ಸಮುದ್ರದ ಅಲೆಗೆ ಮೂವರು ಯುವಕರು ನೀರುಪಾಲು!
– ಹುಡುಗರ ಹುಚ್ಚಾಟಕ್ಕೆ ಬದುಕೇ ಬಲಿ!
– ಕಾರ್ಕಳ: ಹೊಟೇಲ್ ಕಟ್ಟಡದಲ್ಲಿ ಅಗ್ನಿ ಅವಘಡ 1.20 ಲಕ್ಷ ರೂ ನಷ್ಟ
NAMMUR EXPRESS NEWS
ಮಂಗಳೂರು: ಮಂಗಳೂರು ಪಣಂಬೂರು ಬೀಚ್ನಲ್ಲಿ ಮೂವರು ಯುವಕರು ಅಲೆಗಳ ಹೊಡೆತಕ್ಕೆ ಸಿಲುಕಿ ನಾಪತ್ತೆಯಾಗಿರುವ ಘಟನೆ ಭಾನುವಾರ ಸಂಜೆ 6 ಗಂಟೆ ಸುಮಾರಿಗೆ ನಡೆದಿದೆ. ನಾಪತ್ತೆಯಾಗಿರುವವರನ್ನು ಮಿಲನ್ (20), ಲಿಖಿತ್ (18) ಮತ್ತು ನಾಗರಾಜ್ (24) ಎಂದು ಗುರುತಿಸಲಾಗಿದೆ. ಮಿಲನ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರೆ, ಲಿಖಿತ್ ಕೈಕಂಬದ ಕಾಲೇಜಿನಲ್ಲಿ ಪ್ರಥಮ ವರ್ಷದ ಪಿಯುಸಿ ವಿದ್ಯಾರ್ಥಿ, ನಾಗರಾಜ್ ಬೈಕಂಪಾಡಿಯಲ್ಲಿರುವ ಕಂಪನಿಯಲ್ಲಿ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿದ್ದರು. ಇವರು ಸ್ನೇಹಿತರಾಗಿದ್ದು, ಸಮುದ್ರದಲ್ಲಿ ಆಟವಾಡುತ್ತಿದ್ದಾಗ ಬೃಹತ್ ಅಲೆ ಅಪ್ಪಳಿಸಿ ಕೊಚ್ಚಿಕೊಂಡು ಹೋಗಿದ್ದಾರೆ. ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ.
ಕಾರ್ಕಳ: ಹೊಟೇಲ್ ಕಟ್ಟಡದಲ್ಲಿ ಅಗ್ನಿ ಅವಘಡ 1.20 ಲಕ್ಷ ರೂ ನಷ್ಟ
ಕಾರ್ಕಳ: ಕಸಬಾ ಗ್ರಾಮದ ಕರಿಯಕಲ್ಲು ಜಂಕ್ಷನ್ ಬಳಿ ನಿರ್ಮಲ ರಾವ್ ಮಾಲಕತ್ವದ ಹೊಟೇಲ್ ಕಟ್ಟಡಕ್ಕೆ ಬೆಂಕಿ ತಗಲಿ ಅಪಾರ ಹಾನಿ ಸಂಭವಿಸಿದ ಘಟನೆ ಮಾ.3ರಂದು ಬೆಳಗಿನ ಜಾವ 4 ಗಂಟೆಗೆ ಸಂಭವಿಸಿದೆ. ಘಟನೆಯಿಂದ ಫ್ರಿಡ್ಜ್, ಗ್ರೈಂಡರ್, ಮಿಕ್ಸಿ, ಅಡುಗೆ ಪಾತ್ರೆ, ದಿನಸಿ ಸಾಮಗ್ರಿ, ವಿದ್ಯುತ್ ಸಂಪರ್ಕ ಇತ್ಯಾದಿ ಸುಟ್ಟು ಹೋಗಿವೆ. ಕಟ್ಟಡದ ಮೇಲ್ಛಾವಣಿ ಭಾಗಶಃ ಸುಟ್ಟು ಹೋಗಿದೆ. ಸ್ಥಳೀಯರ ಸಹಕಾರದಿಂದ ಅಗ್ನಿಶಾಮಕದಳದವರು ಬೆಂಕಿಯನ್ನು ನಂದಿಸಿದ್ದಾರೆ. ಘಟನೆಯಲ್ಲಿ ಸುಮಾರು 1.20 ಲಕ್ಷ ರೂ ನಷ್ಟ ಅಂದಾಜಿಸಲಾಗಿದೆ.