ಪರವಾನಗಿ ಬಂದೂಕು ಠಾಣೆಗೆ ಒಪ್ಪಿಸೋದು ಕಡ್ಡಾಯ
– ಚುನಾವಣೆ ನೀತಿ ಸಂಹಿತೆ ಹಿನ್ನೆಲೆ ಆದೇಶ
– ಕೂಡಲೇ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಇಡಲು ಸೂಚನೆ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪೊಲೀಸ್ ಉಪ ವಿಭಾಗದ ತೀರ್ಥಹಳ್ಳಿ, ಮಾಳೂರು, ಆಗುಂಬೆ, ನಗರ, ಹೊಸನಗರ, ರಿಪ್ಪಿನಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಎಲ್ಲಾ ನಾಗರೀಕರಿಗೆ ತಿಳಿಸುವುದೇನೆಂದರೆ ಮಾನ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು ಈ ಕೂಡಲೇ ಸಾರ್ವಜನಿಕರು ತಮ್ಮಲ್ಲಿನ ಆಯುಧಗಳನ್ನು ತಂದು ಇಂದೇ ಠಾಣೆಯಲ್ಲಿ ಜಮಾ ಮಾಡಬೇಕು ತಪ್ಪಿದಲ್ಲಿ ಸದರಿಯವರ ಆಯುಧ ಪರವಾನಗಿಯನ್ನು ರದ್ದುಪಡಿಸಲಾಗುವುದು ಮತ್ತು ಆಯುಧಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ಪ್ರಕಟಣೆ ತಿಳಿಸಿದೆ.
ಚುನಾವಣೆ ನೀತಿ ಸಂಹಿತೆ ಹಿನ್ನೆಲೆ ಆಯುಧವನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಅಪರಾಧ. ಹೀಗಾಗಿ ಪರವಾನಗಿ ಹೊಂದಿರುವ ಬಂದೂಕುಗಳನ್ನು ಆಯಾ ಠಾಣೆಯಲ್ಲಿ ಜಮಾ ಮಾಡಬೇಕೆಂದು ಡಿವೈಎಸ್ಪಿ ಗಜಾನನ ವಾಮನ ಸುತಾರ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.