ಲೋಕ ಸಮರಕ್ಕೆ ಸಜ್ಜು: ನಿಯಮಗಳೇನು?
– 28 ಕ್ಷೇತ್ರಗಳಲ್ಲೂ ಆಡಳಿತ ಅಲರ್ಟ್
– ಮದುವೆ,ಜಾತ್ರೆ ಅನುಮತಿ ಕಡ್ಡಾಯ
– ನೀತಿ ಸಂಹಿತೆ ಜಾರಿ: ಏನ್ ಮಾಡಬಹುದು, ಏನ್ ಮಾಡಬಾರದು?
NAMMUR EXPRESS NEWS
ರಾಜ್ಯದಲ್ಲಿ ಲೋಕಸಭೆ ಚುನಾವಣೆಯ ಮತದಾನಕ್ಕೆ ಈಗಾಗಲೇ ಸಿದ್ಧತೆ ಶುರುವಾಗಿದೆ. ಶನಿವಾರ ತಾನೇ ಚುನಾವಣೆ ದಿನಾಂಕ ಪ್ರಕಟಗೊಂಡಿದ್ದು ರಾಜ್ಯದ 28 ಕ್ಷೇತ್ರಗಳಲ್ಲೂ ಜಿಲ್ಲಾಡಳಿತ, ಚುನಾವಣೆ ವಿಭಾಗ ಭರದಿಂದ ತಯಾರಿ ನಡೆಸುತ್ತಿದೆ.
ಕರ್ನಾಟಕದಲ್ಲಿ 2 ಹಂತದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಲಿದ್ದು, ಕರ್ನಾಟಕದಲ್ಲಿ ಏಪ್ರಿಲ್ 26 ಮತ್ತು ಮೇ 7ರಂದು ಮತದಾನ ನಡೆಯಲಿದೆ. ಚುನಾವಣಾ ಮಾದರಿ ನೀತಿ ಸಂಹಿತೆ ಕೂಡ ಶನಿವಾರ ಜಾರಿಗೆ ಬಂದಿದೆ. ಪ್ರತಿ ಲೋಕ ಸಭಾ ಕ್ಷೇತ್ರಗಳಲ್ಲಿ ಮಾನವಶಕ್ತಿ ನಿರ್ವಹಣೆ, ತರಬೇತಿ, ವಸ್ತು ನಿರ್ವಹಣೆ, ವಾಹನ ನಿರ್ವಹಣೆ, ಐಟಿ ಇಲಾಖೆ, ಸ್ವೀಪ್ ನೋಡಲ್, ಎಂಸಿಸಿ, ಕಾನೂನು ಮತ್ತು ಸುವ್ಯವಸ್ಥೆ, ಭದ್ರತಾ ಯೋಜನೆ, ಇವಿಎಂ ನಿರ್ವಹಣೆ, ವೆಚ್ಚ ನಿಗಾ ತಂಡಗಳಿಗೆ ನೋಡಲ್ ಅಧಿಕಾರಿಗಳನ್ನು ರಚಿಸಲಾಗಿದೆ. ಪ್ರತಿ ಲೋಕ ಸಭಾ ಕ್ಷೇತ್ರದಲ್ಲಿ ಚೆಕ್ಪೋಸ್ಟ್ಗಳು ಕಾರ್ಯನಿರ್ವಹಿಸಲಿವೆ.
“ಕಾರ್ಯಕ್ರಮದ ಸುಗಮ ಮೇಲ್ವಿಚಾರಣೆ ಮತ್ತು ನಿರ್ವಹಣೆಗಾಗಿ ಹಲವು ಐಟಿ ಅಪ್ಲಿಕೇಶನ್ಗಳನ್ನು ಸಹ ಸ್ಥಾಪಿಸಲಾಗಗುತ್ತಿದೆ. ಸಿ-ವಿಜಿಲ್, ಮತದಾರರ ಸಹಾಯವಾಣಿ, ಸಕ್ಷಮ್ನಂತಹ ಅಪ್ಲಿಕೇಶನ್ಗಳನ್ನು ಸಹ ಬಳಸಲಾಗುತ್ತದೆ. ನೀತಿ ಸಂಹಿತೆಯ ಉಲ್ಲಂಘನೆಗಳ ವಶಪಡಿಸಿಕೊಳ್ಳುವಿಕೆಯನ್ನು ನಿರ್ವಹಿಸಲು ESMS- ಚುನಾವಣಾ ಸೀಜರ್ ಮ್ಯಾನೇಜ್ಮೆಂಟ್ ಸಿಸ್ಟಮ್ ಎಂಬ ಹೊಸ ಅಪ್ಲಿಕೇಶನ್ ಅನ್ನು ಬಳಸಲಾಗುತ್ತದೆ. ಜಿಲ್ಲಾ ಕೇಂದ್ರದಲ್ಲಿರುವ ತಂಡಗಳು ಎಲ್ಲಾ ಚಟುವಟಿಕೆಗಳ ಮೇಲೆ ನಿಗಾ ಇಡಲಿವೆ. ಮಾದರಿ ನೀತಿ ಸಂಹಿತೆ ಜೂನ್ 6, 2024 ರವರೆಗೆ ಜಾರಿಯಲ್ಲಿರುತ್ತದೆ.
ಮದುವೆ ಜಾತ್ರೆಗೂ ಅನುಮತಿ ಕಡ್ಡಾಯ!
ಧಾರ್ಮಿಕ ಮತ್ತು ಇತರ ಸಾಮಾಜಿಕ ಕಾರ್ಯಕ್ರಮಗಳಿಗೆ ಅನುಮತಿ ಕುರಿತು ಮಾತನಾಡಿದ ಡಾ.ವಿದ್ಯಾಕುಮಾರಿ, ”ದೇವಸ್ಥಾನದ ಜಾತ್ರೆ, ಮದುವೆ ಮತ್ತಿತರ ಎಲ್ಲಾ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳಿಗೆ ಅನುಮತಿ ಪಡೆಯಬೇಕು. ಕ್ರಿಕೆಟ್ ಪಂದ್ಯಗಳಿಗೂ ಅನುಮತಿ ಪಡೆಯಬೇಕು. ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಮುಂಜಾಗ್ರತಾ ಕ್ರಮವಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಅಗತ್ಯ ಅನುಮತಿಗಳನ್ನು ಪಡೆಯುವ ಮೂಲಕ ಪೂರ್ವ ನಿರ್ಧರಿತ ಕಾರ್ಯಕ್ರಮಗಳನ್ನು ಸಹ ನಡೆಸಬಹುದು. ರಾಜಕೀಯ ನಾಯಕರು ಯಾವುದೇ ಸಾಮಾಜಿಕ ಕಾರ್ಯಕ್ರಮಗಳಿಗೆ ಹಾಜರಾಗಿದ್ದರೆ, ಅದನ್ನು ಖರ್ಚಿಗೆ ಲೆಕ್ಕ ಹಾಕಲಾಗುತ್ತದೆ. ಬಾಲಕಾರ್ಮಿಕರನ್ನ ಚುನಾವಣೆ ಪ್ರಚಾರಕ್ಕೆ ಬಳಸುವಂತೆ ಇಲ್ಲ.ವೈಯುಕ್ತಿಕ ನಿಂದನೆ, ಧಾರ್ಮಿಕ ವಿಚಾರ ಕೆರಳಿಸುವಂತ ಮತಪ್ರಚಾರ ಮಾಡುವಂತಿಲ್ಲ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.
ಏಪ್ರಿಲ್ 26ಕ್ಕೆ ಎಲ್ಲೆಲ್ಲಿ ಮತದಾನ?
ಚಿತ್ರದುರ್ಗ
ಉಡುಪಿ-ಚಿಕ್ಕಮಗಳೂರು
ದಕ್ಷಿಣ ಕನ್ನಡ
ಹಾಸನ
ತುಮಕೂರು
ಚಿಕ್ಕಬಳ್ಳಾಪುರ
ಕೋಲಾರ
ಮಂಡ್ಯ
ಮೈಸೂರು-ಕೊಡಗು
ಚಾಮರಾಜನಗರ
ಬೆಂಗಳೂರು ಗ್ರಾಮಾಂತರ
ಬೆಂಗಳೂರು ದಕ್ಷಿಣ
ಬೆಂಗಳೂರು ಉತ್ತರ
ಬೆಂಗಳೂರು ಕೇಂದ್ರ
ಮೇ 7ರಂದು ಎಲ್ಲೆಲ್ಲಿ ಮತದಾನ?
ಬೆಳಗಾವಿ
ಬಳ್ಳಾರಿ
ಚಿಕ್ಕೋಡಿ
ಹಾವೇರಿ-ಗದಗ
ಕಲಬುರಗಿ
ಬೀದರ್
ಹುಬ್ಬಳಿ – ಧಾರವಾಡ
ಕೊಪ್ಪಳ
ರಾಯಚೂರು
ಉತ್ತರ ಕನ್ನಡ
ದಾವಣಗೆರೆ
ಶಿವಮೊಗ್ಗ
ಬಾಗಲಕೋಟೆ
ವಿಜಯಪುರ
ಮತ ದಾನ ಮಾಡಿ ನಿಮ್ಮ ಹಕ್ಕು ಚಲಾಯಿಸಿ..!