ಕುರುಡು ಕಾಂಚಾಣ ಕುಣಿತ ಶುರು!
– ಲೋಕ ಸಭಾ ಚುನಾವಣೆ: 10 ಕೋಟಿ ಹಣ ವಶ,!
– ರಾಮನಗರ: ಗೋಡೌನ್ ನಲ್ಲಿ ಸಾವಿರಾರು ಸೀರೆ ಪತ್ತೆ
– ಕೊಳ್ಳೇಗಾಲದಲ್ಲಿ ದಾಖಲೆ ಇಲ್ಲದ 1 ಲಕ್ಷ ರೂ. ಹಣ ವಶ
– ಬಾಗಲಕೋಟೆ: ಚೆಕ್ ಪೋಸ್ಟ್ ನಲ್ಲಿ 17.2900 ರೂ ಜಪ್ತಿ!
– ರಾಜ್ಯದೆಲ್ಲೆಡೆ ಬಿಗಿ ಬಂದೋಬಸ್ತ್: ಎಲ್ಲೆಡೆ ತಪಾಸಣೆ
NAMMUR EXPRESS NEWS
ಲೋಕಸಭೆ ಚುನಾವಣೆಗೆ ಘೋಷಣೆ ಬೆನ್ನಲ್ಲೇ ಪೊಲೀಸರು ಮತ್ತು ಚುನಾವಣೆ ಆಯೋಗ ಭರ್ಜರಿ ಕಾರ್ಯಾಚರಣೆ ಮಾಡಿದ್ದು,ರಾಜ್ಯಾದ್ಯಂತ 5.85 ಕೋಟಿ ರೂ.ಜಪ್ತಿ ಮಾಡಲಾಗಿದೆ. ವಿವಿಧ ತನಿಖಾ ತಂಡಗಳು 5.85 ಕೋಟಿ ರೂ.ನಗದು ಸೇರಿದಂತೆ ಏಳು ಕೋಟಿ ರೂ. ಮೌಲ್ಯದ ವಿವಿಧ ವಸ್ತುಗಳನ್ನು ಜಪ್ತಿ ಮಾಡಿವೆ. ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಾದ ಬಳಿಕ ಈವರೆಗೆ 27.62 ಕೋಟಿ ರೂ.ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ರಾಜ್ಯಾದ್ಯಂತ ಈವರೆಗೆ 5.87 ಲಕ್ಷ ರೂ. ಮೌಲ್ಯದ ಉಚಿತ ಉಡುಗೊರೆಗಳು, 6.84 ಲಕ್ಷ ರೂ. ಮೌಲ್ಯದ 2148 ಲಕ್ಷ ಲೀಟರ್ ಮದ್ಯ, 15.21 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿಮಾಡಲಾಗಿದೆ. ವಿಜಯಪುರ ಜಿಲ್ಲೆಯಲ್ಲಿ 2.93ಕೋಟಿ ರೂ. ನಗದು, ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನಲ್ಲಿ 32.92 ಲಕ್ಷ ರೂ.ಗಳನ್ನು ಜಪ್ತಿ ಮಾಡಲಾಗಿದೆ.
ರಾಮನಗರ: ಗೋಡೌನ್ ನಲ್ಲಿ ಸಾವಿರಾರು ಸೀರೆ ಪತ್ತೆ
ಲೋಕಸಭಾ ಚುನಾವಣೆ ಘೋಷಣೆಯಾದ ಬೆನ್ನಲ್ಲೆ, ರಾಮನಗರದ ದ್ಯಾವರಸೇಗೌಡನ ದೊಡ್ಡಿಯಲ್ಲಿ ಗೋಡೌನ್ ನಲ್ಲಿ ಲೋಡ್ ಆಗಿದ್ದ ಸೀರೆಗಳು ಪತ್ತೆಯಾಗಿದೆ. ಈ ಸೀರೆಗಳು ಕಾಂಗ್ರೆಸ್ ಹಾಗೂ ಜೆಡಿಎಸ್ ಗೆ ಸೇರಿದ್ದು ಎಂದು ಉಭಯ ಪಕ್ಷಗಳ ಕಾರ್ಯಕರ್ತರು ಒಬ್ಬರ ಮೇಲೊಬ್ಬರು ಆರೋಪಿಸಿದ್ದಾರೆ.ಈ ಬಗ್ಗೆ ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ಟ್ರಕ್ ಸೀಜ್ ಮಾಡಿದ್ದನ್ನು ಖಚಿತಪಡಿಸಿದ್ದಾರೆ. ಸ್ಥಳೀಯರು ಹೇಳುವ ಪ್ರಕಾರ ರಾಮನಗರದ ಕಾಂಗ್ರೆಸ್ ಶಾಸಕ ಇಟ್ಬಾಲ್ ಹುಸ್ಸೇನ್ ಆಪ್ತ ಸಹಾಯಕ ವಾಸಿಮ್ ಹೆಸರಿನ ವ್ಯಕ್ತಿ ಸೀರೆಗಳನ್ನು ಲೋಡ್ ಮಾಡಿಸುತ್ತಿದ್ದ. ಸಿಸಿಟಿವಿಯಲ್ಲಿ ಅವನ ಓಡಾಟ ಸೆರೆಯಾಗಿದೆ ಎಂದು ಹೇಳಲಾಗಿದೆ. ವಿಆರ್ ಎಲ್ ಗೋದಾಮಿನಲ್ಲಿ ಪತ್ತೆಯಾಗಿರುವ ಸೀರೆಗಳು ಯಾರಿಗೆ ಸೇರಿದ್ದು ಅನ್ನೋದು ಇನ್ನೂ ಪತ್ತೆಯಾಗಿಲ್ಲ. ತನಿಖೆ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಕೊಳ್ಳೇಗಾಲದಲ್ಲಿ ದಾಖಲೆ ಇಲ್ಲದ ₹1,00,000 ರೂ. ಹಣ ವಶ
ಚಾ ಮರಾಜನಗರ: ದಾಖಲೆ ಇಲ್ಲದೇ ಸಾಗಿಸಲಾಗುತ್ತಿದ್ದ 1 ಲಕ್ಷ ರೂಪಾಯಿ ಹಣವನ್ನು ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ದಾಸನಪುರ ಚೆಕ್ ಪೋಸ್ಟ್ನಲ್ಲಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.ದಾಸನಪುರ ಚೆಕ್ ಪೋಸ್ಟ್ನಲ್ಲಿ ಬೆಂಗಳೂರಿನಿಂದ ಕೊಳ್ಳೇಗಾಲದ ಕಡೆ ಬರುತ್ತಿದ್ದ ಕಾರನ್ನು ತಪಾಸಣೆ ಮಾಡಿದ ವೇಳೆ ದಾಖಲೆ ಇಲ್ಲದೆ 1 ಲಕ್ಷ ರೂಪಾಯಿ ಹಣ ಪತ್ತೆಯಾಗಿದೆ. ಇನ್ನು ಈ ಹಣವನ್ನು ವಶಕ್ಕೆ ಪಡೆಯಲಾಗಿದ್ದು, ಮುಂದಿನ ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿಲ್ಪಾ ನಾಗ್ ತಿಳಿಸಿದ್ದಾರೆ.
ಚೆಕ್ ಪೋಸ್ಟ್’ನಲ್ಲಿ 17.2900ರೂ ಜಪ್ತಿ
ಬಾಗಲಕೋಟೆ : ತೇರದಾಳ ಪಟ್ಟಣದ ನಾಲ್ಕನೇ ಕೆನಾಲ ಬಳಿ ಇರುವ ಚೆಕ್ಪೋಸ್ಟ್ ನಲ್ಲಿ ಬಿಗಿಯಾದ ತಪಾಸಣೆ ನಡೆದಿದೆ.ಮಹಾರಾಷ್ಟ್ರ ನೋಂದಣಿ ಇರುವ ಕಾರ್ ನಲ್ಲಿ ದಾಖಲೆಯಿಲ್ಲದೇ ಸಾಗಿಸುತ್ತಿದ್ದ 1,72,900 ರೂ. ಹಣವನ್ನು ಪರಿಶೀಲನೆ ಸಂದರ್ಭದಲ್ಲಿ ಜಪ್ತ ಮಾಡಲಾಗಿದೆ. ಇನ್ನು ರಾಜ್ಯದಲ್ಲೆಡೆ ಲೋಕಸಭಾ ಚುನಾವಣೆಯ ಹಿನ್ನೆಲೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಬಿಗಿ ಪೋಲಿಸ್ ಬಂದೋಸ್ತ್ ಮಾಡಿಲಾಗಿದೆ ಎಲ್ಲೆಡೆ ಪೊಲೀಸ್ ಹದ್ದಿನ ಗಣ್ಣಿಟ್ಟಿದ್ದು ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುತ್ತಿದೆ.