ಮೋದಿ ಹೆಸರು ದುರ್ಬಳಕೆ: ಸೈಬರ್ ಕಳ್ಳರ ಹೊಸ ಪ್ಲಾನ್!
– ಸಾರ್ವಜನಿಕರೆ ಎಚ್ಚರ, ಎಚ್ಚರ: ಮೋದಿ ಹೆಸರಲ್ಲಿ ಬರಲಿದೆ ಫೇಕ್ ಮೆಸೇಜ್
– ನಂಬಿ ರಿಪ್ಲೈ ಕೊಟ್ರೆ ಖಾತೆಗೆ ಕನ್ನ ಗ್ಯಾರಂಟಿ!
NAMMUR EXPRESS NEWS
ಬೆಂಗಳೂರು: ಜನರೇ ಎಚ್ಚರ… ಎಚ್ಚರ… ಪ್ರಧಾನಿ ಮೋದಿ ಹೆಸರಲ್ಲಿ ಜನ್ ಧನ್ ಯೋಜನೆಯಡಿ ನಕಲಿ ಮೆಸೇಜ್ ಬರುತ್ತಿದ್ದು, ನೀವು ಈ ಮೆಸೇಜ್ ನಂಬಿ ರಿಪ್ಲೈ ಕೊಟ್ಟರೆ ನಿಮ್ಮ ಖಾತೆಗೆ ಕನ್ನ ಗ್ಯಾರಂಟಿ. ಹೌದು, ಪ್ರಧಾನಿ ಮೋದಿ ಹೆಸರಲ್ಲಿ ಜನ್ ಧನ್ ಯೋಜನೆಯಡಿ ₹4750 ರೂ ನಕಲಿ ಮೆಸೆಜ್ ಬರುತ್ತಿದ್ದು, ಸಾರ್ವಜನಿಕರ ಖಾತೆಗೆ ಕನ್ನ ಹೊಡೆಯಲು ಸೈಬರ್ ಕಳ್ಳರು ಹೊಸ ಪ್ಲಾನ್ ರೂಪಿಸಿದ್ದಾರೆ. ಪ್ರಧಾನಿ ಮೋದಿ ಹೆಸರಿನಲ್ಲಿ ಮೊಬೈಲ್ ಗೆ ಸಂದೇಶ ಕಳುಹಿಸಿ ಚಾಲಾಕಿಗಳು ವಂಚಿಸುತ್ತಿದ್ದಾರೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಫೇಕ್ ಮೆಸೇಜ್ ಹಾವಳಿ ಹೆಚ್ಚಾಗಿದ್ದು, ಪ್ರಧಾನಿ ಮೋದಿ ಹೆಸರು ಹಾಗೂ ಫೋಟೋ ಬಳಸಿ ಫೇಕ್ ಮೆಸೇಜ್ ಕಳಿಸಲಾಗುತ್ತಿದೆ. ಎಲ್ಲರ ಖಾತೆಗೆ ಮೋದಿಯಿಂದ ₹4950 ರೂಪಾಯಿ ಬರಲಿದೆ ಅನ್ನೋ ಫೇಕ್ ಸಂದೇಶ ಕಳಿಸಲಾಗುತ್ತಿದೆ.
ಈ ಹಣವನ್ನು ನಿಮ್ಮ ಅಕೌಂಟ್ ಗೆ ಹಾಕಲು ಅಕೌಂಟ್ ಲಿಂಕ್ ಮಾಡಿ ಎಂದು ಖದೀಮರಿಂದ ಕರೆ ಬರುತ್ತಿದೆ. ಕರೆ ಮಾಡಿ OTP ರವಾನೆ, ಬಳಿಕ ಸಾರ್ವಜನಿಕರ ಖಾತೆಗೆ ಕನ್ನ ಹಾಕುತ್ತಿದ್ದಾರೆ. ನೂತನ ಮಾರ್ಗವಾಗಿ ಜನರ ಖಾತೆಗೆ ಕನ್ನ ಹಾಕಲು ಆನ್ ಲೈನ್ ವಂಚಕರು ಮುಂದಾಗಿದ್ದಾರೆ. ಪ್ರಧಾನಿ ಹೆಸರಲ್ಲಿ ಆನ್ ಲೈನ್ ನಲ್ಲಿ ಹಾವಳಿ ಹಿನ್ನೆಲೆ, ಸಾರ್ವಜನಿಕರು ಇಂತಹ ವಂಚಕರಿಂದ ದೂರ ಇರುವಂತೆ ಮನವಿ ಮಾಡಲಾಗಿದೆ. ಆನ್ ಲೈನ್ ಕಳ್ಳರ ವಿರುದ್ಧ ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ನೇತೃತ್ವದಲ್ಲಿ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ.