- ಐತಿಹಾಸಿಕ ಬೇಲೂರು ದೇಗುಲದಲ್ಲಿ ಘಟನೆ
ಹಾಸನ: ಮನುಷ್ಯ ತನ್ನ ಆಸೆಗೆ ದೇವರನ್ನು ಬಿಡುತ್ತಿಲ್ಲ. ಹೌದು. ಐತಿಹಾಸಿಕ ಬೇಲೂರು ದೇಗುಲದಲ್ಲಿ ದುಷ್ಕರ್ಮಿಗಳು ನಿಧಿಗಾಗಿ ಮಹಾಕಾಳಿ ವಿಗ್ರವನ್ನು ಧ್ವಂಸ ಮಾಡಿದ್ದಾರೆ.
ಬೇಲೂರು ತಾಲ್ಲೂಕಿನ ದೊಡ್ಡಗದ್ದವಳ್ಳಿಯಲ್ಲಿರುವ ಐತಿಹಾಸಿಕ ಲಕ್ಷ್ಮಿ ದೇವಸ್ಥಾನ್ಕೆ ಮಂಗಳವಾರ ತಡರಾತ್ರಿ ನುಗ್ಗಿ ಈ ಕೃತ್ಯ ಎಸಗಿದ್ದಾರೆ. ದೇಗುಲ ಗ್ರಾಮದ ಹೊರಗೆ ಇರುವುದರಿಂದ ರಾತ್ರಿ ಯಾರೂ ಇಲ್ಲದ ವೇಳೆ ದುಷ್ಕರ್ಮಿಗಳು ದೇಗುಲದ ಬಾಗಿಲನ್ನು ಮುರಿದು ಒಳಗೆ ನುಗ್ಗಿದ್ದಾರೆ.
ಸುಮಾರು 800 ವರ್ಷಗಳಷ್ಟು ಹಳೆಯದಾದ ಲಕ್ಷ್ಮೀ ದೇಗುಲವನ್ನು ಹೊಯ್ಸಳ ವಂಶಸ್ಥರು ನಿರ್ಮಿಸಿದ್ದರು. ದೇಗುಲವನ್ನು ರಾಷ್ಟ್ರೀಯ ಸ್ಮಾರಕವಾಗಿ ಗುರುತಿಸಲಾಗಿದ್ದು, ಕೇಂದ್ರ ಪುರಾತತ್ವ ಇಲಾಖೆ ಅಧೀನದಲ್ಲಿ ಈ ದೇಗುಲವಿದೆ. ದೇಗುಲದಲ್ಲಿನ ವಿಶೇಷ ವಿಗ್ರಹಗಳು ಮತ್ತು ಕಲ್ಲಿನ ಕೆತ್ತನೆಗಳು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.