ಅಡಿಕೆ ತೋಟಕ್ಕೆ ಔಷದಿ ಸಿಂಪಡಿಸುವಾಗ ಅಸ್ವಸ್ಥಗೊಂಡು ರೈತ ಸಾವು
– ಹುಂಚದ ಮುತ್ತಿನಕೆರೆಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ
– ಶಿವಮೊಗ್ಗದ ಮೋದಿ ಕಾರ್ಯಕ್ರಮದಲ್ಲಿ ಜೇಬುಗಳ್ಳರ ಹಾವಳಿ
– ಲಾಕರ್ನಲ್ಲಿದ್ದ ಚಿನ್ನಾಭರಣ ಕದ್ದು ಮನೆಗೆ ಬೆಂಕಿ ಇಟ್ಟು ಹೋದ ಕಳ್ಳರು!
NAMMUR EXPRESS NEWS
ಹೊಸನಗರ: ತಾಲೂಕಿನ ಮಾರುತಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಡೇನಕೊಪ್ಪ ಗ್ರಾಮದ ಗಣೇಶ್ ಪೂಜಾರಿ ಎಂಬುವವರು ಅಡಿಕೆ ತೋಟಕ್ಕೆ ಕ್ರಿಮಿನಾಶಕ ಸಿಂಪಡಿಸುತ್ತಿದ್ದಾಗ ತಲೆ ಸುತ್ತು ಬಂದು ಅಸ್ವಸ್ಥಗೊಂಡು ಮೃತಪಟ್ಟ ಘಟನೆ ನಡೆದಿದೆ. ರೈತ ಗಣೇಶ್ ಪೂಜಾರಿ ಔಷಧಿ ಸಿಂಪಡಣೆ ಮಾಡುವಾಗ ಅಸ್ವಸ್ಥಗೊಂಡಿದ್ದು ತಕ್ಷಣವೇ ಅವರನ್ನು ಕುಟುಂಬದವರು ಹೊಸನಗರ ಆಸ್ಪತ್ರೆಗೆ ಕರೆದೊಯ್ದಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಜಿಲ್ಲಾಸ್ಪತ್ರೆಗೆ ಸೇರಿಸಿದ್ದಾರೆ. ರಕ್ತ ವಾಂತಿ ಜಾಸ್ತಿಯಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ ಮೃತಪಟ್ಟಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ. ಕುಟುಂಬಕ್ಕೆ ಇದ್ದ ಒಂದೇ ಆಸರೆ ಗಣೇಶ ಪೂಜಾರಿ ಮೃತರು, ಇಬ್ಬರು ಗಂಡು ಮಕ್ಕಳು, ವಯಸ್ಸಾದ ಮಾವ, ಪತ್ನಿಯನ್ನ ಕುಟುಂಬವನ್ನ ಅಕಾಲಿಕವಾಗಿ ಅಗಲಿದ್ದು ಅತ್ಯಂತ ದುಃಖದ ಸಂಗತಿ ಆಗಿದೆ.
ಯಾವಾಗಲು ಅತೀ ಹೆಚ್ಚು ಚಟುವಟಿಕೆಯಿಂದ ಎಲ್ಲ ಕೆಲಸ ಕಾರ್ಯಗಳಲ್ಲಿ, ಊರಿನವರ ಜೊತೆಗೆ ನಿಷ್ಕಲ್ಮಶವಾಗಿ ತನ್ನನ್ನ ತಾನುತೊಡಗಿಸಿಕೊಂಡಿದ್ದ ಗಣೇಶ ಪೂಜಾರಿ ನಿಧನಕ್ಕೆ ಬಡೇನಕೊಪ್ಪ ಗ್ರಾಮಸ್ಥರು ತೀವ್ರ ಸಂತಾಪವನ್ನ ವ್ಯಕ್ತಪಡಿಸಿದ್ದಾರೆ.
ಉತ್ಪಾದನೆಗೆ ಸರ್ಕಾರ ಕಡಿವಾಣ ಹಾಕಲೇಬೇಕು. ಇಲ್ಲದಿದ್ದರೆ ಮುಂದಿನ ಪೀಳಿಗೆಗೆ ಬೆಳೆದು ತಿನ್ನುವ ಈ ಭೂಮಿ ಸಂಪೂರ್ಣ ವಿಷಮಯ ವಾಗುದರಲ್ಲಿ ಅನುಮಾನವೆ ಇಲ್ಲಾ!. ಹೌದು ಈ ಹಿಂದೆ ಕೂಡ ಮೈಸೂರು ಜಿಲ್ಲೆಯಲ್ಲಿಯೂ ಸಹ ಲ್ಯಾನೆಟ್ ಔಷದಿ ಸಿಂಪಡಿಸಿ 70 ಹೆಚ್ಚು ರೈತರು ಆಸ್ವಸ್ಥರಾಗಿದ್ದು ಬೆಳೆಕಿಗೆ ಬಂದಿದ್ದು, ರೈತರಿಗೆ ಜಾಗೃತಿ ಮೂಡಿಸಬೇಕಿದೆ.. ಇಂಥವ ವಿಷಪೂರಿತ ಔಷದಿಗಳು ನಾವು ತಿನ್ನುವ ಆಹಾರ, ಹಣ್ಣು ಗಳಿಗೆ ಸಿಂಪಡಣೆ ಅತ್ಯಂತ ಅಪಾಯಕಾರಿ, ಹಾಗೂ ನಮ್ಮ ಭೂಮಿ ಈಗ ವಿಷವರ್ತೂಲದಲ್ಲಿ ಸಿಲುಕಿದ್ದು, ಅತ್ಯಂತ ದುರಂತವೆ ಸರಿ.
– ಹುಂಚದ ಮುತ್ತಿನಕೆರೆಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ
ಹೊಸನಗರ : ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ ಗ್ರಾಮದ ಮುತ್ತಿನಕೆರೆಯಲ್ಲಿ ಅಪರಿಚಿತ ಮಹಿಳೆಯ ಶವವೊಂದು ಕೊಳೆತ ಸ್ಥಿತಿಯಲ್ಲಿ ಸೋಮವಾರ ಮಧ್ಯಾಹ್ನ ಪತ್ತೆಯಾಗಿದ್ದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಹುಂಚ ಹೊಸನಗರ ಮಾರ್ಗದಲ್ಲಿರುವ ಮುತ್ತಿನಕೆರೆಯಲ್ಲಿ ಸುಮಾರು 40 ವರ್ಷ ವಯಸ್ಸಿನ ಅಪರಿಚಿತ ಮಹಿಳೆಯ ಶವ ಕೆರೆಯಲ್ಲಿ ಕಂಡುಬಂದಿದ್ದು, ಮೃತದೇಹವನ್ನು ಹಗ್ಗದಿಂದ ಕಟ್ಟಲಾಗಿದೆ ಎನ್ನಲಾಗುತ್ತಿದ್ದು ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂದು ಪೊಲೀಸ್ ತನಿಖೆಯಿಂದ ತಿಳಿದುಬರಬೇಕಾಗಿದೆ. ವಿಷಯ ತಿಳಿಯುತ್ತಿದ್ದಂತೆ ಕೆರೆಯ ಸುತ್ತಮುತ್ತ ನೂರಾರು ಜನರು ಜಮಾಯಿಸಿದ್ದಾರೆ. ರಿಪ್ಪನ್ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
– ಶಿವಮೊಗ್ಗದ ಮೋದಿ ಕಾರ್ಯಕ್ರಮದಲ್ಲಿ ಜೇಬುಗಳ್ಳರ ಹಾವಳಿ
ಶಿವಮೊಗ್ಗ : ಶಿವಮೊಗ್ಗದಲ್ಲಿ ಫ್ರೀಡಂ ಪಾರ್ಕ್ ನಲ್ಲಿ ನಡೆದ ಮೋದಿ ಕಾರ್ಯಕ್ರಮದಲ್ಲಿ ಕಳ್ಳಕಾಕರ ಹಾವಳಿ ಹೆಚ್ಚಾಗಿದ್ದು ಬಿಗಿ ಬಂದೋ ಬಸ್ತ್ ಇದ್ದರೂ ಕಳ್ಳರ ಹಾವಳಿ ತಪ್ಪಿಸಲು ಸಾಧ್ಯವಾಗಿಲ್ಲ. ಸಭೆಯಲ್ಲಿ ಭಾಗಿಯಾಗಿರುವ ಶ್ರೀನಿವಾಸ್ ಮತ್ತು ರವಿಕುಮಾರ್ ಎಂಬುವವರ ಪ್ಯಾಂಟ್ ಜೇಬಿಗೆ ಕತ್ತರಿ ಹಾಕಿರುವ ಮೂವರು ಕಳ್ಳರಲ್ಲಿ ಓರ್ವನನ್ನು ಹಿಡಿದ ಸಾರ್ವಜನಿಕರು ಆಟೋದಲ್ಲಿ ಜಯನಗರ ಪೊಲೀಸ್ ಠಾಣೆಗೆ ಕರೆತರಲು ಮುಂದಾಗಿದ್ದಾರೆ. ಇನ್ನಿಬ್ಬರು ಎಸ್ಕೆಪ್ ಆಗಿದ್ದಾರೆ.
ಪಿಕ್ ಪ್ಯಾಕೆಟ್ ಮಾಡಲು ಹೋಗಿ ಸಿಕ್ಕಿಬಿದ್ದವನನ್ನು ಶಿಕಾರಿಪುರದ ನಿವಾಸಿ ಜಯಣ್ಣ ಎಂದು ಗುರುತಿಸಲಾಗಿದೆ. ಸಧ್ಯಕ್ಕೆ ಆತನಿಂದ 13 ಸಾವಿರದ 700 ಕ್ಕೂ ಹೆಚ್ಚು ಹಣ ದೊರೆತಿದೆ. ಶ್ರೀನಿವಾಸರವರ ಮೊಬೈಲ್ ಅಪಹರಿಸಲಾಗಿದೆ. ಇನ್ನು ರವಿಕುಮಾರ್ 8000 ರೂ ಹಣ ಕಳೆದುಕೊಂಡಿರುವುದಾಗಿ ಹೇಳುತ್ತಿದ್ದಾರೆ. ಶಿವಮೊಗ್ಗದಾದ್ಯಂತ ಮೋದಿ ಕಾರ್ಯಕ್ರಮಕ್ಕಾಗಿ ಬಿಗಿ ಸೆಕ್ಯೂರಿಟಿ ಹೆಚ್ಚಿತ್ತು. ಕಾರ್ಯಕ್ರಮ ಒಳಗೆ ಹೋಗುವಾಗ ತಪಾಸಣೆ ಪರಿಶೀಲನೆಗಳು ಇತ್ತು. ಈ ವೇಳೆ ಕಳ್ಳ ತನ್ನ ಕೈಚಳಕ ತೋರಿದ್ದಾನೆ.
– ಲಾಕರ್ನಲ್ಲಿದ್ದ ಚಿನ್ನಾಭರಣ ಕದ್ದು ಮನೆಗೆ ಬೆಂಕಿ ಇಟ್ಟು ಹೋದ ಕಳ್ಳರು!
ಶಿವಮೊಗ್ಗ : ಮನೆಯಲ್ಲಿನ ವಸ್ತುಗಳನ್ನ ಕಳ್ಳತನ ಮಾಡಿದ್ದಷ್ಟೆ ಅಲ್ಲದೆ ಮನೆಗೆ ಬೆಂಕಿ ಇಟ್ಟು ಹೋದ ಘಟನೆ ಬಗ್ಗೆ ಶಿವಮೊಗ್ಗದ ಕೋಟೆ ಪೊಲೀಸ್ ಸ್ಟೇಷನ್ನಲ್ಲಿ ಎಫ್ಐಆರ್ ದಾಖಲಾಗಿದೆ. : IPC 1860 (U/s-454,457,380,436) ಅಡಿಯಲ್ಲಿ ಕೇಸ್ ದಾಖಲಾಗಿದ್ದು, 17 ರಂದು ಈ ಘಟನೆ ನಡೆದಿದೆ. ನಡೆದ ಘಟನೆಯನ್ನು ನೋಡುವುದಾದರೆ,ಈ ಸ್ಟೇಷನ್ ಲಿಮಿಟ್ಸ್ನಲ್ಲಿರುವ ನಿವಾಸಿಯೊಬ್ಬರು ದೂರದ ಚನ್ನರಾಯಪಟ್ಟಣ್ಣಕ್ಕೆ ಹೋಗಿದ್ದರು. ಈ ವೇಳೆ ಅವರಿಗೆ ಕರೆಯೊಂದು ಬಂದಿದೆ. ನಿಮ್ಮ ಮನೆಯಿಂದ ತುಂಬಾ ಹೊಗೆ ಬರುತ್ತಿದೆ ಎಂದು ಕರೆ ಮಾಡಿದವರು ತಿಳಿಸಿದ್ದಾರೆ. ವಿಷಯ ತಿಳಿದು ತಕ್ಷಣವೇ ಶಿವಮೊಗ್ಗಕ್ಕೆ ಕುಟುಂಬಸ್ಥರು ವಾಪಸ್ ಆಗಿದ್ದಾರೆ.
ಶಿವಮೊಗ್ಗದ ಮನೆಗೆ ಬಂದು ನೋಡುವಷ್ಟರಲ್ಲಿ ಫೈರ್ ಇಂಜಿನ್ ಮನೆಯಲ್ಲಿ ಹತ್ತಿಕೊಂಡಿದ್ದ ಬೆಂಕಿ ನಂದಿಸಿತ್ತು. ಆನಂತರ ಕೂಲಂಕುಶವಾಗಿ ನೋಡಿದಾಗ ಮನೆಯ ಲಾಕರ್ ಮುರಿದಿದ್ದು ಗೊತ್ತಾಗಿದೆ. ಅಲ್ಲದೆ ಲಾಕರ್ ನ ಲಾಕ್ ನ್ನು ಮುರಿದಿದ್ದು, ಅದರ ಒಳಗೆ ಇಟ್ಟಿದ್ದ ಸುಮಾರು ಒಟ್ಟು 146 ಗ್ರಾಂ ತೂಕದ ಬಂಗಾರದ ವಡವೆಗಳು, ಸುಮಾರು ಒಟ್ಟು 3 ಕೆ.ಜಿ.800 ಗ್ರಾಂ ತೂಕದ ಬೆಳ್ಳಿಯ ವಡವೆಗಳು, ಹಾಗೂ 19.50.000/ -ರೂ ನಗದು ಹಣವನ್ನ ಕದ್ದಿರುವುದು ಗೊತ್ತಾಗಿದೆ. ಅಲ್ಲದೆ ಕಳ್ಳರು ಸಿಸಿಟಿವಿ ಡಿವಿಆರ್ಗಳನ್ನ ಸಹ ಕದ್ದೊಯ್ದಿದ್ದಾರೆ ಎಂಬುದು ತಿಳಿದು ಬಂದಿದೆ.