– ಬಿಗ್ ಬಾಸ್ ಕನ್ನಡ ಒಟಿಟಿ ಖ್ಯಾತಿಯ ಸೋನು ಗೌಡ ಬಂಧನ..!
– ಬಿಬಿಎಂಪಿ ನಿರ್ಲಕ್ಷ: ಬೈಕ್ ಸವಾರನ ಮೇಲೆ ಬಿದ್ದ ಮರದ ಬೃಹತ್ ಕೊಂಬೆ.!
– ಚಾಮರಾಜನಗರ: ಕಾಡಾನೆ ದಾಳಿಗೆ ಸಿಲುಕಿ ಯುವಕ ಸಾವು!
– ಮಂಡ್ಯ: ಕೆಂಡೋತ್ಸವದ ವೇಳೆ ದುರಂತ: ಪೂಜಾರಿಗೆ ತೀವ್ರ ಗಾಯ!
– ಬಸ್ ಚಾಲಕನಿಗೆ ಜೀವ ಬೆದರಿಕೆ: ಆರೋಪಿ ಬಂಧನ
NAMMUR EXPRESS NEWS
ಬೆಂಗಳೂರು: ಬಿಗ್ ಬಾಸ್ ಕನ್ನಡ ಒಟಿಟಿ ಖ್ಯಾತಿಯ ಸೋನು ಶ್ರೀನಿವಾಸ್ ಗೌಡ ಅವರು ಸೇವಂತಿ ಎನ್ನುವ ಬಡ ಹುಡುಗಿಯನ್ನು ದತ್ತು ತೆಗೆದುಕೊಂಡಿರುವ ವಿಚಾರ ಗೊತ್ತೇ ಇದೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಮಕ್ಕಳ ಕಲ್ಯಾಣ ಇಲಾಖೆಯಿಂದ ಈ ವಿಚಾರವಾಗಿ ಸೋನು ಗೌಡ ವಿರುದ್ಧ ದೂರ ದಾಖಲಾಗಿದೆ. ಉತ್ತರಕರ್ನಾಟಕದ 8 ವರ್ಷದ ಮಗುವನ್ನ ಸೋನು ಗೌಡ ದತ್ತು ತೆಗೆದುಕೊಂಡಿದ್ದು, ಸಾರ್ವಜನಿಕವಾಗಿ ಮಾಹಿತಿ ಹಂಚಿಕೊಳ್ಳುವಂತಿಲ್ಲ. ಆದರೆ ಸೋನುಗೌಡ ವಿಡಿಯೊದಲ್ಲಿ ಮಗುವಿನ ಮಾಹಿತಿ ಹಂಚಿಕೊಂಡಿದ್ದರು. ಈಗ ಪೊಲೀಸರು ಸೋನು ಗೌಡ ಅವರನ್ನು ಬಂಧಿಸಿದ್ದಾರೆ. ಜೆಜೆ ಕಾಯ್ದೆ ಅಡಿಯಲ್ಲಿ ಸೋನು ಗೌಡ ಅವರನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಸೋನು ಗೌಡ ಅವರು ಸೇವಂತಿ ಎನ್ನುವ ಹುಡುಗಿಗೆ ಮನೆಯಲ್ಲಿ ಊಟ ಹಾಕಿಸೋದು, ಮೂಗು ಸುಚ್ಚಿಸಿ ಮೂಗುತಿ ಹಾಕೋದು, ಊಟ ಮಾಡಿಸುವ ವಿಡಿಯೊ ಮಾಡಿ, ಅದನ್ನು ಯುಟ್ಯೂಬ್ನಲ್ಲಿ ಅಪ್ಲೋಡ್ ಮಾಡುತ್ತಿದ್ದರು. “ಮನೆಯ ಸುತ್ತ ಇರುವ ನಾಯಿಗಳಿಗೆ ಬಿಸ್ಕಟ್ ಹಾಕುವಾಗ ನನಗೆ ಸೇವಂತಿ ಎನ್ನುವ 7 ವರ್ಷದ ಮಗುವಿನ ಪರಿಚಯ ಆಯ್ತು ಎಂದು ಸೋನು ಹೇಳಿಕೊಂಡಿದ್ದರು. ಮಾತ್ರವಲ್ಲ ಈ ಮುಂಚೆ ಸೇವಂತಿಯನ್ನು ದತ್ತು ತೆಗೆದುಕೊಳ್ಳುತ್ತೇನೆ ಎಂದರೆ ಅವರ ತಾಯಿ ಒಪ್ಪಿಲ್ಲ. ಬಳಿಕ ಕಾನೂನ ಪ್ರಕಾರ ಸೇವಂತಿಯನ್ನು ಪಡೆದೆ. ಅದಕ್ಕೆ 3 ತಿಂಗಳುಗಳೇ ತೆಗೆದುಕೊಂಡಿದೆ.
ಬಡ ಹುಡುಗಿಯನ್ನು ಮನೆಗೆ ಕರೆದುಕೊಂಡು ಬಂದಿದ್ದೀನಿ ಅಂತ ಅಂದ್ರೆ ಮೆಚ್ಚುಗೆ ಸೂಚಿಸಿ, ಇಲ್ಲ ಅಂದ್ರೆ ಸುಮ್ಮನೆ ಇರಿ. ನೆಗೆಟಿವ್ ಕಮೆಂಟ್ ಮಾಡುವರಿಗೆ ನಾನು ಸೈಬರ್ ಕ್ರೈಂ ಕೊಡ್ತೀನಿ ಎಂದು ಸೋನು ಈ ಹಿಂದೆ ವಿಡಿಯೊ ಮೂಲಕ ಹೇಳಿಕೊಂಡಿದ್ದರು. ಮಗು ದತ್ತು ಸಂಬಂಧ ಸೋನು ಗೌಡ ವಿರುದ್ಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಮಕ್ಕಳ ಕಲ್ಯಾಣ ಇಲಾಖೆಯಿಂದ ದೂರು ದಾಖಲಾಗಿತ್ತು. ಬಿಗ್ ಬಾಸ್ ಖ್ಯಾತಿಯ ಸೋನು ಶ್ರೀನಿವಾಸ್ ಗೌಡ ತಮ್ಮ ಫೋಟೊ, ರೀಲ್ಸ್, ವಿಡಿಯೊ ಮೂಲಕ ಟ್ರೋಲ್ಗೆ ಗುರಿಯಾಗುತ್ತಲೇ ಇರುತ್ತಾರೆ.
ಬೈಕ್ ಸವಾರನ ಮೇಲೆ ಬಿದ್ದ ಮರದ ಬೃಹತ್ ಕೊಂಬೆ.!
ಬೆಂಗಳೂರು: ಬೆಂಗಳೂರಿನ ಬೈಕ್ ಸವಾರರು ನೋಡಲೇಬೇಕಾದ ಸ್ಟೋರಿ ಇದು. ಬೆಂಗಳೂರು ಬಿಬಿಎಂಪಿ ದಿವ್ಯ ನಿರ್ಲಕ್ಷ್ಯದಿಂದ ಅಪಾಯ ಯಾವಾಗ ಬೇಕಾದ್ರು ನಿಮ್ಮ ಕಣ್ಮುಂದೆ ಬರಬಹುದು. ಯಾಕಂದ್ರೆ ಬೆಂಗಳೂರಿನಲ್ಲಿ ಘೋರ ದುರಂತ ನಡೆದಿದೆ. ಹೌದು ಮರದ ಕೊಂಬೆ ಮುರಿದು ಬಿದ್ದು ಬೈಕ್ ಸವಾರನ ಬೆನ್ನು ಮೂಳೆ ಮುರಿದ ಘಟನೆ ಬೆಂಗಳೂರು ನಗರದಲ್ಲಿ ನಡೆದಿದೆ. ಮರದ ಕೊಂಬೆ ರಸ್ತೆಗೆ ಬೀಳುವಂತಿದ್ದರು ತೆರವು ಮಾಡದ ಆರೋಪ ಪ್ರಕರಣ ಸಂಬಂಧ ಖಾಸಗಿ ಶಾಲೆ ಮತ್ತು ಬಿಬಿಎಂಪಿ ವಿರುದ್ಧ ಆಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಗರಬಾವಿ ನಿವಾಸಿ ಚಂದನ್ ಬೆನ್ನು ಮೂಳೆ ಮುರಿತಕ್ಕೊಳಗಾದ ಬೈಕ್ ಸವಾರ. ಫೈನಾನ್ಸ್
ಕಂಪನಿವೊಂದರಲ್ಲಿ ಕೆಲಸ ಮಾಡುತ್ತಿದ್ದ ಚಂದನ್ ಮಾರ್ಚ್ 7 ರಂದು ಬೆಳಗ್ಗೆ ಕಚೇರಿಗೆ ಹೋಗುತ್ತಿದ್ದರು. ಈ ವೇಳೆ ರಸ್ತೆಗೆ ಚಾಚುಕೊಂಡಿದ್ದ ಮರದ ಕೊಂಬೆ ಚಂದನ್ ಮೇಲೆ ಮುರಿದು ಬಿದ್ದಿದೆ.ಕೊಂಬೆ ಮೈ ಮೇಲೆ ಬೀಳುತ್ತಿದ್ದಂತೆ ರಸ್ತೆ ಮೇಲೆ ಬಿದ್ದ ಚಂದನ್ನ ಕುತ್ತಿಗೆ ಗಾಯವಾಗಿದೆ. ಅಲ್ಲದೆ, ಬೆನ್ನು ಮೂಳೆ ಮುರಿದಿದೆ. ಏಳೆಂಟು ನಿಮಿಷಗಳ ಕಾಲ ರಸ್ತೆಯಲ್ಲಿ ನರಳಾಡಿದ್ದ ಚಂದನ್ನನ್ನು ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಕಳೆದ 14 ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಂದನ್ಗೆ ಚಿಕಿತ್ಸೆ ನೀಡಲಾಗುತ್ತಿದ್ದಾರೆ. ಈ ನಡುವೆ ಆಶೋಕನಗರ ಪೊಲೀಸರಿಗೆ ಚಂದನ್ ದೂರು ನೀಡಿದ್ದಾರೆ.
ಕಾಡಾನೆ ದಾಳಿಗೆ ಸಿಲುಕಿ ಯುವಕ ಸಾವು: ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಶಾಸಕ:
ಚಾಮರಾಜನಗರ: ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟಿದ್ದ ಯುವಕನ ಕುಟುಂಬಸ್ಥರಿಗೆ ಮಾಜಿ ಶಾಸಕ ಆರ್ ನರೇಂದ್ರ ಸಾಂತ್ವನ ಹೇಳುವ ಜೊತೆಗೆ ಪರಿಹಾರ ಹಣದ ಭರವಸೆ ನೀಡಿದ್ದಾರೆ. ಹನೂರು ತಾಲೂಕಿನ ಕತ್ತೆ ಕಾಲ್ ಪೋಡು ಗ್ರಾಮದ ಜಡಯ್ಯ ಎಂಬುವರ ಪುತ್ರ ಮಾದ ಆನೆ ದಾಳಿಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದರು.
ಮಂಡ್ಯದಲ್ಲಿ ಕೊಂಡೋತ್ಸವದ ವೇಳೆ ಘೋರ ದುರಂತ:
– ಕೊಂಡಕ್ಕೆ ಬಿದ್ದು ‘ಪೂಜಾರಿ’ಗೆ ತೀವ್ರ ಗಾಯ:
ಮಂಡ್ಯ: ಜಿಲ್ಲೆಯ ಮದ್ದೂರಿನಲ್ಲಿ ಕೆಂಡೋತ್ಸವದ ವೇಳೆಯಲ್ಲಿ ಪೂಜಾರಿಯೊಬ್ಬರು ಕೊಂಡವನ್ನು ಹಾಯುವ ಸಂದರ್ಭದಲ್ಲಿ ಆಯತಪ್ಪಿ ಕೊಂಡಕ್ಕೆ ಬಿದ್ದ ಕಾರಣ, ತೀವ್ರಗಾಯವಾಗಿರೋ ಘಟನೆ ನಡೆದಿದೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹುಲುಗನಹಳ್ಳಿಯಲ್ಲಿ ಕೆಂಡೋತ್ಸವವನ್ನು ಆಯೋಜಿಸಲಾಗಿತ್ತು. ಬಸವೇಶ್ವರ ಕೆಂಡೋತ್ಸವದ ವೇಳೆಯಲ್ಲಿ ವೀರಗಾಸೆಯ ಪೂಜಾರಿ ಕೊಂಡವನ್ನು ಹಾಯೋದಕ್ಕೆ ಓಡಿ ಹೋಗುತ್ತಿದ್ದರು. ಕೊಂಡದಲ್ಲಿ ಓಡಿ ಹೋಗುತ್ತಾ ಹಾದು ಹೋಗುತ್ತಿದ್ದಾಗ ಆಯತಪ್ಪಿ ವೀರಗಾಸೆ ಪೂಜಾರಿ ಬಿದ್ದಿದ್ದರು. ಕೂಡಲೇ ಅವರನ್ನು ಅಲ್ಲಿದಂತ ಜನರು ಎತ್ತಿ, ಸಂತೈಸಿದ್ದರು. ಆದ್ರೇ ಬೆಂಕಿಯ ಕೆಂಡದಿಂದ ಅವರಿಗೆ ತೀವ್ರವಾದಂತ ಸುಟ್ಟಗಾಯವಾಗಿತ್ತು. ಅವರನ್ನು ಕೂಡಲೇ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಚಿಕಿತ್ಸೆ ಬಳಿಕ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ಬಸ್ ಚಾಲಕನಿಗೆ ಜೀವ ಬೆದರಿಕೆ: ಆರೋಪಿ ಬಂಧನ:
ಬೆಳಗಾವಿ: ಇಲ್ಲಿನ ನೆಹರೂ ನಗರದ ಆರ್.ಎನ್.ಶೆಟ್ಟಿ ಕಾಲೇಜು ಕ್ರಾಸ್ನಲ್ಲಿ ಗುರುವಾರ ಸಾರಿಗೆ ಸಂಸ್ಥೆಯ ಬಸ್ ಚಾಲಕನಿಗೆ ಏರ್ಗನ್ ತೋರಿಸಿ, ಜೀವ ಬೆದರಿಕೆ ಹಾಕಿದ ಪ್ರಕರಣ ಸಂಬಂಧ ಆರೋಪಿಯೊಬ್ಬನನ್ನು ಮಾಳಮಾರುತಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆಝಮ್ ನಗರದ ಮಹಮ್ಮದ್ ಷರೀಫ್ ಬಾದ್ಶಾಹ್ ಮುಲ್ಲಾ ಬಂಧಿತ ಆರೋಪಿ. ಕಾರು ಚಾಲಕ ಮಹಮ್ಮದ್ಷರೀಫ್ ರಸ್ತೆಯಲ್ಲಿ ಅಡ್ಡಬಂದು, ವಾಹನ ಚಾಲನೆಗೆ ಸಂಬಂಧಿಸಿದಂತೆ ವಾಗ್ವಾದ ಮಾಡಿದರು. ಶರ್ಟ್ ಎಳೆದಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಏರ್ಗನ್ ಹಿಡಿದು ಜೀವ ಬೆದರಿಕೆ ಹಾಕಿದರು ಎಂದು ಬಸ್ನ ಚಾಲಕ ಮಲ್ಲಿಕಾರ್ಜುನ ಅಂಕಲಿ ದೂರು ನೀಡಿದ್ದರು. ಅದನ್ನು ಆಧರಿಸಿ ಆರೋಪಿಯನ್ನು ಬಂಧಿಸಿದ್ದೇವೆ. ಏರ್ಗನ್, ಕಾರು ವಶಕ್ಕೆ ಪಡೆದು, ತನಿಖೆ ಮುಂದುವರಿಸಿದ್ದೇವೆ ಎಂದು ಮಾಳಮಾರುತಿ ಪೊಲೀಸ್ ಇನ್ಸ್ಪೆಕ್ಟರ್ ತಿಳಿಸಿದರು.