ಶಿವರಾತ್ರಿಯಂದೇ ಶಿವೈಕ್ಯಳಾದ ಧರ್ಮಸ್ಥಳದ ಎಲ್ಲರ ಅಚ್ಚುಮೆಚ್ಚಿನ ಆನೆ ಲತಾ!
– 50 ವರ್ಷಗಳಿಂದ ಶ್ರೀ ಮಂಜುನಾಥನಿಗೆ ಸೇವೆ
NAMMUR EXPRESS NEWS
ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಕ್ಷೇತ್ರದಲ್ಲಿ ಕಳೆದ 50 ವರ್ಷಗಳಿಂದ ಶ್ರೀ ಮಂಜುನಾಥನಿಗೆ ಸೇವೆ ಸಲ್ಲಿಸುತ್ತಿದ್ದ ಲತಾ ಎಂಬ ಹೆಸರಿನ ಆನೆ ಶುಕ್ರವಾರ ನಿಧನ ಹೊಂದಿದೆ. ಶಿವರಾತ್ರಿಯ ಪವಿತ್ರ ದಿನದಂದೇ ಆನೆ ಲತಾ ಶಿವನ ಪಾದದಲ್ಲಿ ಐಕ್ಯಳಾಗಿದ್ದಾಳೆ. 60 ವರ್ಷ ಪ್ರಾಯದ ಲತಾ ಆನೆ ಹೃದಯಾಘಾತದಿಂದ ನಿಧನಾಗಿದ್ದಾಳೆ. ಈಕೆಯ ಮೊಮ್ಮಗಳು ಶಿವಾನಿ ಮರಿಯಾನೆ ಬಳಿಕ ಈಕೆಯೂ ಪ್ರಸಿದ್ದಿಗೆ ಬಂದಿದ್ದಳು.
ಧರ್ಮಸ್ಥಳ ಕ್ಷೇತ್ರದಲ್ಲಿ ಜರಗುವ ಮಂಜನಾಥನ ರಥೋತ್ಸವ, ಲಕ್ಷದೀಪೋತ್ಸವ, ಶಿವರಾತ್ರಿ ಉತ್ಸವಗಳಲ್ಲಿ ಧಾರ್ಮಿಕ ಕಾರ್ಯಗಳಲ್ಲಿ ಲತಾ ಎಂದಿಗೂ ಮುಂಚೂಣಿಯಲ್ಲಿರುತ್ತಿದ್ದಳು. ಧರ್ಮಸ್ಥಳ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರಿಗೆ ಲತಾ ಆನೆ ಅಚ್ಚುಮೆಚ್ಚಿನವಳಾಗಿದ್ದಳು. ಲತಾ ಆನೆಯನ್ನು ಕಳೆದುಕೊಂಡಿರುವ ಮೊಮ್ಮಗಳು ಶಿವಾನಿ ಹಾಗೂ ಮಗಳು ಲಕ್ಷ್ಮಿ ಆನೆ ಇಬ್ಬರು ಮಂಕಾಗಿದ್ದಾರೆ. ಆನೆ ಸಾವಿನ ಸುದ್ದಿ ತಿಳಿದು ಸುತ್ತಮುತ್ತಲ ಭಕ್ತರು ದೇವಸ್ಥಾನದ బಳಿ ಆಗಮಿಸುತ್ತಿದ್ದಾರೆ.