2 ದಿನ ಮಳೆ ಸೂಚನೆ: ಹೆಚ್ಚಿದ ಬಿಸಿಲು, ಚಳಿ
ಬೆಂಗಳೂರು: ಒಂದು ಕಡೆ ಚಳಿ ಹೆಚ್ಚಾಗುತ್ತಿದೆ. ಇತ್ತ ಮಧ್ಯಾಹ್ನ ಬಿಸಲಿನ ಝಳವೂ ಹೆಚ್ಚಿದೆ. ಈ ನಡುವೆ ನವೆಂಬರ್ 24 ರಿಂದ ಎರಡು ದಿನಗಳವರೆಗೆ ದಕ್ಷಿಣ ಒಳನಾಡು ಭಾಗಗಳಲ್ಲಿ ಮಳೆ ಸುರಿಯುವ ಸಾಧ್ಯತೆಯಿಂದ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮೋಡ ಮುಸುಕು, ಮುಂಜಾನೆ ಹೊತ್ತು ಹೆಚ್ಚು ಮಂಜು ಕಂಡುಬರುತ್ತಿದೆ. ಸಾಯಂಕಾಲ ಹೊತ್ತು ಕೂಡ ಚಳಿ ಮಂಜು ಇರುತ್ತದೆ. ಚಂಡಮಾರುತದ ಪರಿಣಾಮ ಹಿಂದೂ ಮಹಾಸಾಗರ ಮತ್ತು ಬಂಗಾಳಕೊಲ್ಲಿಯ ದಕ್ಷಿಣ ಭಾಗದಲ್ಲಿ ಕಡಿಮೆ ಒತ್ತಡ ಪ್ರದೇಶಗಳು ಏರ್ಪಟ್ಟಿದ್ದು, ಇದರಿಂದಾಗಿ ದಕ್ಷಿಣ ಒಳನಾಡು ಭಾಗಗಳಲ್ಲಿ ನವೆಂಬರ್ 24 ಮತ್ತು 25ರಂದು ಮಳೆಯಾಗುವ ಸಾಧ್ಯತೆಯಿದೆ, ಹೀಗಾಗಿ ಯಲ್ಲೋ ಎಲರ್ಟ್ ಘೋಷಿಸಲಾಗಿದೆ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಕೂಡ ಸ್ವಲ್ಪ ಮಳೆಯಾಗುವ ಸಾಧ್ಯತೆಯಿದೆ ಎಂದು ಬೆಂಗಳೂರು ಹವಾಮಾನ ಇಲಾಖೆ ನಿರ್ದೇಶಕ ಸಿ ಎಸ್ ಪಾಟೀಲ್ ಹೇಳಿದ್ದಾರೆ.