ಶಿವಮೊಗ್ಗದಲ್ಲಿ ಗೀತಾ ಶಿವರಾಜ್ ಕುಮಾರ್ ಹವಾ.!
– ಅದ್ದೂರಿ ಮೆರವಣಿಗೆಯೊಂದಿಗೆ ಸ್ವಾಗತ
– ಹಾಡು ಹೇಳಿ ಪತ್ನಿಯ ಸ್ಪರ್ಧೆಯನ್ನ ಹುರಿದುಂಬಿಸಿದ ನಟ
NAMMUR EXPRESS NEWS
ಶಿವಮೊಗ್ಗ: ಗೀತಾ ಶಿವರಾಜ್ಕುಮಾರ್ ಶಿವಮೊಗ್ಗಕ್ಕೆ ಎಂಟ್ರಿಯಾಗಿದ್ದು ಭದ್ರಾವತಿಯ ಬಾರಂದೂರಿನಿಂದ ಭವ್ಯ ಸ್ವಾಗತವನ್ನ ಕಾಂಗ್ರೆಸ್ ಪಕ್ಷದ ನಾಯಕರು, ಕಾರ್ಯಕರ್ತರು ಜೈಕಾರ ಹಾಕಿ ತೆರೆದ ವಾಹನದಲ್ಲಿ ಕರೆತರಲಾಗಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ಕುಮಾರ್ ಎಂಟ್ರಿ ಕೊಟ್ಟಿದ್ದಾರೆ. ಭದ್ರಾವತಿಯಲ್ಲಿ ಅವರಿಗೆ ಭವ್ಯ ಸ್ವಾಗತವನ್ನು ಕೋರಲಾಯಿತು. ಶಾಸಕ ಬಿ.ಕೆ. ಸಂಗಮೇಶ್ವರ್, ಸಚಿವ ಮಧು ಬಂಗಾರಪ್ಪ ಸೇರಿದಂತೆ ಇತರರು ಪಾಲ್ಗೊಂಡಿದ್ದರು. ಈ ವೇಳೆ ಹ್ಯಾಟ್ರಿಕ್ ಹೀರೋ ಶಿವಣ್ಣ ಸಹ ಜೊತೆಗೆ ಇದ್ದರು. ಕಾರ್ಯಕರ್ತರು ಕಾಂಗ್ರೆಸ್ ಮತ್ತು ಗೀತಾ ಶಿವರಾಜ್ಕುಮಾರ್ ಪರ ಜಯಘೋಷ ಹಾಕಿದರು.
ಕಾಂಗ್ರೆಸ್ ಟಿಕೆಟ್ ಘೋಷಣೆಯಾದ ಬಳಿಕ ಇದೇ ಪ್ರಥಮ ಬಾರಿಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಗೀತಾ ಶಿವರಾಜ್ಕುಮಾರ್ ಎಂಟ್ರಿ ಕೊಟ್ಟಿದ್ದಾರೆ. ಓಪೆನ್ ಜೀಪ್ನಲ್ಲಿ ಮೆರವಣಿಗೆಯನ್ನು ಮಾಡಲಾಯಿತು. ಗ್ಯಾರಂಟಿ ಪರ ಘೋಷಣೆಗಳು ಈ ಸಂದರ್ಭದಲ್ಲಿ ಮೊಳಗಿದವು. ಬೈಕ್ನಲ್ಲಿ ನೂರಾರು ಕಾರ್ಯಕರ್ತರು ನಡೆಸಿದ್ದಾರೆ.
ವೇದಿಕೆಯ ಮೇಲೆ ಹಾಡು ಹೇಳಿ ಪತ್ನಿಯ ಸ್ಪರ್ಧೆಯನ್ನ ಹುರಿದುಂಬಿಸಿದ ನಟ ಶಿವರಾಜ್ ಕುಮಾರ್:
ಶಿವಮೊಗ್ಗದ ಲಗಾನ್ ಕಲ್ಯಾಣ ಮಂದಿರದಲ್ಲಿ ನಟ ಶಿವರಾಜ್ ಕುಮಾರ್ ಹಾಡು ಹೇಳುವ ಮೂಲಕ ಮತ್ತೊಂದು ಅಗ್ನಿ ಪರೀಕ್ಷೆಗೆ ಸ್ಪರ್ಧಿಸುತ್ತಿರುವ ತಮ್ಮ ಪತ್ನಿ ಗೀತಾರ ಪರ ಪ್ರಚಾರ ಆರಂಭಿಸಿದ್ದಾರೆ. “ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ” ಎಂಬ ದಿ.ಡಾ.ರಾಜ್ ಕುಮಾರ್ ಅಭಿನಯದ ಬಂಗಾರದ ಮನುಷ್ಯ ಸಿನಿಮಾ ಹಾಡನ್ನ ಹೇಳಿ ಪತ್ನಿಯ ಮತ್ತೊಮ್ಮೆ ಸ್ಪರ್ಧೆಯನ್ನ ಬೆಂಬಲಿಸಿದ್ದಾರೆ.
ಹೆಣ್ಣಿನ ಸಾಮರ್ಥ್ಯದ ಬಗ್ಗೆಯೂ ಮಾತನಾಡಿದ ನಟ ಡಾ.ಶಿವರಾಜ್ ಕುಮಾರ್, ಹೆಣ್ಣು ಭೂಮಿ ತಾಯಿಗೆ ಸಮಾನ, ಹೆಣ್ಣು ಕುಟುಂಬದ ಜವಬ್ದಾರಿ ನಿಭಾಯಿಸಿ ಪತಿಗೆ ಸಹಕಾರ ನೀಡುತ್ತಾಳೆ. ಈ ರೀತಿಯ ಜವಬ್ದಾರಿ ನಿಭಾಯಿಸುವುದರಿಂದಲೇ ಹೆಣ್ಣು ಕುಟುಂಬದ ಮತ್ತು ಸಮಾಜದ ಕಣ್ಣಾಗುತ್ತಾಳೆ ಎಂದು ಹೇಳಿ ಪತಿಯನ್ನ ವೇದಿಕೆಯ ಮೇಲೆಯೇ ಹುರಿದುಂಬಿಸಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ನಾನು ಇರ್ತೀನಿ. ಆದರೆ ಕೆಲವೊಂದು ದಿನಗಳು ಗೈರು ಆದರೆ ಬೇಸರಸಿಕೊಳ್ಳದಂತೆ ಮನವಿ ಮಾಡಿದ ಶಿವರಾಜ್ ಕುಮಾರ್, ಎಲ್ಲಾ ಊರಿಗೂ ಬರುತ್ತೇವೆ. ಗೆದ್ದ ನಂತರ ನಿಮ್ಮ ಕೆಲಸ ಮಾಡದಿದ್ದರೆ ಆಗ ನನಗೆ ಹೇಳಿ ಆಗ ನಾನು ಏನು ಅಂತ ತೊರಿಸುವುದಾಗಿ ಹಾಸ್ಯ ಚಟಾಕಿ ಹಾಕಿದರು.
ನಾನು ಈ ಜಿಲ್ಲೆಯ ಮಗಳು-ಗೀತಾ ಶಿವರಾಜ್ ಕುಮಾರ್:
ಕಳೆದ ಬಾರಿ 17 ದಿನ ಪ್ರಚಾರ ಮಾಡಿದ್ದೆ. ಸಮಯವಿರಲಿಲ್ಲ ಎಂದು ಗೀತಾ ಶಿವರಾಜ್ ಕುಮಾರ್ ತಿಳಿಸಿದರು. ಲಗಾನ್ ಕಲ್ಯಾಣ ಮಂದಿರದಲ್ಲಿ ಚುನಾವಣೆ ಸಭೆಯಲ್ಲಿ ಭಾಗಿಯಾಗಿ ಮಾತನಾಡಿ ನಮ್ಮ ಸರ್ಕಾರ ನುಡಿದಂತೆ ನೆಡೆದ ಸರ್ಕಾರವಾಗಿದೆ. ಐದು ಗ್ಯಾರೆಂಟಿ ನೀಡುವ ಭರವಸೆ ನೀಡಲಾಗಿತ್ತು.ಆದರೆ ಬಿಜೆಪಿಯ ಹೆಸರಳೇದೆ ಈಗಿನ ಕೇಂದ್ರ ಸರ್ಕಾರ ಏನು ಭರವಸೆ ನೀಡಿದರೋ ಅದನ್ನ ನೀಡಿಲ್ಲ ಎಂದರು. ಮಧು ಬಂಗಾರಪ್ಪನವರು ಶ್ರಮ ಪಟ್ಟು ತಂದೆ ಸ್ಥಾನಕ್ಕೆ ಬೆಳೆದು ಬಂದಿದ್ದೇನೆ. ನಾನು ಈ ಜಿಲ್ಲೆಯ ಮಗಳು. ನೀವು ನನಗೆ ಮತ ಹಾಕಲೇಬೇಕು. ಜಿಲ್ಲೆಯ ಮಗಳನ್ನ ಬರಿ ಕೈಯಲ್ಲಿ ಕಳುಹಿಸಬಾರದು ಎಂದು ತಿಳಿಸಿದರು. ನಾನು ಮಹಿಳೆಯರ ಮತ್ತು ಮಕ್ಕಳ ಹಾಗೂ ಜಿಲ್ಲೆಯ ಧ್ವನಿಯಾಗಿ ನಿಲ್ಲುವುದಾಗಿ ಭರವಸೆ ನೀಡಿದರು.