ಇಲಿ, ಹಂದಿ, ಬಾವಲಿ ಆಯ್ತು ಈಗ ಗಿಳಿ ಜ್ವರ!
– ಗಿಳಿಗಳಿಂದ ಹರಡುತ್ತಿದೆ ವೈರಲ್ ಫೀವರ್..!
– ಐವರು ಸಾವು: ಹಲವರು ಆಸ್ಪತ್ರೆಗೆ ದಾಖಲು
– ಏನಿದು ಗಿಳಿ ಜ್ವರ ಎಲ್ಲೆಲ್ಲಿ ಇದರ ಸೊಂಕಿದೆ?
NAMMUR EXPRESS NEWS
ಹಂದಿ ಜ್ವರ, ಇಲಿ ಜ್ವರ, ಬಾವಲಿಗಳಿಂದ ಹರಡುವ ಜ್ವರ ಸೇರಿ ಹಲವು ಪ್ರಾಣಿ, ಪಕ್ಷಿಯಿಂದ ಜ್ವರ ಹರಡುವುದನ್ನು ನೋಡಿದ್ದೇವೆ, ಕೇಳಿದ್ದೇವೆ. ಆದ್ರೆ ಈಗ ಹೊಸದಾಗಿ ಗಿಳಿ ಜ್ವರವೊಂದು ಕಾಣಿಸಿಕೊಂಡಿದೆ. ಹೌದು. ಯೂರೋಪ್ ದೇಶಗಳಲ್ಲಿ ಈಗಾಗಲೇ ಸಾವಿರಾರು ಮಂದಿ ಆತಂಕದಲ್ಲಿದ್ದಾರೆ. ಈಗಾಗಲೇ ಡೆನ್ಮಾರ್ಕ್, ಆಸ್ಟ್ರಿಯಾ, ನೆದರ್ ಲ್ಯಾಂಡ್ ಸೇರಿ ಎಲ್ಲೆಡೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಗಿಳಿಗಳಿಂದ ಹರಡುವ ಜ್ವರ ಇದಾಗಿದ್ದು, ಜ್ವರದಿಂದ ಜನ ಜೀವ ಕಳೆದುಕೊಂಡಿದ್ದಾರೆ. ಗಿಳಿ ಜ್ವರವನ್ನು ಸಿಟ್ಟಾಕೋಸಿಸ್ ಎಂದೂ ಕರೆಯುತ್ತಾರೆ, ಇದು ಅಪರೂಪದ ಆದರೆ ಕ್ಲಮೈಡಿಯ ಸಿಟ್ಟಾಸಿ ಎಂಬ ಬ್ಯಾಕ್ಟಿರಿಯಂನಿಂದ ಉಂಟಾಗುವ ಗಂಭೀರವಾದ ಬ್ಯಾಕ್ಟಿರಿಯಾದ ಸೋಂಕಾಗಿದೆ.
ಗಿಳಿಗಳು, ಪಾರಿವಾಳಗಳು ಮತ್ತು ಕೋಳಿಗಳು, ಆದರೆ ರೋಗಪೀಡಿತ ಪಕ್ಷಿಗಳು ಅಥವಾ ಅವುಗಳ ಹಿಕ್ಕೆಗಳೊಂದಿಗೆ ಸಂಪರ್ಕಕ್ಕೆ ಬರುವ ಮನುಷ್ಯರಿಗೂ ಸಹ ಸೋಂಕಿಗೆ ಒಳಗಾಗುತ್ತಾರೆ. ಇದರ ಜೊತೆ ಈ ಕಣಗಳು ಗಾಳಿಯಲ್ಲೂ ಸೇರುತ್ತವೆ ಎಂದು ನೋಯ್ದಾದ ಮೆಟ್ರೋ ಆಸ್ಪತ್ರೆ ವೈದ್ಯ ಡಾ ಸೈಬಲ್ ಚಕ್ರವರ್ತಿ ಹೇಳಿದ್ದಾರೆ. ಗಿಳಿ ಜ್ವರವು ಸಾಮಾನ್ಯವಾಗಿ ಕೆಮ್ಮು, ಉಸಿರಾಟದ ತೊಂದರೆ ಮತ್ತು ಎದೆ ನೋವು ಸೇರಿದಂತೆ ನ್ಯುಮೋನಿಯಾವನ್ನು ಹೋಲುವ ರೋಗಲಕ್ಷಣಗಳೊಂದಿಗೆ ಇರುತ್ತದೆ. ಗಿಳಿಯಿಂದ ಹರಡುವ ಸೋಂಕನ್ನು ತಡೆಯಲು ನೀವು ಮನೆಯಲ್ಲಿ ಗಿಳಿಗಳ ಸಾಕುತ್ತಿದ್ದರೆ ಎಚ್ಚರ ವಹಿಸಿ. ಜೊತೆಗೆ ನೀವೇನಾದರು ಪಾರ್ಕ್ಗಳಿಗೆ ಹೋಗುವ ಅಭ್ಯಾಸ ಇಟ್ಟುಕೊಂಡಿದ್ದರೆ ಅಲ್ಲಿ ಗಿಳಿಗಳು ಸಹ ಬರುತ್ತವೆ. ಹೀಗಾಗಿ ಈ ಬಗ್ಗೆ ಎಚ್ಚರ ವಹಿಸಿ. ಪ್ರಾಣಿ, ಪಕ್ಷಿಗಳ ಸಂಪರ್ಕಕ್ಕೆ ಬಂದರೆ ಕೈಗಳನ್ನು ಚೆನ್ನಾಗಿ ತೊಳೆಯುವುದು ಉತ್ತಮ. ಜೊತೆಗೆ ಜ್ವರ, ಶೀತ ಕಾಣಿಸಿಕೊಂಡರೆ ತಕ್ಷಣ ವೈದ್ಯರ ಸಂಪರ್ಕಿಸುವುದು ಉತ್ತಮ ಎಂದು ವೈದ್ಯರು ಸಲಹೆ ನೀಡಿದ್ದಾರೆ.