ಕರಾವಳಿಗೆ 2ನೇ ವಂದೇ ಭಾರತ್ ರೈಲು!
– ಮಾ.12ರಂದು ಪ್ರಧಾನಿ ಮೋದಿ ಚಾಲನೆ
– ವಾರದ 6 ದಿನವೂ ರೈಲು ಸಂಚಾರ
NAMMUR EXPRESS NEWS
ಮಂಗಳೂರು -ತಿರುವನಂತಪುರಂ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಮಾ.12ರಂದು ಬೆಳಗ್ಗೆ 8 ಗಂಟೆಗೆ ಮಂಗಳೂರು ಕೇಂದ್ರ ನಿಲ್ದಾಣದಲ್ಲಿ ಪ್ರಧಾನಿ ಮೋದಿ ಅವರು ವಿಡಿಯೋ ಕಾನ್ಪೆರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲು ಮನವಿ ಮೇರೆಗೆ ಈ ರೈಲು ಅನ್ನು ಕಾಸರಗೋಡಿನಿಂದ ಮಂಗಳೂರಿನವರೆಗೆ ವಿಸ್ತರಿಸಲಾಗಿದೆ. ಅದರಂತೆ 20632/20631 ರೈಲು ಮಂಗಳೂರು-ತಿರುವನಂತಪುರ ನಡುವೆ ಸಂಚರಿಸಲಿದ್ದು, ಮಂಗಳೂರಿನಿಂದ ಬೆಳಗ್ಗೆ 6.15ಕ್ಕೆ ಹೊರಟು ಮಧ್ಯಾಹ್ನ 3.05ಕ್ಕೆ ತಿರುವನಂತಪುರ ತಲುಪುತ್ತದೆ. ವಾಪಾಸ್ ತಿರುವನಂತಪುರದಿಂದ ಸಂಜೆ 4.05ಕ್ಕೆ ಹೊರಟು ರಾತ್ರಿ 12.40ಕ್ಕೆ ಮಂಗಳೂರು ತಲುಪಲಿದೆ. ಬುಧವಾರ ಹೊರತುಪಡಿಸಿ ವಾರದ 6 ದಿನವೂ ರೈಲು ಸಂಚರಿಸಲಿದೆ. ಈ ವಂದೇ ಭಾರತ್ ರೈಲು ರೈಲು ಕಾಸರಗೋಡು, ಕಣ್ಣೂರು, ಕೋಝಿಕ್ಕೋಡ್ ಮೇನ್, ತಿರೂರ್, ಶೊರ್ನೂರು, ತ್ರಿಶೂರ್, ಎರ್ನಾಕುಲಂ, ಆಲಪ್ಪುಳ ಮತ್ತು ಕೊಲ್ಲಂನಲ್ಲಿ ನಿಲುಗಡೆ ನೀಡಲಿದೆ. ಈ ರೈಲಿನ ಈ ರೈಲುಗಳ ಪ್ರಾಥಮಿಕ ನಿರ್ವಹಣೆಯು ಮಂಗಳೂರಿನಲ್ಲಿ ನಡೆಯಲಿದೆ.
ತಿರುವನಂತಪುರನಿಂದ ಕಾಸರಗೋಡುವರೆಗೆ ಈ ರೈಲು ಮೊದಲು ಓಡಾಟಕ್ಕೆ ಅನುಮೋದನೆ ನೀಡಲಾಗಿತ್ತು. ಆದರೆ, ನಳಿನ್ ಕುಮಾರ್ ಅವರು ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರನ್ನು ಭೇಟಿಯಾಗಿ ಮಂಗಳೂರಿಗೆ ವಿಸ್ತರಿಸುವಂತೆ ಮನವಿ ಸಲ್ಲಿಸಿದ್ದರು. ಏಕೆಂದರೆ, ದಿನನಿತ್ಯ ಮಂಗಳೂರಿನಿಂದ ನೂರಾರು ಮಂದಿ ಕಾಸರಗೋಡು ಮಾರ್ಗವಾಗಿ ಕೇರಳಕ್ಕೆ ಸಂಚರಿಸುತ್ತಿದ್ದಾರೆ. ಹೀಗಾಗಿ, ಈ ರೈಲು ಮಂಗಳೂರಿಗೆ ವಿಸ್ತರಣೆಗೊಂಡರೆ ಕರಾವಳಿ ಜನರಿಗೂ ಹೆಚ್ಚಿನ ಅನುಕೂಲವಾಗಲಿದೆ ಎಂದು ರೈಲ್ವೆ ಸಚಿವರಿಗೆ ಮನವರಿಕೆ ಮಾಡಿದ್ದರು. ಮಂಗಳೂರಿನಿಂದ ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಗೋವಾಕ್ಕೆ ಸಂಚಾರ ನಡೆಸುತ್ತಿದೆ. ಮಂಗಳೂರು-ಮಡಂಗಾವ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಕಳೆದ ವರ್ಷದ ಡಿಸೆಂಬರ್ 30ರಂದು ಚಾಲನೆ ನೀಡಲಾಗಿದೆ.