ಬಾಲದೊಂದಿಗೆ ಹುಟ್ಟಿದ ಮಗು: ಏನಿದು ವಿಚಿತ್ರ!
– ವೈದ್ಯ ಲೋಕವನ್ನೇ ಅಚ್ಚರಿಗೊಳಿಸಿದ ಘಟನೆ
– 4 ಇಂಚಿನ ಬಾಲದೊಂದಿಗೆ ಹುಟ್ಟಿರುವ ಮಗು.!
– ವೈದ್ಯರು ಏನಂತಾರೆ? ಇದು ಪವಾಡನಾ?
NAMMUR EXPRESS NEWS
ಮಂಗನಿಂದ ಮಾನವ ಕೇಳಿದ್ದೇವೆ. ಆದರೆ ಇಲ್ಲೊಂದು ಘಟನೆ ಮಾನವ ಕುಲಕ್ಕೆ ಎಚ್ಚರಿಕೆ ಸಂದೇಶವೊಂದನ್ನು ರವಾನಿಸಿದೆ.
ನಾಲ್ಕು ಇಂಚಿನ ಬಾಲದೊಂದಿಗೆ ಮಗುವೊಂದು ಜನಿಸಿದ ಅಚ್ಚರಿಯ ಘಟನೆ ಚೀನಾದಲ್ಲಿ ಸಂಭವಿಸಿದ್ದು, ವೈದ್ಯ ಲೋಕವನ್ನೇ ಬೆರಗಾಗಿಸಿದೆ. ಚೀನಾದ ಹ್ಯಾಂಗ್ಝೌ ಮಕ್ಕಳ ಆಸ್ಪತ್ರೆಯಲ್ಲಿ ಜನಿಸಿದ ಈ ಮಗುವಿನ ಬೆನ್ನಿನ ಭಾಗದಲ್ಲಿ ಬಾಲವಿರುವುದು ಪತ್ತೆಯಾಗಿದೆ. ಇದೊಂದು ಅಸಹಜ ಬೆಳವಣಿಗೆಯಾಗಿದ್ದು, ಬೆನ್ನುಮೂಳೆಗೆ ಸಂಬಂಧಿಸಿದ ಅಸ್ವಸ್ಥತೆಗಳ ಕಾರಣದಿಂದ ಇಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂದು ವೈದ್ಯರು ಹೇಳಿದ್ದಾರೆ ಎಂದು ವರದಿಯಾಗಿದೆ. ಆಸ್ಪತ್ರೆಯ ಪೀಡಿಯಾಟ್ರಿಕ್ ನ್ಯೂರೋಸರ್ಜರಿ ವಿಭಾಗದ ವೈದ್ಯ ಡಾ. ಲೀ ಮಗುವಿನ ಬೆನ್ನುಹುರಿ ಸರಿಯಾಗಿ ಬೆಳವಣಿಗೆಯಾಗದಿದ್ದಾಗ ಸಂಭವಿಸುವ ಜನ್ಮ ದೋಷದಿಂದ ಈ ರೀತಿ ಬಾಲದಂತಹ ಅಂಗ ಬೆಳವಣಿಗೆಯಾಗುತ್ತದೆ ಎಂದು ತಿಳಿಸಿದ್ದಾರೆ .
ಅವರು ನವಜಾತ ಶಿಶುವಿನ ಬೆನ್ನಿನ ಭಾಗದಲ್ಲಿ ಬಾಲ ಇರುವುದನ್ನು ಪತ್ತೆ ಹಚ್ಚಿದ್ದು. ಬೆನ್ನು ಹುರಿಯ ಸುತ್ತಮುತ್ತಲಿನ ಅಂಗಾಂಶಗಳಿಗೆ ಅಸಹಜವಾಗಿ ಜೋಡಿಸಲ್ಪಟ್ಟಿರುವ ಒಂದು ರೀತಿಯ ಸ್ಥಿತಿಯಾಗಿದ್ದು, ಇದರಿಂದ ಬಾಲ ಬೆಳೆಯುವ ಸಾಧ್ಯತೆ ಇರುತ್ತದೆ. ಸಾಮಾನ್ಯವಾಗಿ ಇಂತಹ ಸ್ಥಿತಿ ಯಾರಲ್ಲಿಯೂ ಕಾಣಿಸಿಕೊಳ್ಳುವುದಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಬಾಲದೊಂದಿಗೆ ಮಗು ಜನಿಸಿದ ಪ್ರಕರಣ ಇದೇ ಮೊದಲಲ್ಲ. ವರದಿಗಳ ಪ್ರಕಾರ 2017 ರ ವರೆಗ ಇಂತಹ 195 ಪ್ರಕರಣಗಳು ವರದಿಯಾಗಿವೆ. 2021 ರಲ್ಲಿ ಬ್ರೆಜಿಲ್ ನಲ್ಲಿ ಹೆಣ್ಣು ಮಗು ಹಾಗೂ 2022 ರಲ್ಲಿ ಮೆಕ್ಸಿಕೋದಲ್ಲಿ ಹೆಣ್ಣು ಮಗುವೊಂದು ಬಾಲದೊಂದಿಗೆ ಜನಿಸಿದ ಪ್ರಕರಣ ವರದಿಯಾಗಿದೆ. ಇದೀಗ ಚೀನಾದಲ್ಲಿಯೂ ಇಂತಹ ಪ್ರಕರಣ ವರದಿಯಾಗಿದೆ.