ಮಂಗನ ಕಾಯಲೆಗೆ ಮತ್ತೆರಡು ಬಲಿ!
– ಮಲೆನಾಡು, ಕರಾವಳಿಯಲ್ಲಿ ಅಲರ್ಟ್
– ಬಿಸಿಲು ಹೆಚ್ಚಾಗುತ್ತಿದ್ದಂತೆ ಹೆಚ್ಚಿದ ಮಂಗನ ಕಾಯಲೆ
– ಮಂಗನ ಕಾಯಲೆ ಹುಷಾರ್ ಹುಷಾರ್…
NAMMUR EXPRESS NEWS
ಬಿಸಿಲು ಹೆಚ್ಚಾಗುತ್ತಿದ್ದಂತೆ ಮಂಗನ ಕಾಯಿಲೆಯ ತೀವ್ರತೆ ಹೆಚ್ಚಾಗುತ್ತಿದೆ. ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು ಸೇರಿ ಮೂರು ಜಿಲ್ಲೆಯಲ್ಲಿ ಇತ್ತೀಚಿಗೆ ಎರಡು ಸಾವಾಗಿದೆ. ರಾಜ್ಯದ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಮಂಗನ ಕಾಯಲೆ ಹೆಚ್ಚಾಗಿದ್ದು, ಎಲ್ಲೆಡೆ ಅಲರ್ಟ್ ಘೋಷಣೆ ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಕೆ.ಎಫ್.ಡಿ ಹೆಲ್ತ್ ಬುಲಿಟಿನ್ ಮಾತ್ರ ಕಾಣೆಯಾಗಿದೆ. ಕೆಎಫ್ ಡಿಗೆ ಮೂರು ಜಿಲ್ಲೆಯಲ್ಲಿ 43 ಜನರನ್ನ ಕೆಎಫ್ ಡಿ ಪರೀಕ್ಷೆಗೆ ಒಳಪಡಸಲಾಗಿದೆ. ಎರಡು ಪಾಸಿಟಿವ್ ಪತ್ತೆಯಾಗಿದ್ದು, ಎರಡು ಸಾವು ಕಂಡುಬಂದಿದೆ.
ಚಿಕ್ಕಮಗಳೂರು ಮತ್ತು ಶಿರಸಿ ಜಿಲ್ಲೆಯಲ್ಲಿ ಎರಡು ಪಾಸಿಟಿವ್ ಕಂಡು ಬಂದಿದ್ದು, ಎರಡು ಸಾವು ಕಂಡು ಬಂದಿದೆ. ಮುಂದಿನ ದಿನಗಳಲ್ಲಿ ಈ ಕಾಯಿಲೆ ಮತ್ತಷ್ಟು ಉಲ್ಬಣವಾಗುವ ಸಾಧ್ಯತೆ ಇದೆ. ಆರೋಗ್ಯ ಇಲಾಖೆ ಎಷ್ಟರ ಮಟ್ಟಿಗೆ ಸಿದ್ಧತೆಗೊಂಡಿದೆ. ಮೂರು ಜಿಲ್ಲೆಯಿಂದ ಇದುವರೆಗೂ ಕೆಎಫ್ ಡಿ ಸಾವು ಇದುವರೆಗೂ 8 ಕ್ಕೆ ಏರಿಕೆಯಾಗಿದೆ. ಶಿವಮೊಗ್ಗ 1, ಚಿಕ್ಕಮಗಳೂರಿನಲ್ಲಿ 3, ಶಿರಸಿಯಲ್ಲಿ 4 ಸಾವಾಗಿದೆ.