ಬಿಜೆಪಿ 2ನೇ ಪಟ್ಟಿ ರಿಲೀಸ್: 20 ಮಂದಿಗೆ ಟಿಕೆಟ್!
– 8 ಮಂದಿ ಹಾಲಿ ಸಂಸದರಿಗೆ ಅವಕಾಶ ಇಲ್ಲ
– ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧಿಗಳ ಹೆಸರು
ಘೋಷಣೆ
NAMMUR EXPRESS NEWS
ರಾಜ್ಯ ರಾಜಕಾರಣ ಮಹತ್ವದ ಘಟ್ಟಕ್ಕೆ ಬಂದು ತಲುಪಿದೆ. ಬಿಜೆಪಿಯ 2 ನೇ ಪಟ್ಟಿ ರಿಲೀಸ್ ಆಗಿದೆ. 2 ನೇ ಪಟ್ಟಿಯಲ್ಲಿ ಕರ್ನಾಟಕದ 20 ಕ್ಷೇತ್ರಗಳಿಗೆ ಟಿಕೇಟ್ ರಿಲೀಸ್ ಆಗಿದೆ. ಮೈಸೂರಲ್ಲಿ ಮಹಾರಾಜ ಯದೂವೀರ ಅವರಿಗೆ ಟಿಕೆಟ್ ಆಗಿದ್ದು ಸಂಸದ ಪ್ರತಾಪ್ ಸಿಂಹರಿಗೆ ಟಿಕೆಟ್ ಮಿಸ್ ಆಗಿದೆ. ದಾವಣಗೆರೆಯಲ್ಲಿ ಗಾಯಿತ್ರಿ ಸಿದ್ದೇಶ್ವರ್, ಉಡುಪಿ -ಚಿಕ್ಕಮಗಳೂರಿಗೆ ಕೋಟ ಶ್ರೀನಿವಾಸ ಪೂಜಾರಿ, ತುಮಕೂರಿಗೆ ಸೋಮಣ್ಣ, ಬೆ.ಉತ್ತರ ಶೋಭಾ ಕರದ್ಲಾಜೆ, ಹಾವೇರಿಯಲ್ಲಿ ಬಸವರಾಜ್ ಬೊಮ್ನಾಯಿ, ದಾರವಾಡ ಪ್ರಹ್ಲಾದ ಜೋಶಿ, ಶಿವಮೊಗ್ಗ ಬಿ.ವೈರಾಘವೇಂದ್ರ, ಬ್ರಜೇಶ್ ಚೌಟಾರಿಗೆ ದಕ್ಷಿಣ ಕನ್ನಡ ಟಿಕೇಟ್ ನೀಡಲಾಗಿದೆ. ಇಲ್ಲಿ ನಳೀನ್ ಕುಮಾರ್ ಕಟೀಲ್ ಗೆ ಟಿಕಿಟ್ ಮಿಸ್ ಆಗಿದೆ. ಬೆಂಗಳೂರು ಗ್ರಾಮಾಂತರ ಡಾ.ಮಂಜುನಾಥ್ 20 ಕ್ಷೇತ್ರದಲ್ಲಿ 9 ಕ್ಷೇತ್ರದಲ್ಲಿ ಟಿಕೇಟ್ ಬದಲಾವಣೆ ಆಗಿದೆ. ಇದರಲ್ಲಿ 6 ಜನ ಹಾಲಿ ಸಂಸದರಿಗೆ ಟಿಕೆಟ್ ಮಿಸ್ ಆಗಿದೆ.
ಮೂವರು ಕಣದಿಂದ ನಿವೃತ್ತಿ!
ಬಳ್ಳಾರಿಯಲ್ಲಿ ದೇವೇಂದ್ರಪ್ಪರ ಬದಲು ಶ್ರೀರಾಮುಲುಗೆ ಟಿಕೇಟ್ ನೀಡಲಾಗಿದೆ. ಕೊಪ್ಪಳದಲ್ಲಿ ಸಂಗಣ್ಣ ಕರಡಿಗೆ ಡಾ.ಬಸವರಾಜ್ ಕ್ಯಾವಟೂರ್ ಗೆ ನೀಡಲಾಗಿದೆ. ಬೀದರ್ ನಲ್ಲಿ ಭಗವಂತ್ ಕೂಬಾರಿಗೆ ನೀಡಲಾಗಿದೆ. ಕಲ್ಬುರ್ಗಿಯಲ್ಲಿ ಉಮೇಶ್ ಜಾದವ್ ಗೆ, ಚಾಮರಾಜನಗರದಲ್ಲಿ ಬಾಲರಾಜ್, ಚಿಕ್ಕೋಡಿ ಅಣ್ಣಾ ಸಾಹೇಬ್ ಜೊಲ್ಲೆಗೆ, ಬೆಳಗಾವಿ ಉತ್ತರ ಕನ್ನಡ, ಮತ್ತು ಜೆಡಿಎಸ್ ಜೊತೆಗಿನ ಮೈತ್ರಿ ಸ್ಥಾನಗಳು ಪ್ರಕಟವಾಗಬೇಕಿದೆ.
ಜೆಡಿಎಸ್ ಜತೆ ಮೈತ್ರಿ: ಎಲ್ಲೆಲ್ಲಿ ಸ್ಥಾನ?
ಹಾಸನ, ಮಂಡ್ಯ, ಕೋಲಾರ, ರಾಯಚೂರು ಚಿಕ್ಕಬಳ್ಳಾಪುರದಲ್ಲಿ ಘೋಷಣೆಯಾಗಬೇಕಿದೆ. ದೇಶದಲ್ಲಿ ಕರ್ನಾಟಕ ಸೇರಿ ಇತರೆ 72 ಕ್ಷೇತ್ರಗಳಲ್ಲಿ ಟಿಕೇಟ್ ಘೋಷಿಸಲಾಗಿದೆ.