ಬಿಜೆಪಿ ಅಭ್ಯರ್ಥಿಗಳ 5ನೇ ಪಟ್ಟಿಯಲ್ಲಿ ಹಲವು ಟ್ವಿಸ್ಟ್!
– ಹಾಸನ, ಕೋಲಾರ, ಮಂಡ್ಯ ಟಿಕೆಟ್ ಜೆಡಿಎಸ್ ಇಂದು ಘೋಷಣೆ?
– ಕರ್ನಾಟಕದ ನಾಲ್ವರಿಗೆ ಬಿಜೆಪಿ ಟಿಕೆಟ್.!
– ಜಗದೀಶ್ ಶೆಟ್ಟರ್ ಗೆ ಒಲಿದ ಅದೃಷ್ಟ
– ಅನಂತ ಕುಮಾರ್ ಹೆಗ್ಡೆಗೆ ಟಿಕೆಟ್ ಇಲ್ಲ
NAMMUR EXPRESS NEWS
ಬೆಂಗಳೂರು : ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ 5ನೇ ಪಟ್ಟಿ ರಿಲೀಸ್ ಮಾಡಿದೆ. ಲೋಕಸಭೆ ಚುನಾವಣೆ ದಿನಾಂಕ ಈಗಲೇ ಅನೌನ್ಸ್ ಆಗಿದ್ದು, ಇನ್ನೂ ಬಿಜೆಪಿ ಪಕ್ಷದ ಟಿಕೆಟ್ ಬಿಡುಗಡೆ ಮಾಡಲು ಹೈಕಮಾಂಡ್ ಭಾರೀ ಕಸರತ್ತು ನಡೆಸಿದೆ. ಸದ್ಯ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ.
ಯಾರಿಗೆ ಟಿಕೆಟ್?
ಬೆಳಗಾವಿ – ಜಗದೀಶ್ ಶೆಟ್ಟರ್
ಉತ್ತರ ಕನ್ನಡ – ವಿಶ್ವೇಶ್ವರ್ ಹೆಗಡೆ ಕಾಗೇರಿ
ಚಿಕ್ಕಬಳ್ಳಾಪುರ – ಡಾ. ಕೆ ಸುಧಾಕರ್
ರಾಯಚೂರು – ರಾಜಾ ಅಮರೇಶ್ವರ್ ನಾಯಕ್
ಇನ್ನೂ ಚಿತ್ರದುರ್ಗ ಕ್ಷೇತ್ರವನ್ನು ಉಳಿಸಿಕೊಂಡಿರುವ ಬಿಜೆಪಿ ಯಾರನ್ನು ಕಣಕ್ಕಿಳಿಸಲಿದೆ ಎಂಬುದು ಗೌಪ್ಯವಾಗಿದೆ. ಬಿಜೆಪಿ ಮೂರು ಕ್ಷೇತ್ರಗಳಾದ ಹಾಸನ, ಮಂಡ್ಯ, ಕೋಲಾರವನ್ನು ಮಿತ್ರ ಪಕ್ಷ ಜೆಡಿಎಸ್ ಗೆ ಬಿಟ್ಟು ಕೊಟ್ಟಿದೆ. ಮಂಡ್ಯದಿಂದ ಕುಮಾರಸ್ವಾಮಿ, ಹಾಸನದಿಂದ ಪ್ರಜ್ವಲ್ ರೇವಣ್ಣ, ಕೋಲಾರದಿಂದ ಮಲ್ಲೇಶ್ ಸ್ಪರ್ಧೆ ಬಹುತೇಕ ಅಂತಿಮ ಎನ್ನಲಾಗಿದೆ. ಸೋಮವಾರ ಘೋಷಣೆ ಸಾಧ್ಯತೆ ಇದೆ.
ಸುಮಲತಾಗೆ ಟಿಕೆಟ್ ನಿರಾಸೆ
ಮಂಡ್ಯ, ಹಾಸನ ಮತ್ತು ಕೋಲಾರ ಕ್ಷೇತ್ರಗಳ ವಿಚಾರವಾಗಿ ಬಿಜೆಪಿ-ಜೆಡಿಎಸ್ ಸೀಟು ಹಂಚಿಕೆ ಕಗ್ಗಂಟಿಗೆ ತೆರೆಬಿದ್ದಿದ್ದು, ಈ ಮೂರೂ ಕ್ಷೇತ್ರಗಳನ್ನು ಕಮಲ ಪಾಳಯವು ದಳಪತಿಗಳಿಗೆ ಬಿಟ್ಟುಕೊಟ್ಟಿದೆ. ಬಿಜೆಪಿ ಲೋಕಸಭಾ ಚುನಾವಣಾ ಉಸ್ತುವಾರಿ ರಾಧಾಮೋಹನ್ ದಾಸ್ ಅವರು ಶನಿವಾರ ಈ ವಿಷಯ ಪ್ರಕಟಿಸಿದ್ದು, ಇದರೊಂದಿಗೆ ಮಂಡ್ಯ ಸೀಟಿನ ಕುರಿತು ಭಾರಿ ನಿರೀಕ್ಷೆ ಹೊಂದಿದ್ದ ಸಂಸದೆ ಸುಮಲತಾ ಅಂಬರೀಶ್ ರಾಜಕೀಯ ಭವಿಷ್ಯ ಅತಂತ್ರಕ್ಕೆ ಸಿಲುಕಿದೆ. ಸುಮಲತಾ ಅವರ ನಡೆ ಈಗ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಕಳೆದ ಬಾರಿಯಂತೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆಯೇ ಅಥವಾ ರಾಜಕಾರಣ ದಿಂದ ದೂರ ಇರುತ್ತಾರೆಯೇ ಎಂಬ ಚರ್ಚೆಗೆ ದಾರಿಮಾಡಿದೆ.
ಚಿತ್ರದುರ್ಗದಲ್ಲಿ ಬಿಜೆಪಿ ಅಭ್ಯರ್ಥಿ ಸಂಕಟ!
ಚಿತ್ರದುರ್ಗ: ಚಿಕ್ಕಮಗಳೂರಿನಲ್ಲಿ ಸಚಿವ ಶೋಭಾ ಕರಂದ್ಲಾಜೆ ವಿರುದ್ಧ ನಡೆಸಿದ ಗೋ ಬ್ಯಾಕ್ ಚಳವಳಿ ಮಾದರಿಯಲ್ಲಿ ಚಿತ್ರದುರ್ಗದಲ್ಲಿ ಪ್ರತಿಭಟನೆಗಳು ನಡೆದಿದ್ದು, ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ಹಾಗೂ ಬಿಜೆಪಿ ಟಿಕೆಟ್ ಆಕಾಂಕ್ಷಿ ಮಾಜಿ ಸಚಿವ ಗೋವಿಂದ ಕಾರಜೋಳ ವಿರುದ್ಧ ಬಿಜೆಪಿ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದರು. ಹೊರಗಿನವರಿಗೆ ಮಣೆ ಹಾಕಿದ್ದು ಸಾಕು, ಸ್ಥಳೀಯರಿಗೆ ಟಿಕೆಟ್ ಕೊಡಿ ಎಂದು ಪ್ರತಿಭಟನಾಕಾರರು ಹಕ್ಕೊತ್ತಾಯ ಮಂಡಿಸಿದರು. ಚಿತ್ರದುರ್ಗ ಕ್ಷೇತ್ರದಿಂದ ಕಾರಜೋಳ ಅವರಿಗೆ ಟಿಕೆಟ್ ನೀಡ ಲಾಗುತ್ತಿದೆ ಎಂಬ ಸುದ್ದಿ ಗ್ರಹಿಸಿದ ಮತ್ತೋರ್ವ ಟಿಕೆಟ್ ಆಕಾಂಕ್ಷಿ ರಘು ಚಂದನ್ ಬೆಂಬಲಿಗರು ಪ್ರತಿಭಟನೆ ನಡೆಸಿದರು. ಗೋಬ್ಯಾಕ್ ನಾರಾಯಣಸ್ವಾಮಿ, ಗೋ ಬ್ಯಾಕ್ ಕಾರಜೋಳ ಘೋಷಣೆಯ ಪ್ಲೇ ಕಾರ್ಡ್ ಹಿಡಿದ ಪ್ರತಿಭಟನಾಕಾರರು ನಂತರ ಬಿಜೆಪಿ ಕಚೇರಿಗೆ ತೆರಳಿ ಮುತ್ತಿಗೆ ಹಾಕಿದರು. ಪಕ್ಷ ಕಟ್ಟೋಕೆ ನಾವು ಬೇಕು, ಟಿಕೆಟ್ ನೀಡಿ ಸಂಸತ್ಗೆ ಕಳಿಸಲು ಬೇರೆಯವರು ಬೇಕಾ ಎಂದು ಅಸಮಾಧಾನ ಹೊರ ಹಾಕಿದರು.