಮತ್ತು ಫೆಬ್ರವರಿ 15ರಿಂದ ಆನ್ ಲೈನ್ ಟಿಕೆಟ್ ಪಡೆದುಕೊಳ್ಳಲು ಸ್ಕ್ಯಾನ್ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗೆ: 080-23493410 ಸಂಪರ್ಕಿಸಬಹುದಾಗಿದೆ ಎಂದು ಸರ್ಕಾರ ಪ್ರಕಟಣೆ ಹೊರಡಿಸಿದೆ.