ಸೀಮೆ ಎಣ್ಣೆ ಬಳಕೆ ಗಣನೀಯ ಪ್ರಮಾಣದಲ್ಲಿ ಇಳಿಕೆ.!
– ಹೈ ಸ್ಪೀಡ್ ಡೀಸೆಲ್ ಆಯಿಲ್ಗೆ ಭರ್ಜರಿ ಬೇಡಿಕೆ!
– ಡೀಸೆಲ್ ಆಯಿಲ್ ಬಳಕೆ ಪ್ರಮಾಣ ಶೇ 38.52 ಹೆಚ್ಚಳ
NAMMUR EXPRESS NEWS
ನವದೆಹಲಿ: ಕೇಂದ್ರ ಸರ್ಕಾರವು ನವೀಕರಿಸಬಹುದಾದ ಇಂಧನ ನೀತಿಗೆ ಒತ್ತು ನೀಡಿದ ಬೆನ್ನಿಗೇ ದೇಶದಲ್ಲಿ ಸೀಮೆ ಎಣ್ಣೆ ಬಳಕೆ ಪ್ರಮಾಣವು ಗಣನೀಯವಾಗಿ ಇಳಿಕೆಯಾಗಿದೆ. ಕಳೆದ 2013 -14ರಿಂದ 2022-23ರ ನಡುವೆ ಸೀಮೆಎಣ್ಣೆ ಬಳಕೆಯು ಶೇ 26ರಷ್ಟು ಇಳಿಕೆಯಾಗಿದೆ ಎಂದು ಎನ್ಎಸ್ಒ (ರಾಷ್ಟ್ರೀಯ ಸಾಂಖ್ಯಿಕ ಕಚೇರಿ) ಅಂಕಿಅಂಶಗಳು ಹೇಳುತ್ತಿವೆ. ಇದೇ ವೇಳೆ ದೇಶದಲ್ಲಿ 2022-23ರ ಅವಧಿಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಪೈಕಿ ಹೈ ಸ್ಪೀಡ್ ಡೀಸೆಲ್ ಆಯಿಲ್ ಬಳಕೆ ಪ್ರಮಾಣ ಶೇ 38.52 ಹೆಚ್ಚಿದೆ. ಇನ್ನು 2021-22ನೇ ಸಾಲಿಗೆ ಹೋಲಿಸಿದರೆ ಬಳಕೆ ಪ್ರಮಾಣದಲ್ಲಿ ಶೇ 12.05ರಷ್ಟು ಏರಿಕೆ ಆಗಿದೆ. ಪೆಟ್ರೋಲ್ ಬಳಕೆ ಶೇ 13.38ರಷ್ಟು ಇದ್ದರೆ, ಪೆಟ್ರೋಲಿಯಂ ಕೋಕ್ ಬಳಕೆ ಶೇ 28.68ರಷ್ಟಿದೆ. ಹೈ ಸ್ಪೀಡ್ ಡೀಸೆಲ್ ಬಳಕೆಯಲ್ಲಿ ಶೇ 12.05ರಷ್ಟು ಹೆಚ್ಚಳವಾಗಿದೆ ಎಂದು ವರದಿ ತಿಳಿಸಿದೆ.