- ಹೊಸ ಭರವಸೆಯೊಂದಿಗೆ ಎಲ್ಲೆಡೆ ಪೂಜೆ
- ಉದ್ಯಮ ನೆಲಕಚ್ಚಿಸಿದ್ದ ಕರೋನಾ ರಾಕ್ಷಸ!
ಬೆಂಗಳೂರು: ಹೊಸ ವರ್ಷದಿಂದ ಬಹುತೇಕ ಪಾತಾಳಕ್ಕೆ ಬಿದ್ದಿದ್ದ ಉದ್ಯಮ ಕ್ಷೇತ್ರ ಇನ್ಮುಂದೆ ಬೆಳವಣಿಗೆ ಕಾಣುವ ಲಕ್ಷಣಗಳು ಗೋಚರಿಸುತ್ತಿವೆ. ಎಲ್ಲಾ ಕಡೆ ದೀಪಾವಳಿ, ಲಕ್ಷ್ಮಿ ಪೂಜೆ ಬಳಿಕ ಹೊಸ ಜೋಷ್ ಕಾಣುತ್ತಿದೆ.
ಮಹಾ ನಗರ, ಪಟ್ಟಣ, ಹಳ್ಳಿ ಸೇರಿ ಎಲ್ಲೆಡೆ ಕರೋನಾ ರಾಕ್ಷಸನ ಅಬ್ಬರದಿಂದ ವ್ಯವಹಾರ, ಉದ್ಯಮ ಕ್ಷೇತ್ರ ಪಾತಾಳಕ್ಕೆ ಬಿದ್ದಿತು. ದಿನದ ಉಳಿತಾಯದಲ್ಲಿ ಖೋತಾ ಆಗಿತ್ತು. ಪ್ರತಿ ಊರಲ್ಲೂ ನೂರಾರು ಉದ್ಯಮಗಳು ಶಾಶ್ವತವಾಗಿ ಬಂದ್ ಆದವು..ಲಕ್ಷಾಂತರ ಮಂದಿ ಕೆಲಸ ಕಳೆದುಕೊಂಡರು, ಉದ್ಯಮಿಗಳು ಸಾಲದ ಶೂಲಕ್ಕೆ ಬಿದ್ದರು. ಈ ಕಹಿ ನೆನಪಿನ ನಡುವೆಯೇ ಆಯುಧಪೂಜೆ, ಲಕ್ಷ್ಮಿ ಪೂಜೆ, ದೀಪಾವಳಿ ಎಲ್ಲರ ಬದುಕಲ್ಲೂ ಮತ್ತೆ ಹೊಸ ಬೆಳಕು ನೀಡುವ ಸೂಚನೆ ನೀಡಿದೆ.
ಶನಿವಾರ ಪ್ರತಿ ಅಂಗಡಿಯಲ್ಲೂ ಲಕ್ಷ್ಮಿ ಪೂಜೆಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗಿದೆ. ವಾಹನ ಯಂತ್ರಗಳಿಗೂ ಪೂಜೆ ನೀಡಿ ಹೊಸದಾಗಿಯೇ ಉದ್ಯಮ ಶುರು ಮಾಡಿದಷ್ಟು ಪೂಜೆ ಮಾಡಲಾಗಿದೆ. ಕರೋನಾ ಭಯದಿಂದ ದೂರವಾಗಿ ಉದ್ಯಮ ಗಟ್ಟಿಗೊಳಿಸುವ ಯುದ್ಧಕ್ಕೆ ಎಲ್ಲಾ ಉದ್ದಿಮೆದಾರು ಸಿದ್ಧರಾಗಿದ್ದಾರೆ. ಗ್ರಾಹಕರು ಕೂಡ ಖರೀದಿಗೆ ಬರುತ್ತಿದ್ದಾರೆ. ಇನ್ನಾದರೂ ಲಕ್ಷ್ಮಿ ಕಟಾಕ್ಷ ಒಲಿಯುವುದೇ ಕಾದು ನೋಡಬೇಕಿದೆ. ನಮ್ಮೂರ್ ಎಕ್ಸ್ಪ್ರೆಸ್ ಸರ್ವರಿಗೂ ಶುಭ ಹಾರೈಸುತ್ತದೆ.