- ಹಳ್ಳಿಗೆ ಮಾಡಿದ ಜನಪರ ಕೆಲಸಕ್ಕೆ ದೇವರ ಸ್ಥಾನ
- ನಟರು, ರಾಜಕಾರಣಿಗಳ ಸೇವೆಗೆ ಇದು ಮಾದರಿ
ಮಂಡ್ಯ: ಕನ್ನಡ ಚಿತ್ರರಂಗದ ಮೇರು ನಟ ರೆಬಲ್ ಸ್ಟಾರ್ ಅಂಬರೀಷ್ ಅವರ ನೆನಪಲ್ಲಿ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹೊಟ್ಟೆಗೌಡನದೊಡ್ಡಿಯಲ್ಲಿ 8 ಲಕ್ಷ ರೂ. ನಿಧಿ ಸಂಗ್ರಹದ ಮೂಲಕ “ಅಂಬಿ ಅಮರ’ ದೇವಾಲಯ ನಿರ್ಮಿಸಿ ನಟನಿಗೆ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ರೆಬೆಲ್ ಸ್ಟಾರ್ ಅಂಬರೀಶ್ ಅವರ ಕಂಚಿನ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದ್ದು, ಅವರ ಎರಡನೇ ಪುಣ್ಯ ಸ್ಮರಣೆ ದಿನವಾದ ನವೆಂಬರ್ 24ರಂದು ಅನಾವರಣ ಮಾಡಲಾಗುತ್ತಿದೆ. ಈಗಾಗಲೇ ಗ್ರಾಮದಲ್ಲಿ ಸಡಗರ ಮನೆ ಮಾಡಿದೆ.
ಅಂಬರೀಷ್ ಹಳ್ಳಿಯಲ್ಲಿ ಜನಪರ ಕಾರ್ಯಗಳಿಂದ ಜನರ ಜೀವನ ಬದಲಾಗಿದ್ದು, ದೇವರಂತೆ ನಂಬಿಕೆ ಇಡಲಾಗಿದೆ. ಪ್ರತಿಯೊಬ್ಬರ ಮನೆಯಲ್ಲೂ ಅಂಬಿ ಫೆÇೀಟೋವಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಅಂಬರೀಶ್ ಅವರ ಸಮಾಧಿ ಸ್ಥಳದಿಂದ ತಂದ ಚಿತಾಭಸ್ಮವನ್ನು ಇಲ್ಲಿಟ್ಟು ಅವರ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಇದರ ಹಿಂದೆ ಯಾವುದೇ ರಾಜಕೀಯ ಇಲ್ಲ, ಸ್ವಯಂ ಪ್ರೇರಣೆಯಿಂದ ಈ ಕಾರ್ಯವನ್ನು ಮಾಡಿದ್ದೇವೆ ಎಂದು ಅಖಿಲ ಕರ್ನಾಟಕ ಡಾ.ಅಂಬರೀಶ್ ಅಭಿಮಾನಿಗಳ ಸಂಘದ ಅಧ್ಯಕ್ಷ ನಾಗೇಶ್ ತಿಳಿಸಿದ್ದಾರೆ. ಈ ದೇವಾಲಯ ನೋಡಲು ಜನರು ಇದೀಗ ಹಳ್ಳಿಗೆ ಆಗಮಿಸುತ್ತಿದ್ದಾರೆ. ಈ ಹಿಂದೆ ರಜನೀಕಾಂತ್, ಅಮಿತಾಬ್ ಬಚ್ಚನ್, ರಾಜಕುಮಾರ್ ಸೇರಿ ಹಲವರ ದೇವಾಲಯ ಕೂಡ ಅಭಿಮಾನಿಗಳು ನಿರ್ಮಿಸಿದ್ದರು.